ಈ ಪುಟವನ್ನು ಪರಿಶೀಲಿಸಲಾಗಿಲ್ಲ.



     ೧೫೬                     ನೋವು
     ಚೆನ್ನಾಗಿರುತ‍್ತೇಂತ ಗಜಾನನ ಹೇಳ್ತಾನೆ."
          " ಆಗಬಹುದಲ್ಲ."
          " ಹಾಗಾದರೆ ಈ ವಾರವೇ ಸಂಸಾರಸಮೇತನಾಗಿ ಹೋಟ್ಲು ಸಾಮಾನೂ ತಕ್ಕೊಂಡು
     ಗಜಾನನ ಬಂದ್ಬಿಡ್ಲಿ," ಎಂದ ಗೋವಿಂದ. 
          ವಿಷ್ಣುಮೂರ್ತಿ ಭಾವೀ ಅಳಿಯನ ಕಡೆ ನೋಡಿ, " ಹಾಗೇ ಮಾಡೋಣ, ಗೋವಿಂದ
     ರಾವ್," ಎಂದರು.
          ಯೋಚಿಸುತ್ತಲಿದ್ದ ಶ್ರಿನಿವಾಸಯ್ಯ ಅರ್ಧ ಸ್ವಗತ ಅಂದರು : 
          "ಏನಿದ್ದರೂ ನಗರ ನಗರವೇ: ಹಳ್ಳಿ ಹ‌ಳ್ಳೀನೆ. ಒಂದು ಕಾಗದ ಕೂಡಾ ಬರೆಯೋ ಹಾಗಿಲ್ಲ.
     ಪ್ರತಿಯೊಂದಕ್ಕೂ ಗೋವಿಂದನೋ ಇನ್ಯಾರೋ ಖುದ್ದಾಗಿ ಬರಬೇಕ,."
          ವಿಷ್ಟುಮೂರ್ತಿ ಅವರತ್ತ ಹೊರಳಿ ಅಂದರು :
         " ಒಮ್ಮೊಮ್ಮೆ ಆಶ್ವರ್ಯ ಅನಿಸುತ್ತೆ. ಇಷ್ಟು ದೊಡ್ಡ ಸಿಟಿ ಹತ್ರ ಇದ್ರೂನೂ
     ನಮೂರಲ್ಲಿ ಲೈಟಿಲ್ಲ,ಪೋಸ್ಟಾಫೀಸಿಲ್ಲ,ಆಸ್ಪತ್ರೆ ಇಲ್ಲ,ಬಸ್ಸಿಲ್ಲ.ಇದನ್ನೆಲ್ಲಾ ಕಣಿವೇಹಳ್ಳಿ
     ಯವರು ಹ್ಯಾಗೆ ಸಹಿಸ್ಕೊಂಡಿದಾರೆ ಅಂತ ?"
         " ಬಾವಿಯೊಳಗಿನ ಕಪ್ಪೆಗೆ ಹೊರಗಿನ ಯೋಚನೆ ಇಲ್ಲ ವಿಷ್ಟುಮೂರ್ತಿಗಳೇ." 
        " ಏನೇ ಹೇಳಿ, ನಿಮ್ಮ ಪಟೇಲರು ನೀವು ಎಲ್ಲಾ ಸೇರ‍್ಕೋಂಡು ಒಂದಿಷ್ಟು ಸರಕಾರದ 
     ಕಿವಿ ಹಿಂಡ್ಬೇಕಪ್ಪ."
        " ಹೌದು, ಮಾಡ್ಬೇಕಾದ್ದೇ.ಇದಾನಲ್ಲ ನಮ್ಮ ಗೋವಿಂದ. ಇಂಥಾದ್ದೆಲ್ಲ ಅವನಿಗೆ
     ಬಹಳ ಇಷ್ಟ."
         ಗೋವಿಂದ ಮಾತು ಸೇರಿಸಿದ:
       " ಹೆಜ್ಜೆ ಹೆಜ್ಜೆಗೂ ಅಡ್ಡಿ ಮಾಡದೇ ಇದ್ರೆ ಏನು ಬೇಕಾದರೂ ಸಾಧಿಸಬಹುದು." 
         ಮಗನ ಕಡೆ ತಿರುಗಿ ಶ್ರೀನಿವಾಸಯ್ಯ, "ಯಾರು ಮಾಡ್ತಾರೆ ಅಡ್ಡಿ?" ಎಂದು ಕೇಳಿದರು.
         ಗೋವಿಂದ ಆ ಪ್ರಶ್ನೆಗೆ ನೇರ ಉತ್ತರವೀಯದೆ, ವಿಷ್ಟುಮೂರ್ತಿಯವರತ್ತ ನೋಡಿ,
    " ನಮ್ಮ ಅಣ್ಣಯ್ಯನಿಗೂ ಪಟೇಲರಿಗೂ ಕಂಠಸ್ಯಗಳಸ್ಯ,"–ಎಂದ.
        " ಇರಬೇಕಾದ್ದೇ. ಇರಬೇಕಾದ್ದೇ,"–ಎಂದರು ವಿಷ್ಟುಮೂರ್ತಿ.
          ಶ್ರೀನಿವಾಸಯ್ಯನವರಿಗೆ ಗೋವಿಂದನ ಮಾತು ರುಚಿಸಲಿಲ್ಲ. ಆದರೆ, ಬಸ್ ನಿಲ್ದಾಣ
      ವನ್ನು ಕಾರು ಸಮಿಪಿಸಿದುದರಿಂದ ಅವರೇನೆನ್ನೂ ಹೇಳಲಿಲ್ಲ.
         "ನಿಮಗೆ ಕೆಲಸವಿರುತ್ತೆ. ನೀವು ಹೊರಡಿ, ವಿಷ್ಟುಮೂರ್ತಿಗಳೇ,"–ಎಂದು
      ಶ್ರೀನಿವಾಸಯ್ಯ ನುಡಿದೆರೂ, ಅವರೂ ಗೋವಿಂದನೂ ಬಸ್ಸನ್ನೇರುವವರೆಗೂ ವಿಷ್ಟುಮೂರ್ತಿ
      ಅಲ್ಲಿಯೇ ಇದ್ದರು.
          ಕಂಡಕ್ಟರ್ ಬೆಲ್ ಹೊಡೆದುದರ ಜತೆಗೆ  "ರೈಟ್" ಎಂದು ಕಿರಿಚಿಕೊಳ್ಳುತ್ತಿದ್ದಂತೆ
      ವಿಷ್ಟುಮೂರ್ತಿ ಅಂದರು: 
          "ನಿಶ್ಚಿತಾರ್ಥದ ದಿವಸ ಗೊತ್ತುಮಾಡಿ ತಿಳಿಸ್ಬಿಡಿ, ನಮಸ್ಕಾರ."
          " ಹ್ಞ-ಹ್ಞ-ನಮಸ್ಕಾರ," ಎಂದರು,ಶ್ರೀನಿವಾಸಯ್ಯ .
              *            *          *           *