ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೦ ನೋವು


     "ಅಲ್ಲ ಬೀರ, ಹಾಲು ತಂದ್ಕೊಡ್ಬೇಕಲ್ಲಪ್ಪ?”
     “ನಿಮಗ್ಯಾಕೆ ಆ ಯೇಚ್ನೆ ? ಟೇಮಿಗ್ಸರಿಯಾಗಿ ಲಕ್ಕ ಬಂದ್ಬಿಡ್ತವನೆ," ಎಂದ ಬೀರ. 
     "ಬರದೇ ಇದ್ರೆ?” 
     " ಅಯ್ಯೋ ಬುದ್ದಿ ನಾ ಇಲ್ಲವ್ರಾ? ಓಗಿ ತಕಂಬತ್ತೀನಿ."
     " ಇಲ್ಲಿಂದ ಎಷ್ಟು ದೂರ ಲಕ್ಕನ ಮನೆ?"
     " ఓ ఇಲ್ಲೇ."
     "ನೀವೇನಪ್ಪ, ಹಳ್ಳೀಲಿ 'ಓ ಇಲ್ಲೇ' ಅಂದ್ಬಿಡ್ತೀರಾ! ನಡಕೊಂಡ್ಹೋದ್ರೆ ಎರಡು ಮೂರು ಮೈಲಿಗಿಂತ ಕಮ್ಮಿ ಇರೋಲ್ಲ, ನಗರದಲ್ಲಾದ್ರೆ ಗಿರಾಕಿ ಕೂತಿರೋ ಹಾಗೇನೇ ಸೈಕಲ್ಹಾಕ್ಕೊಂಡೋಗಿ ಒಂದ್ನಿಮಿಷ್ದಲ್ಲಿ ಹಾಲು ತರ್ಬಹುದು."
    ಬೀರ ಏನೆನ್ನೂ ಹೇಳಲಿಲ್ಲ. ಎದ್ದು, ಕಸಬರಿಕೆ ಹಿಡಿದು. ಪಡಸಾಲೆಯನ್ನೂ ಜಗಲಿಯನ್ನೂ ಗುಡಿಸಿದ. ಬಾಗಿಲಿಗೆ ಕಟ್ಟಿದ್ದ ಬಾಳೆಯ ಗಿಡಗಳು ಗಾಳಿಗೆ ಬಾಗಿದ್ದುವು. ಅವುಗಳನ್ನು ಸರಿಯಾಗಿ ನಿಲ್ಲಿಸಿದ.
     ಸೋರುವುದು ಕಡಮೆಯಾಗಲಿಲ್ಲ.
     " ನಾನು ಯೋಳ್ಳಿಲ್ವ? ನಿಂತ್ಮ್ಯಾಕೆ ಗುಡಿಸೋದೇ ಸೈ." ಎಂದ ಬೀರ.
     ನಗರದಿಂದ ತಂದಿದ್ದ ಹಳೆಯ ಟೈಂಪೀಸು ಆ ಭವನದಲ್ಲಿತ್ತು, ಹೊಗೆ ಹೇಗೋ ಒಳಕ್ಕೆ ಸೇರಿಕೊಂಡು ಮಾಸಿದ್ದ ಅಂಕೆಗಳು. ಸ್ವಲ್ಪ ನಿಧಾನವಾಗಿಯಾದರೂ ಅದರೊಳಗಿನ ಯಂತ್ರ ಚಲಿಸುತ್ತಿತ್ತು. 
     ಮೂರು ಘ೦ಟೆ.
     ಮೂರೂವರೆ.
     ನಾಲ್ಕು.
     ಆಮಂತ್ರಣ ಪತ್ರಿಕೆಯನ್ನು ಅಚ್ಚು ಹಾಕಿಸಿದ್ದರೆ ಚೆನ್ನಾಗಿತ್ತು ಎಂಬ ಒಳಗುದಿ ಗಜಾನೆನನಿಗೆ. ನಗರ ಬಿಡುವ ಮುನ್ನ ವಿಷ್ಣುಮೂರ್ತಿಯವರು ಆ ಬಗೆಗೆ ಏನೂ ಹೇಳಿರಲಿಲ್ಲ. ಅವರು ಮರೆತು ಬಿಡುವಂಥ ವಿಷಯವಲ್ಲ ಅದು. ಬೇಡ ಅಂತ ನಿರ್ಧರಿಸಿರ ಬೇಕು – ಎಂದು ಗಜಾನನ ಭಾವಿಸಿದ್ದ. 
    ಆದರೂ ಕಣಿವೇಹಳ್ಳಿ ತಲಪಿದ ದಿನ ಗೋವಿಂದನೆದುರು ತನ್ನ ನಿರಾಶೆಯನ್ನು ವ್ಯಕ್ತಪಡಿಸಲು ಗಜಾನನ ಹಿಂಜರಿಯಲಿಲ್ಲ. 
    “ನಿನಗೆ ಕೆಲಸವಿಲ್ಲ, ಅಕ್ಷರ ತಿಳೀದವರಿಗೆ ಆಮಂತ್ರಣ ಪತ್ರಿಕೆ ಬೇರೆ! ಪ್ರೂಪ್ರೈಟರ್-ಗಜಾನನರಾವ್ ಅಂತ ಪ್ರಿಂಟಾಗೋದು ತಾನೆ

ನಿನೆಗೆ ಮುಖ್ಯ ? ನನ್ನ ಮದುವೇ ಇನ್ವಿಟೇಷನ್ನಲ್ಲಿ ನಿನ್ನ ಹೆಸರನ್ನೂ ಸೇರಿಸ್ತೀನಿ. ಸವಿನಯ ಆಮಂತ್ರಣ ಅಂತ ಬರೆದು,ವಿಘ್ನೇಶ್ವರ ಭವನದ ಪ್ರೂ.ಶ್ರೀ ಶ್ರೀ....... ಅಂತ ಹಾಕಿಸ್ತೀನಿ. ಸಾಕೇನಯ್ಯ?"

    " ಹೆಹ್ಹೆ !"
    " ಬೋರ್ಡು ಬರೆಸಿ ತಂದಿದೀಯೊ ?"
    " ಓಹೋ."
    " ತೋರಿಸು,ನೋಡೋಣ."