ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು ಗೋವಿಂದನೂ ಗಜಾನನೂ ಅಂಗಳಕ್ಕಿಳಿದರು. ಹಳೆಯ ಕೊಡೆಯನ್ನು ಮಡಚಿ ಕಂಕುಳಲ್ಲಿಟ್ಟುಕೊಂಡು ಇಬ್ಬರು ಚಾಕರರೊಡನೆ ಬಂದ ಶಾಮೇಗೌಡರನ್ನು ಅವರು ಇದಿರ್ಗೊಂಡರು. "ತಡವಾಯ್ತೇನಪ್ಪ?” ಎನ್ನುತ್ತ ಗೌಡರು ಒಳ ಹೊಕ್ಕರು. " ಏనిల్ల, ಏనిల్ల." "ಅಯ್ನೋರು ಬಂದಿಲ್ವ ಇನ್ನೂ ?" " ಹೊರಟಿದಾರೆ." ಒಂದು ಬೆಂಚನ್ನಾಗಲೇ ಮೇಜಿನ ಹಿಂದೆ ಇರಿಸಿದ್ದ ಗಜಾನನ ಗೌಡರನ್ನು ಅಲ್ಲಿಗೆ ಕರೆದೊಯ್ದ. ಶ್ರೀನಿವಾಸಯ್ಯ ವಿಷ್ಣುಮೂರ್ತಿಯವರನ್ನೂ ಮೋಹನರಾಯರನ್ನೂ ಕರೆದುಕೊಂಡು ಬಂದಾಗ ಎಲ್ಲರ ದೃಷ್ಟಿಗಳೂ ಅತ್ತ ಹೊರಳಿದುವು. ವಿಷ್ಣುಮೂರ್ತಿ ಗೌಡರಿಗೆ ವಂದಿಸಿ, ಮೋಹನರಾಯರ ಪರಿಚಯ ಮಾಡಿಕೊಟ್ಟರು. “ನಗರದ ಸುಪ್ರಸಿದ್ದ ಲಾಯರು ಇವರು. ನೋಡಿ ಮೋಹನರಾಯರೇ, ಇವರೇ ಪಟೇಲ್ ಶಾಮೇಗೌಡರು, ದೇವರಂಥಾ ಮನುಷ್ಯ." ಗೋವಿಂದ ವಕ್ರನೋಟದಿಂದ ವಿಷ್ಣು ಮೂರ್ತಿಯವರನ್ನೊಮ್ಮೆ ನೋಡಿ, ಗಜಾನನನ ಕಡೆ ತಿರುಗಿ, " ತಿಂಡಿತೀರ್ಥ ಸರಬರಾಜಾಗಲಿ, ಎಂದ. ಗೌಡರು ಈ ಲಾಯರಿಗೂ ಮುನಿಯನಿಗೂ ಸಂಬಂಧವಿರದಷ್ಟೆ ಎಂದು ಕ್ಷಣಕಾಲ ಚಿಂತಿಸಿದರು ಬಳಿಕ ಶ್ರೀನಿವಾಸಯ್ಯನ ಕಡೆ ತಿರುಗಿ, " ಲಾಯರು ನಿಮ್ಮಲ್ಗೆ ಬಂದಿದ್ರೆ ಅಯ್ನೋರೆ?" ಎಂದು ಕೇಳಿದರು. ಶಾಮೇಗೌಡರ ಮಗ್ಗುಲಲ್ಲೆ ಕುಳಿತಿದ್ದ ಶ್ರೀನಿವಾಸಯ್ಯ ಧ್ವನಿ ತಗ್ಗಿಸಿ, “ ಬಂದು ಹೇಳೋಣಾಂತಿದ್ದೆ ಶಾಮಣ್ಣ. ಒಂದಲ್ಲ ಒಂದು ಕೆಲ್ಸ. ಆಗ್ಲೇ ಇಲ್ಲ. ಇವರು ಇನ್ನು ನಮ್ಮ ಬೀಗರು. ಇವತ್ತು ನಿಶ್ಚಿತಾರ್ಥ ಆಯ್ತು. ಈ ಮೋಹನರಾಯರ ಮಗಳನ್ನ ನಮ್ಮ ಪದ್ಮನಿಗೆ ತರೋದೂಂತ ಮಾಡಿದೆ," ಎಂದರು. ಶಾಮೇಗೌಡರು ಕಣ್ಣರಳಿಸಿ, ಗಟ್ಟಿಯಾಗಿ, " ಹಾಗೋ!" ಎಂದುದಷ್ಟೇ ಇತರರಿಗೆ ಕೇಳಿಸಿತು. "ಈ ವಿಷ್ಣುಮೂರ್ತಿಗಳ ಹಿರೇಮಗಳು ನಮ್ಮ ಗೋವಿಂದನಿಗೇಂತ ಗೊತ್ತಾಗಿದೆ." " ಒಳ್ಳೇ ಕೆಲಸ ಮಾಡಿದ್ರಿ." ವಿಷ್ಣುಮೂರ್ತಿ ಅವರತ್ತ ತಲೆಬಾಗಿಸಿ," ಗೌಡರ ಮನೇದು ಒಂದೆರಡು ಊಟ ನಮಗೆ ಬಾಕಿ ಇದೆ ಅನ್ಸುತ್ತೆ," ಅಂದರು. ನಿಮಿಷ ಮೌನವಾಗಿದ್ದು, ಒಮ್ಮೆಲೆ ಗೌಡರೆಂದರು: "ನಮ್ಮ ಹುಡುಗಂದಿನ್ನೂ ಡಾಕ್ಟರ್ ಪರೀಕ್ಷೆ ಮುಗಿದಿಲ್ಲ. ಮಗಳದು ಮಾತ್ರ ಈ ವರ್ಷವೇ ನಡೀತದೆ. ಅಳಿಯನಾಗೋ ಹುಡುಗ ಲಾಯರ್ ಪರೀಕ್ಷೆಗೆ ಕಟ್ಟಿದಾನೆ.” "ಸಂತೋಷ ಶಾಮಣ್ಣ," ಎಂದರು ಶ್ರೀನಿವಾಸಯ್ಯ.