ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಬೇರೆ ಅವನ ಮಕ್ಕಳೂ ತೊಗೊಳೋದಿಲ್ಲ, ವಧುವಿನ ಮೈಮೇಲೆ ಬಂಗಾರ ಹಾಕಿದರೆ ಅದು ಅವಳ ಸೊತ್ತಾಗಿಯೇ ಉಳಿಯುತ್ತೆ, ಅಷ್ಟೆ." ಮೋಹನರಾಯರು ವಿಷ್ಣುಮೂರ್ತಿಯವರಿಗೆ ಅಂದರು : * ಹಿರಿಯರ ಅಭಿಪ್ರಾಯ ಹೇಗಿದೆಯೋ ಹಾಗೆ ನಡಕೊಳ್ಳೋಣ ಮೂರ್ತಿಗಳೇ.” ತಾವು ಕುಳಿತಿದ್ದ ಸ್ಥಳಕ್ಕೆ ಮರಳಿ ವಿಷ್ಣುಮೂರ್ತಿ ನುಡಿದರು : * ಆಗಲಿ, ಹಾಗೆಯೇ, ಆಗಲಿ." ಶಾಸ್ತ್ರಿಗಳು ಲಗ್ನಪತ್ರಿಕೆಗಳನ್ನು ಬರೆದು ಮುಗಿಸುವ ವೇಳೆಗೆ ಮಳೆ ಸುರಿಯತೊಡಗಿತು. " ಹೋಟೆಲು ಶುರು ಮಾಡೋ ದಿವಸವೇ ಹೀಗಾಯಿತಲ್ಲಾ,"–ಎಂದು ಗಜಾನನ ಗೋವಿಂದನೊಡನೆ ತನ್ನ ಸಂಕಟವನ್ನು ತೋಡಿಕೊಂಡ. - ಗೋಪಾಲ ಬ೦ದ. ಊಟವಾಯಿತು. - ಮೊದಲ ಆ ಭಾರೀ ಮಳೆಗೆ ಮನೆ ಮೂರು ನಾಲ್ಕು ಕಡೆ ಸೋರತೊಡಗಿತು. ಪದ್ಮನಾಭನ ಕೊಠಡಿಯಲ್ಲಿ ಹಾಸಿಗೆಗಳನ್ನು ಹಾಸಿದರು, ಬಂದವರು ವಿಶ್ರಾ೦ತಿ ಪಡೆಯಲೆಂದು. - - - ದೃಷ್ಟಿ ಹರಿಯುವವರೆಗೂ ನೀರು, ನೀರು ಸುರಿಯುವ ಮಳೆಯ ಜೋರೋ ಸದ್ದು ಹೊರಗೆ ಗಟ್ಟಿಯಾಗಿ ಮಾತಾಡದಿದ್ದರೆ ಯಾರಿಗೆ ಏನೂ ಕೇಳಿಸುವಂತಿರಲಿಲ್ಲ. ಆ ದಿನವೇ ಹಿಂತಿರುಗಬೇಕು ಎಂದುಕೊಂಡಿದ್ದರು ಮೋಹನರಾಯರು. ಈಗ ದಾರಿ? ಅವರ ಮುಖ ನಿಸ್ತೇಜವಾಯಿತು. - ವಿಷ್ಣುಮೂರ್ತಿ ಸ್ಥಿರ ಮ೦ದಹಾಸದ ಮುಖವಾಡ ಧರಿಸಿದರು. ಆದರೆ, ಶ್ರೀನಿವಾಸಯ್ಯನವರ ಮನೆಯವರಲ್ಲಿ ಮಾತ್ರ ಮಳೆ ಬಂತೆಂದು ಸಂಭ್ರಮ, ಗೋವಿಂದನೂ ಅದಕ್ಕೆ ಹೊರತಾಗಿರಲಿಲ್ಲ. ಅವರು ಮಲಗಿದ್ದೆಡೆ ಇದ್ದಕ್ಕಿದ್ದಂತೆ ಹಂಚಿನಿಂದ ನೀರು ಸುರಿಯತೊಡಗಿತು. ಹಾಸಿಗೆಗಳನ್ನು ಸರಿಸಿದರು. ಬೀಳುತ್ತಿದ್ದ ನೀರನ್ನು ಹಿಡಿಯಲೆಂದು ಭಾಗೀರಥಿ ಒಂದು ಪಾತ್ರೆ ತಂದಿಟ್ಟಳು, ಸಂತಸ ಕುಣಿಯುತ್ತಿತು ಅವಳ ಮುಖದಮೇಲೆ. ಪಾತ್ರೆಗೆ ನೀರು ತೊಟ್ಟಿಕ್ಕಿದಾಗಲೆಲ್ಲ ತಳಂಕೆಂದು ಸದ್ದಾಗಿ ಹನಿಗಳು ಆ ಕಡೆಗೂ ಈ ಕಡೆಗೂ ಜಿಗಿದುವು. ಅದನ್ನೇ ನೋಡುತ್ತ ಮಲಗಿದ ಮೋಹನರಾಯರ ಮಗ ತಂದೆಯತ್ತ ಹೊರಳಿ ಕೇಳಿದ: "ಮದುವೆ ಆದ್ಮೇಲೆ ಅಕ್ಕ ಇದೇ ಮನೇಲಾ ಇರೋದು?"

  • ನಿನ್ನ ಹೋಟ್ಲಿನ ಉದ್ಘಾಟನೆಯಾಯ್ತೂಂತ ಪೇಪರ್ನಲ್ಲಿ ಹಾಕ್ಸೋಣ ಗಜಾನನ. ವಂದನಾರ್ಪಣೆ ನಾನು ಮಾಡ್ತೀನಿ," ಎಂದಿದ್ದ ಗೋವಿಂದ.