ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ನೋವು ೧೫೧ ಇಟ್ಟ.

      ಶಾಮೇಗೌಡರು ಉಗ್ರಾಣದಲ್ಲಿದ್ದರು.   ಊಟಕ್ಕೆ ಕುಳಿತಾಗ ಮಗನಿಗೆ ಅವರೆಂದರು:
     " ದುಡ್ಡು ಎಷ್ಟು ಬೇಕೂಂತ ಲೆಕ್ಕ ಹಾಕಿದೀಯಾ ?” 
     "ಹು೦." 
     "ನಿನ್ನ ಫೀಸು, ಮೆಲ್ಖರ್ಚಿಂದು ತಗೊoಡೋಗು . ಇನ್ನು ಒಂದು ತಿಂಗಳು
   ಬಿಟೊo್ಕಡು ನಗರಕ್ಕೆ ಒಮ್ಮೆ ನಾನು ಬರಬೈದು."
     "ಹು೦."
     "ನಿಗಾ ಇಟ್ಟು  ಓದು."
     "ಹು೦,"
     ನಾಗಮ್ಮ ಒಂದು ತುತ್ತು ಹೆಚ್ಚು ಬಡಿಸಿದರು. ಅದು ಜಾಸ್ತಿಯಾಯಿತಾದರೂ ಅತ್ತೆಯ
ಮನಸ್ಸು  ನೋಯಿಸಬಾರದೆಂದು ರಂಗಣ್ಣ ಉ೦ಡು ಎದ್ದ...
     ...ಬೆಳಗ್ಗೆ ಕರಿಯ ಚಿಕ್ಕಗೌಡರ ಟ್ರಂಕನ್ನು ಹೊರಲು ಬಂದ.
     ಹೊಸದಾಗಿ ಕೊಂಡು ತಂದಿದ್ದ ಡಾಕ್ಟರರ ಬಾ ್ಯಗಿನತ್ತ ಬೊಟ್ಟು  ಮಾಡಿ,
     “ ಅದನ್ನ ತಕೊಂಡೋಗೋದಿಲ್ವ ?” ಎಂದು ಶಾಮೇಗೌಡರು ಕೇಳಿದರು.
     "ಇಲ್ಲೇ ಇರಲಿ, ಊರಿಗೆ ಬಂದಾಗ ಉಪಯೋಗಿಸ್ತೀನಿ," ಎಂದ ರಂಗಣ್ಣ.
     ಆತ ಒಳಹೋಗಿ ಅತ್ತೆಮ್ಮನಿಗೆ ಹೇಳಿ, ತಂಗಿಯೊಡನೆ, "ಓಗ್ಬರ್ತೀನಿ, ಸುಬ್ಬಿ," ಎಂದ.
    " ಊ೦," ಎ೦ದಳಾಕೆ.
     ಅಂಗಳ ದಾಟಿ ನಾಲ್ಕು ಹೆಜ್ಜೆ ಬಂದು ಮಗನನ್ನು ಶಾಮೇಗೌಡರು ಕಳುಹಿಕೊಟ್ಟರು.
     ಆ ದಾರಿಯಲ್ಲಿ ಆ ದಿನ ಹತ್ತು ನಿಮಿಷಗಳ ಅಂತರದಲ್ಲಿ ನಡೆದು ಹೋದ ಜೋಡಿಗಳು
ಎರಡು :
     ಪದ್ಮನಾಭ ಹಾಗೂ ಆಳು ಬೀರ:  ರಂಗಣ್ಣ  ಮತ್ತು ಕರಿಯ .
     ಟಾರ್  ರಸ್ತೆಯಲ್ಲಿ ಚಿಕ್ಕ ಧಣಿಗಳು ಒಬ್ಬರೊಡನೊಬ್ಬರು ಮಾತನಾಡಲಿಲ್ಲ, ಅವರನ್ನು ಅನುಸರಿಸಿ ಸೇವಕರೂ ಪರಸ್ಪರ ಮಾತುಕತೆ ಆಡಲಿಲ್ಲ. ಆಳುಗಳು ಬಸ್ ಹೊರಡುವವರೆಗೂ  ಕಣ್ನೋಟಗಳ ವಿನಿಮಯದಿಂದಲೇ ತೃಪ್ತರಾಗಬೇಕಾಯಿತು.
     ಬಸ್ಸಿನೊಳಕ್ಕೆ ಪ್ರವೇಶ ದೊರೆಯಿತಾದರೂ, ಸೀಟು ಸಿಕ್ಕಿದುದು ಮೊದಲು ಒಳಹೊಕ್ಕ ರಂಗಣ್ಣನಿಗೆ.     ಪದ್ಮನಾಭ ಸೀಟುಗಳ ನಡುವಣ ದಾರಿಯಲ್ಲಿ ಮುಂದೆ ಹೋದನಾದರೂ ನಗರದವರೆಗೂ ನಿಂತಿರಬೇಕಾಯಿತು.
     ನಗರದಲ್ಲಿ ಬಸ್ಸಿನಿಂದಿಳಿದ ರಂಗಣ್ಣ ಹಾಗೂ ಪದ್ಮನಾಭ, ಒಬ್ಬರ ಮುಖವನ್ನೊಬ್ಬರು ನೋಡದೆ ಬೇರೆ ಬೇರೆ ದಾರಿ ಹಿಡಿದರು.
                                
                               ೨೦

ಬೇಸಗೆಯ ದೀಪದಲ್ಲಿ ಎಣ್ಣೆ ತೀರುತ್ತ ಬಂದಿತ್ತು, ಬಿಸಿಲಿನ ಬತ್ತಿ, ಆರುವುದಕ್ಕೆ ಮುನ್ನ