ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೨ ನೋವು

      ಅತಿ ಹೆಚ್ಚು ಪ್ರಖರತೆಯಿಂದ ನಾಲ್ಕು ದಿನ ಉರಿಯಿತು.
           ಆ ಅವಧಿಯಲ್ಲಿ ಶ್ರೀನಿವಾಸಯ್ಯ ಮತ್ತೊಮ್ಮೆ ನಗರಕ್ಕೆ ಹೋದರು, ಗೋವಿಂದನೊಡನೆ. 
      ಅಲ್ಲಿ ಪದ್ಮನಾಭ ಅವರನ್ನು ಕೂಡಿಕೊಂಡ. 
           "ಒಂದೆರಡು ದಿನ ನಮ್ಮಲ್ಲಿಯೇ ಇರಬಹುದಲ್ಲ," ಎಂದರು ವಿಷ್ಟುಮನೂರ್ತಿ.
           "ಅದು ಹಾಗಾಗುತ್ತೆ?" ಎಂದು ಸಂಕೋಚಪಟುಕೊಳ್ಳುತ್ತ ಅಂದರು ಶ್ರೀನಿವಾಸಯ್ಯ.
           ದೊಡ್ಡಮ್ಮ ಎರಡೆರಡು ಸಲ ಹೇಳಿದ್ದರು : 
           "ನೀನು ಹುಡುಗರನ್ನ ಕರಕೊಂಡು ಹೋಗ್ರಿರೋದು ಕನ್ಯೆ ನೋಡೋದಕ್ಕೆ. ವಿಷ್ಟು 
      ಮೂರ್ತಿಗಳ ಮನೇಲಾಗಲಿ, ಮೋಹನರಾಯರ ಮನೇಲಾಗಲೀ ಉಳಕೋಬಾರು."
           "ಪದ್ಮ, ಇವತ್ತೊಂದು ದಿವಸ ಇಲ್ಲಿರ್ತೀವಿ . ನಿನ್ನ ರೂಮ್ನಲ್ಲೇ ಚೀಲ ಇಡ್ರಿಡ್ತೀವಿ," 
      ಎಂದು ಗೋವಿಂದ ತಮ್ಮನಿಗೆ ತಿಳಿಸಿ, ಬದಲಿ ಏರ್ಪಾಟನ್ನು ಮಾಡಿದ.
           ವಿಷುಮನೂರ್ತಿಯವರ ಮನೆಗೆ ಗೋವಿಂದ ಹೊಸಬನಲ್ಲವಾದರೂ ಪದ್ಮನಾಭ
      ಅಲ್ಲಿಗೆ ಕಾಲಿಟ್ಟುದು ಅದೇ ಮೊದಲು.
           ಮೂವರು ಹೋಗಬಾರದೆಂದು ಪದ್ಮನಾಭನ ಒಬ್ಬ ಗೆಳೆಯನೂ ಜತೆಯಾದ. 
      ಕಾಮಾಕ್ಷಿಯನ್ನು ನೋಡಲು ಬಂದರೆಂದು ಅಲ್ಲಿ ಸಡಗರವೋ ಸಡಗರ.
           ನಾಗವೇಣಿ ತಾಯಿಯನ್ನು ಕೀಟಲೆ ಮಾಡಿದಳು: 
           "ಇದೇನಮ್ಮ ನೋಡೋದು, ಅಂದ್ರೆ ? ಇಷ್ಟು ದಿವಸ ಗೋವಿಂದರಾಯರು 
      ನೋಡೋ ಇಲ್ವೆ ಅಕ್ಕನ್ನ ?" 
           ಪದ್ಮನಾಭನನ್ನ ಮಾತ್ರ ಮೂವರು ಹುಡುಗಿಯರೂ ಕುತೂಹಲದಿಂದ ನೋಡಿದರು. 
           ಗಣೇಶ ಭವನದಿಂದ ಬಿಸಿ ತಿಂಡಿಗಳು. ಸತ್ಕಾರ ಸಮರ್ಪಕವಾಗಿಯೇ ನಡೆಯಿತು. 
           ತಂದೆ ಮಕ್ಕಳಿಗೆ ಎದುರಾಗಿ ಹಾಸಿದ್ದ ರತ್ನಗಂಬಳಿಯ ಮೇಲೆ, ಅಲಂಕೃತೆಯಾದ ಕಾಮಾಕ್ಷಿ 
      ಬಂದು ಕುಳಿತಳು. ಬಲ ಮಗ್ಗುಲಲ್ಲಿ ಕಲಕಲತೆಯೂ ಎಡ ಮಗ್ಗುಲಲ್ಲಿ ನಾಗವೇಣಿಯೂ 
      ಅಕ್ಕನಿಗೆ ಬೆಂಬಲಿಗರಾದರು.
           ಆದರೆ ಕಾಮಾಕ್ಷಿಗೆ ಅಂತಹ ಬೆಂಬಲದ ಅಗತ್ಯ ಇದ್ದರಲ್ಲವೆ ? ಗೋವಿಂದನೊಬ್ಬನೇ 
      ತನ್ನನ್ನು ನೋಡುತ್ತಿದ್ದಾನೆ ಎಂಬುದನ್ನು ಖಚಿತಪಡಿಸಿಕೊಂಡು ಒಮ್ಮೆ ಆಕೆ ಕಣ್ಣು ಮಿಟುಕಿಸಿ 
      ದಳು ಕೂಡಾ. ಅದು ಪದ್ಮನಾಭನ ಅಲೆಯುತ್ತಿದ್ದ ಕಣ್ಣಿಗೆ ಬಿತು. ಮರ್ಯಾದೆಯ 
      ಕಟ್ಟುಪಾಡುಗಳಿಗೆ ಒಳಗಾಗಿಯೇ ಅವನ ದೃಷ್ಟಿ ವಿಹಾರ ಕೈಕೊಂಡಿದ್ದರೂ, ಕನಕಲತೆಯ 
      ಸಮಿಾಪಕ್ಕೆ ಸುಳಿದಾಗ ಅದು ಮೈಮರೆಯಿತು. ಇವಳೀಗ ಹೆಣ್ಣು – ಎನಿಸಿತು ಆತನಿಗೆ. 
      ಎಷ್ಟು ಒಳ್ಳೆಯ ಹಾಸಿಗೆ ! ತನ್ನ ಮೂರರಷ್ಟಿರಬಹುದೇನೋ ಇವಳ ಸುತ್ತಳತೆ. 
           "ಇವರಿಗೆ ಸಂಗೀತದ ಮೇಸ್ಟನ್ನಿಟ್ಟು ಪಾಠ ಹೇಳಿಸಿದೇನೆ," ಎಂದರು ವಿಷ್ಣುಮೂರ್ತಿ 
      ಹೆಮ್ಮೆಯಿಂದ.
           ಮಗಳ ಕಡೆ ನೋಡಿ, "ಒಂದೆರಡು ದೇವರನಾಮ ಹೇಳಮ್ಮ, ಕಾಮಾಕ್ಷಿ." ಎಂದೂ 
      ನುಡಿದರು.
           ಕಾಮಾಕ್ಷಿಯ ಮುಖ ಕೆಂಪಗಾಯಿತು. ತಂದೆಯನ್ನು ಅವಳು ದುರದುರನೆ ದಿಟ್ಟಿಸಿದಳು. 
           ತನ್ನ ತಂದೆ ಸುಮ್ಮನಿದ್ದುದನ್ನು ಕಂಡು ಗಾಬರಿಯಾದ ಗೋವಿಂದ, “ಬೇಡಿ, ಬೇಡಿ,”