ಈ ಪುಟವನ್ನು ಪರಿಶೀಲಿಸಲಾಗಿಲ್ಲ.




                                  ನೋವು                    ೧೫೩
        ಎ೦ದ.
            ಶ್ರೀನಿವಾಸಯ್ಯ ಎಚ್ಚತು, "ಹೌದು, ಯಾಕೆ ಅದೆಲ್ಲ ?" ಎಂದರು. 
            "ನಿಮ್ಮಿಷ್ಟ ನಿಮ್ಮಿಷ್ಟ," ಎಂದು ನುಡಿದರು ವಿಷ್ಣುಮೂರ್ತಿ. 
            "ಅಣ್ಣ, ದೇವರನಾಮ ನಾನು ಹೆಳ್ಳಾ ?" ಎನ್ನೆಬೇಕೆ ನಾಗವೇಣಿ ? 
            ಎಲ್ಲರೂ ನಕ್ಕರು. 
            "ನಿನ್ನನ್ನ ನೋಡೋಕೆ ಬರ್ತಾರಲ್ಲ , ಆಗ ಹಾಡುವಿಯಂತೆ ಮಗೂ." ಎಂದರು 
        ಶ್ರೀನಿವಾಸಯ್ಯ.
            ನಾಗವೇಣಿಗೆ ಅವಮಾನವಾಯಿತು. ಅವಳು ಥಟನೆದ್ದು ದಡದಡನೆ ಹೊರಟು 
        ಹೋದಳು. 
            ಗಂಡಸರೆಲ್ಲ ಮತ್ತೊಮ್ಮೆ ನಕ್ಕರು.
            "ನಿಶ್ಚಿತಾರ್ಥಕ್ಕೆ ನಮ್ಮ ಹಳ್ಳಿಗೆ ಮೋಹನರಾಯರ ಜತೆ ತಾವು ಯಾವಾಗ ಬರ್ತೀರೋ 
        ತಿಳಿಸ್ಬೇಕು," ಎಂದರು ಶ್ರೀನಿವಾಸಯ್ಯ,
            ವಿಷ್ಣುಮೂರ್ತಿ ಉತ್ತರಿಸಿದರು :
            "ಈಗ ಬೇಕಾದರೆ ಈಗ. ನಿಮ್ಮ ಜತೇಲೇ  ಬರೋದಕ್ಕೂ ಸಿದ್ಧ!" 
            "ಹಹ್ಹ! ಮೋಹನರಾಯರಲ್ಲಿಗೆ ಹೋಗಿ ಆ ಕೆಲಸವನ್ನೂ ಇಷ್ಟು ಮುಗಿಸೋಣ. 
        ಆಮೇಲೆ ಪಂಚಾಂಗ ನೋಡಿ ಒಂದು ಪ್ರಶಸ್ತ ದಿನ ಗೊತು ಮಾಡಿದರಾಯ್ತು."
            "ನಿಮ್ಮಿಷ್ಟ, ನಿಮ್ಮಿಷ್ಟ—ಅಂದೆ. ಟ್ಯಾಕ್ಸಿ ತರಿಸ್ಲೆ ?" 
            "ನೀವೂ ಬನ್ನಿ ." 
            " ಐದು ಜನ ಆಗ್ತೀವಿ. ಸರಿ. ನಮ್ಮ ಸ್ನೇಹಿತರದೊಂದು ಅಂಬಾಸಡರ್ ಕಾರಿದೆ. 
        ಫೋನ್ ಮಾಡಿ ತರಿಸ್ತೀನಿ." 
            ...ನಾಲ್ಕು ಗಂಟೆಗೆ ಬರುತ್ತೇವೆ ಎಂದು ತಿಳಿಸಿದ್ದರೂ ಶ್ರೀನಿವಾಸಯ್ಯ ಮತ್ತು 
        ಬಳಗದವರು ಅರ್ಧ ಘಂಟೆ ತಡವಾಗಿ ಮೋಹನರಾಯರ ಮನೆಯನ್ನು ತಲಪಿದರು.
            ಕಾರಿನಿಂದ ಇಳಿದೊಡನೆಯೇ ಮೋಹನರಾಯರೊಡನೆ ವಿಷ್ಣುಮೂರ್ತಿ ಅಂದರು; 
            "ಇವರು ಲೇಟಾದ್ದಕ್ಕೆ ನಾನು ಕಾರಣ. ಶಿಕ್ಷೆ ಏನಿದ್ದರೂ ನನಗೆ ವಿಧಿಸ್ಬೇಕು."
            "ಏನೂ ಪರವಾಯಿಲ್ಲ," ಎಂದರು ಮೋಹನರಾಯರು, ಅತಿಥಿಗಳನ್ನು ಇಲ್ಲಿಗೆ ತಲಪಿಸಿ 
        ಈತ ಪ್ರಾಯಶ: ಹೊರಡಬಹುದು ಎಂದು ಯೋಚಿಸುತ್ತ.
            "ಇನ್ನೊಂದು ವಿಷಯ. ಆಮಂತ್ರಣವಿಲ್ಲದೆಯೇ ಇವರ ಜತೆ ಬಂದಿದೇನೆ. ಇದು  
        ನನ್ನ ಎರಡನೇ ತಪ್ಪು." 
            "ಏನೂ ಪರವಾಯಿಲ್ಲ," ಎಂದರು ಮೋಹನರಾಯರು ಇದಕ್ಕೂ ಮಾಡಿರುವ 
        ತಿ೦ಡಿಯನ್ನೇ ಹಂಚಿದರಾಯಿತು ಎಂದು ಭಾವಿಸುತ್ತ,
            ಪದ್ಮನಾಭ ಯಾರು ಎಂಬುದನ್ನು ಕೇಳಿ ತಿಳಿದರು ಮೋಹನರಾಯರು. ಸದ್ಯಃ 
        ಪುಢಾರಿ ಗೋವಿಂದನಿಗೂ  ಇವನಿಗೂ ಹೋಲಿಕೆ ಇಲ್ಲ-ಎಂದು ಸಮಾಧಾನದ ನಿಟ್ಟುಸಿರು  
        ಬಿಟ್ಟರು. ಒಳಗಡೆ ಹೋಗಿ, ಇಣಿಕಿ ನೋಡುತ್ತ ನಿಂತಿದ್ದ ಹೆಂಡತಿಗೂ ಮಕ್ಕಳಿಗೂ "ವುಲ್ಲನ್ 
        ಪ್ಯಾಂಟು, ಬುಶ್ ಶರ್ಟು ಹಾಕ್ಕೊಂಡಿದ್ದಾನಲ್ಲ ಕೆಂಪಗಿನ ಹುಡುಗ, ಅವನೇ," ಎಂದರು.