ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು ೧೫೫

       ." ಮದುವೆ ನಿಶ್ಚಯವಾದ್ಮೇಲೆ ಹುಡುಗ ಹುಡುಗಿ ಕಲೆತು ಮಾತಾಡೋದು ತಪ್ಪಲ್ಲ. 
   ಇವತ್ತಲ್ದೆ ಹೋದ್ರೆ ಇನ್ನೊಂದು ದಿವಸ.  ಪದ್ಮನಾಭರಾವ್ ಹಾಸ್ಟೆಲ್ನಲ್ಲೇ ಇರತರಲ್ಲ. 
   ಪುರಸೊತ್ತಾದಾಗ ತಿಂಡಿಗೋ ಊಟಕ್ಕೋ ನಮ್ಮಲ್ಲಿಗೆ ಬಂದರಾಯ್ತು."
       " ಸರಿ, ಸರಿ," ಎಂದರು ಶ್ರಿನಿವಾಸಯ್ಯ.                                 
       ವಿಷ್ಣುಮೂರ್ತಿ ಅಂದರು :                                                
       " ತಲೆಬಾಗಿದೆ;  ನನ್ನ ಅಪೀಲಿಲ್ಲ! "                                              
       ಆರತಿಯ ತಾಯಿ ಮಗಳನ್ನು ಒಳಕ್ಕೆ ಕರೆದೊಯ್ದರು.  ವಧುಪರೀಕ್ಷೆ ಅಲ್ಲಿಗೆ          
   ಮುಗಿದಂತಾಯಿತು.                                           
       ಮೋಹನರಾಯರೀಗ ವರಪರೀಕ್ಷೆ ನಡೆಸಿದರು. ಪದ್ಮನಾಭನ ಅಭ್ಯಾಸದ ವಿಷಯಗಳು, 
   ಅವರ ಪ್ರಾಧ್ಯಾಪಕರು,  ವಿದ್ಯಾರ್ಥಿನಿಲಯದಲ್ಲಿರುವ ಅನುಕೂಲಗಳು ...  ಪದ್ಮನಾಭ  
   ಎಲ್ಲ ಪ್ರಶ್ನೆಗಳನ್ನು ದಿಟ್ಟತನದಿಂದ ಉತ್ತರಿಸಿದ. ಅಲ್ಲಿಗೆ ಅವರೊಡನೆ ಬಂದಿದ್ದ ಪದ್ಮನ 
   ಗೆಳೆಯನ ಕುಲಗೋತ್ರಗಳನ್ನೂ ಮೋಹನರಾಯರು ವಿಚಾರಿಸಿಕೊಂಡರು. 
       ಪದ್ಮನಾಭನ ಬಗೆಗೆ "ಹುಡುಗ ಪರವಾಗಿಲ್ಲ" ಎಂದು ಮೋಹನರಾಯರು ಮನಸಿ 
   ನೊಳಗೇ ಅಂದುಕೊಂಡರೂ, ಬಹಿರಂಗವಾಗಿ ಏನನ್ನೂ ಹೇಳಲಿಲ್ಲ...
       ಮತ್ತೆ ಕೆಲ ನಿಮಿಷಗಳಾದ ಮೇಲೆ ಬಂದವರು ಎದ್ದರು.                              
       " ಕಣಿವೇಹಳ್ಳಿಗೆ ನಾನೊಮ್ಮೆ ಬರಬೇಕಲ್ಲ ಶ್ರಿನಿವಾಸಯ್ಯನವರೇ," ಎಂದರು ಮೋಹನ 
   ರಾಯರು
       "ನಿಶ್ಚಿತಾರ್ಥಕ್ಕೆ-ನಿಶ್ಚಿತಾರ್ಥಕ್ಕೆ !    ಒಟ್ಟಿಗೇ ಹೋಗೋಣ ಸ್ವಾಮಿ," ಎಂದರು
   ವಿಷ್ಣುಮೂರ್ತಿ.
       ಶ್ರಿನಿವಾಸಯ್ಯನವರೆಂದರು  :                                              
       " ಯಾವತ್ತು ಯೋಗ್ಯ ಅಂತ ಊರಿಗೆ ಹೋದ್ಮೇಲೆ ತಿಳಿಸ್ತೀನಿ."                 
       ತಮ್ಮ ತಾಯಿಯನ್ನು ಕೇಳಿ ತಿಳಿಸುತೇನೆ-ಎನ್ನಲಿಲ್ಲ ಅವರು, ಪ್ರಕಾಶವಾಗಿ.              
       ... ಆ ರಾತ್ರೆಯನ್ನು ಶ್ರಿನಿವಾಸಯ್ಯನೊ ಗೋವಿಂದನೂ ಪದ್ಮನಾಭನ ಕೊಠಡಿಯಲ್ಲಿ    
   ಕಳೆದರು.                                                             
       ಬೆಳಗ್ಗೆ ಅವರು ಮುಖ ತೊಳೆಯುವ ವೇಳೆಗೆ ಗಜಾನನ ಸೈಕಲಿನ ಮೇಲೆ ಬಂದ. 
   ಎಲೆಯಲ್ಲಿ ಕಟ್ಟಿದ್ದ ಹತ್ತು ಹದಿನಾರು ಇಡ್ಲಿ, ಗಟ್ಟಿ ಚಟ್ನಿ. ದೊಡ್ಡ ಫ್ಲಾಸ್ಕಿನಲ್ಲಿ ಕಾಫಿ...
       ವಿಷ‍್ಣುಮೂರ್ತಿ ಕಳುಹಿಸಿಕೊಟ್ಟಿದ್ದರು.                                         
       " ತಗೊಳ್ಳಿ ಅಣ್ಣಯ್ಯ, ಎಂದ ಗೋವಿಂದ,  ವಿಷ್ಣುಮೂರ್ತಿಗಳ ಭಾವೀ ಅಳಿಯ. 
       ಅವನ ಸೂಚನೆ ಕೃತಿಯಾಗುವಷ್ಟರಲ್ಲಿ ಸ್ವತಃ ವಿಷುಮೂರ್ತಿಗಳೇ ಬಂದರು.       
       "ಬಸ್ ಸ್ಟ್ಯಾಂಡಿಗೆ ತಾನೆ? ಕಾರ್ ತಂದಿದೇನೆ. ಅಲ್ಲಿ ಬಿಡ್ತೀನಿ,” ಎಂದರು.            
       " ರಾಜ ಆತಿಥ್ಯವಾಯಿತಪ್ಪ ನಿಮ್ಮದು," ಎಂದು ಶ್ರಿನಿವಾಸಯ್ಯ ಹೃತ್ಪೂರ್ವಕವಾಗಿ 
   ಆಡಿದರು.                                                         
      ದಾರಿಯಲ್ಲಿ ವಿಷ‍್ಣುಮೂರ್ತಿ ಅಂದರು :                            
      “ನಿಶ್ಚಿತಾರ್ಥಕ್ಕೆ ಬರುತೇವಲ್ಲ, ಅದೇ ದಿವಸ ಹೋಟ್ಲು ಉದ‍್ಘಾಟನೇನೂ ಆದರೆ