ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು ೧೬೩

  ಜಲಜೆ ಗಂಡನೊಡನೆ ಅಂದಳು:
  "ಒಂದು ಪ್ಲೇಟ್ ತಗೊಂಡ್ಬರ್ಲಾ? ಇವರು ರುಚಿ ನೋಡ್ತಾರೋ ಏನೋ."
  ಗಜಾನನ ಧ್ವನಿ ಏರಿಸಿ ಹೆಂಡತಿಯನ್ನು ಛೇಡಿಸಿದ:
  "ನೀನೇ ಕೇಳು. ನಾಚ್ಕೀನ ಮಾತಾಡೋಕೆ? ಗೋವಿಂದರಾವ್ ಯಾರು 

ಅಂದ್ಕೊಂಡೆ? ನಿನ್ನ ಕಾಮಾಕ್ಷಿ ಗಂಡ!"

  ಎದೆಯ ಮೇಲಿಂದ ಸೆರಗನ್ನು ತುಸು ಬಿಗಿಯಾಗಿ ಹಿಂದಕ್ಕೆಳೆದುಕೊಂಡು ಜಲಜೆ

ನಕ್ಕಳು.

  "ತಿಂಡಿಪೋತಿ –ಕಾಮಾಕ್ಷಿ, ನಾನೆಲ್ಲ ಅತ್ತಿಗೆ! ಈಗ ನನಗೇನೂ ಬೇಡಿ. ಎಲ್ಲರೂ 

ಬರ್ಲಿ," ಎಂದ ಗೋವಿಂದ.

  ಒಳಗೆ ಸೋರುವುದು ನಿಂತಿತು. ಹೊರಗಿನ ಮಳೆ ಕೂಡಾ. 
  "ಬುದ್ದಿಯೋರು ಗೆದ್ಬುಟ್ರು," ಎಂದ ಜಗಲಿಯಲ್ಲಿ ಕುಳಿತಿದ್ದವರಲ್ಲಿ ಒಬ್ಬ.
  ಹೊರಗೆ ಹೊಲಗಳಲ್ಲಿ ನಿಂತಿದ್ದ ಕೆಂಪು ನೀರು ಇಳಿಯತೊಡಗಿತು. ಏರಿಗಳು

ಮತ್ತೆ ಮುಖ ತೋರಿಸಿದೆುವು.

  ಸ್ವಲ್ಪ ಹೊತ್ತಿನಲ್ಲೆ ಕೃಷ‌‍ಣೇಗೌಡ ಇಬ್ಬರು ಜತೆಗಾರರೊಡನೆ ಬಂದ.
  ಅವರ ಹಿಂದಿನಿಂದ ಬೀರ ಬಂದು ತಲಪಿದ. ಅವನ ಜತೆಯಲ್ಲಿ ಹಾಲಿನ ಚೆಂಬು 

ಹೊತ್ತಿದ್ದ ಲಕ್ಕನಿದ್ದ.

  "ಅಯ್ನೋರು ಯೋಳಿದ್ರು. ನಗರದಿಂದ ಬಂದವ್ರಲ್ಲ ಅವ್ರೆಲ್ಲಾ ರಸ್ಟು ಬಿಟ್ಕೊಂಡು

ಬತ್ತವರಂತೆ," ಎಂದು ಬೀರ ಗೋವಿಂದನಿಗೆ ಸಂದೇಶ ತಲಪಿಸಿದ.

  ಶಾಮೇಗೌಡರು ಬಂದಿಲ್ಲವಲ್ಲ ಎಂದು ಗಜಾನನನಿಗೆ ವಿವಂಚನೆಯಾಯಿತು.
  ಅವನು ಗೊಣಗುತ್ತಿದ್ದುದನ್ನು ನೋಡಿ, "ಬರದಿದ್ರೆ ಅಷ್ಟೇ ಹೋಯ್ತು. ಕೃಷ್ಣೇ

ಗೌಡರಿದಾರೆ. ಅವರ ಕೈಲಿ ಮಾಡಿಸ್ಬಿಡೋಣ," ಎಂದ ಗೋವಿಂದ.

  "ಛೆ! ಛೆ! ಶಾಮಣ್ಣ ತಾನೇ? ಬತ್ತಾರೆ, ಬತ್ತಾರೆ," ಎಂದು ಕೃಷ್ಣೇಗೌಡ ನುಡಿದ,

ತಾನೂ ಜಲಜೆಯನ್ನು ಬೆರಗಾಗಿ ನೋಡುತ್ತ...

  ಒಳಗೆ ಹೋಗೆಂದು ಗಜಾನನ ಸನ್ನೆ ಮಾಡಿದೊಡನೆ, ಮುತ್ತಿಡುವ ನೋಟಗಳು 

ಬಹಳವಾದುವೆಂದು ಅದೇ ಆಗ ಮನವರಿಕೆಯಾದವಳಂತೆ, ಜಲಜೆ ಅಡುಗೆ ಮನೆಯತ್ತ ಸರಿದಳು.

  ಪಿಸುದನಿಯಲ್ಲಿ ಗಜಾನನ ಗೋವಿಂದನನ್ನು ಕೇಳಿದ:
  "ಹಾರದ್ದೊಂದು ಮರೆತೇ ಹೋಯಿತಲ್ಲ ಗೋವಿಂದರಾವ್."
  "ನಿಂಬೆಹಣ್ಣಿದೆ ತಾನೆ?"
  "ಇದೆ." 
  "ಒಂದನ್ನ ವಿಶ್ವಾಸದಿಂದ ಶಾಮೇಗೌಡರಿಗೆ, ಕೊಡು. ಸಂತೋಷಪಡ್ತಾರೆ. 

ಸಾಕು."

  "ಹ್ಞು."
  ಬೀರ ಒಳಕ್ಕೆ ತಲೆ ಹಾಕಿ, "ಪಟೇಲರು ಬತ್ತಾ ಅವರೆ," ಅಂದ.