ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ನೋವು

      ತಂದೆ ಹೊಸಳ್ಳಿಗೆ ಹೋದವರು ಸಂಜೆಗೆ ಮರಳಬಹುದು. ಅವರು ಮನೆಯಲ್ಲಿಲ್ಲ ಅಂತ ಇಷ್ಟು ಧೈರ್ಯ ಸುಭದ್ರೆಗೆ .
   ತಂದೆ ಕನಲಿದ ರುದ್ರನಾದರೆ ಮರಗಿಡಗಳೂ ನಡುಗಬೇಕು. ಈ ಪ್ರಕರಣ ಅವರ ತನಕ ಹೋಗದೆಯೇ ಮುಕ್ತಾಯವಾದರೆ ಚೆನ್ನು. ಆಗದೇ ಇದ್ದರೆ, ಮುಂದಿನ ಮಾತು ಬೇರೆ,ನೋಡೋಣ.
  "ಅಂಬಾ "......
  –ಸಮಿಾಪದಿಂದಲೇ ಒಂದು ಹಸು ತನ್ನ ಜೋಡಿಯನ್ನು ಕರೆಯಿತು.
   ರಂಗಣ್ಣ ಕತ್ತು ಹೊರಳಿಸಿ ಅದನ್ನು ದಿಟ್ಟಿಸಿದ. ಕಪಿಲೆ, ಶ್ರಿನಿವಾಸಯ್ಯನವರ ಮನೆಯದೇ ಇರಬೇಕು. ಅಲೆಯುತ್ತ ಒಂದೇ ಬಂದುಬಿಟ್ಟಿದೆ. ಅಗೋ, ಕೆಳಕ್ಕೆ ಐದಾರು ಹಸು, ಎತ್ತುಗಳು ಮೇಯುತ್ತಿವೆ. ಅವೂ ಅವರವೇ. ದನಕಾಯುವ ಹುಡುಗ ಕಪಿಲೆಯನ್ನು ಕರೆಯುತ್ತಿದ್ದಾನೆ. 
    ಆ ಹಸು ಏಕೆ "ಅಂಬಾ" ಎಂದಿತು? ಪದ್ಮನನ್ನು ದೂರದಿಂದ ಕಂಡು ಗುರುತು ಹಿಡಿಯಿತೊ ಕಡೆಗೆ?
    ಇರಲಾರದು, ಪದ್ಮನಾಭನಿಗೆ ಹಸುಗಳ ಮೇಲೆ ಪ್ರೀತಿ ಇಲ್ಲ.  ಆತ ಹಳ್ಳಿಗೆ ಬಂದರೂ ಅತಿಥಿ ಇದ್ದ ಹಾಗೆ. 
    ಕಣಿವೇಹಳ್ಳಿಯಲ್ಲಿ ಕಳೆದ ಎರಡು ತಲೆಮಾರುಗಳಿಂದ ಅವರ ಮನೆತನವೇ ಆತಿಥ್ಯ ಸ್ವೀಕರಿಸಿದೆ ಎನ್ನಬಹುದಲ್ಲ?
     ಪದ್ಮನಾಭನ ತಾತ ತನ್ನ ಚಿಕ್ಕ ವಯಸ್ಸಿನಲ್ಲಿ ಮಲೆನಾಡು ಕಡೆಯಿಂದ ಹೆಂಡತಿಯೊಡನೆ ಇಲ್ಲಿಗೆ ಬಂದರಂತೆ. ಆಗಿನ ಅರ್ಚಕರ ಮನೆಯಲ್ಲಿ ಬಿಡಾರ ಹೂಡಿದರಂತೆ. ಸೊಗಸಾದ ಊರು, ಇಲ್ಲಿಯೇ ಉಳಿದು ಬಾಳಿ ಬೆಳೆದರಾದೀತು ಎಂದರಂತೆ, ಕೈಯಲ್ಲಿ ಸ್ವಲ್ಪ ಹಣವಿತ್ತು. ಲೇವಾದೇವಿ ಮಾಡಿದರು. ಕ್ರಮೇಣ ಒಂದೊಂದಾಗಿ ಅನೇಕ ಹೊಲಗಳನ್ನು ಸ್ವಾಧೀನಕ್ಕೆ ತೆಗೆದುಕೊಂಡರು.
   ರಂಗಣ್ಣ ತನ್ನ ಗೆಳೆಯನನ್ನು ಒಮ್ಮೆ ಕೇಳಿದ್ದ:
  "ಈ ಸಾಲ ಕೊಡೋದಿದೆಯಲ್ಲ, ಇದು ಒಳ್ಳೇ ಕಸಬೇನಪ್ಪ?”

· ಪದ್ಮನಾಭನೆಂದಿದ್ದ:

  "ದೇಶದ ಸರಕಾರವೇ ಸಾಲದ ಮೇಲೆ ನಡೀತಿರುವಾಗ ಇಂಥ ಪ್ರಶ್ನೆಗೆ ಅವಕಾಶವೇ

ಇಲ್ವಲ್ಲೋ ......"

    " ಏನೋಪ್ಪ, ರೈತಾಪಿ ಜನ ಸಾಲಗಾರರ ಬಲೆಯಿಂದ ಪಾರಾದಾಗ ಮಾತ್ರ ದೇಶದ ಉದ್ಧಾರ ಸಾಧ್ಯ ಅನಿಸುತ್ತೆ."
   ತನ್ನ ಪೂರ್ವಜರ ಕಥೆಯನ್ನು ಪದ್ಮನಾಭ ಹೇಳಿದ್ದು ಆ ದಿನ. ಇತಿಹಾಸದ ಭಕ್ತ ಹಿಂದಿನದನ್ನೆಲ್ಲ ಕೇಳಿ ತಿಳಿದಿದ್ದ. ಅವನ ತಂದೆಯ ತಾಯಿ, ಹಣ್ಣು ಮುದುಕಿ, ಇನ್ನೂ ಬದುಕಿದ್ದರು.
  "ನಮ್ಮ ತಾತ ಸಾಲ ಕೊಟ್ಟು ಶ್ರೀಮಂತನಾದ ಅಂತ ಒಪ್ಕೋತೀನಿ, ಆದರೆ ಆಸ್ತಿ

ಮಾಡಿದ್ಮೇಲೆ ಅವನು ಸ್ವತಃ ನೇಗಿಲು ಹಿಡಿದು ಉಳ್ತೆದ್ನ೦ತೆ."