ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು "ಲಾಯರ್ ಮೋಹನರಾಯರೇ, ನಿಮ್ಮ ಜಾತಿ ಹುಡುಗನನ್ನೇ ಗೌಡರು ಆರಿಸಿದಾರೆ!” – ವಿಷ್ಣುಮೂರ್ತಿ ಅಂದರು. ಗೌಡರ ಬರಿಯ ಪಾದಕ್ಕೆ ಮುಳ್ಳು ನೆಟ್ಟಹಾಗಾಯಿತು. ಮುಗುಳುನಗಲು ಯತ್ನಿಸಿ ಅವರು ವಿಫಲರಾದರು. ಶ್ರೀನಿವಾಸಯ್ಯ ತುಟಿಪಿಟ್ಟೆನ್ನಲಿಲ್ಲ. ಆಭಾಸಕರವಾದುದನ್ನು ತಾವು ಆಡಿದೆವೆಂಬ ಪರಿವೆಯೇ ಇಲ್ಲದೆ ವಿಷ್ಣುಮೂರ್ತಿ, ಹೊರಗೆ ಮತ್ತೆ ಯಾರೋ ಬಂದಂತಾಯಿತಲ್ಲ – ಎಂದು, ಆ ಕಡೆಗೆ ನೋಡಿದರು. " ಬಾ ವೆಂಕಟಪ್ಪ, ಒಳಗ್ಬಾ," ಎಂದರು ಗೌಡರು, ಬಂದವನು ತಮ್ಮ ದೃಷ್ಟಿಗೆ ಬಿದ್ದೊಡನೆ. ಆತ ಒಳಹೊಕ್ಕು ಖಾಲಿಯಾಗಿದ್ದ ಒಂದು ಕಡೆ ಕುಳಿತುಕೊಂಡ. ......ತಿಂಡಿ ತಣ್ಣಗಾಗಿದ್ದರೂ ಕಾಫಿ ಬಿಸಿಯಾಗಿತ್ತು. ಮುಚ್ಚಂಜೆಯಾಗುತ್ತ ಬಂದಿತ್ತು.

ಮಳೆ ಪೂರ್ತಿ ನಿಂತಿತೆಂದು ಸೂರ್ಯ ಒಂದು ಕ್ಷಣ ನಕ್ಕಂತಾಯಿತು.

ಗಜಾನನ ನಿಂಬೆಹಣ್ಣನ್ನು ಗೌಡರ ಕೈಯಲ್ಲಿಟ್ಟು ವಂದಿಸಿದ. ತಾಂಬೂಲ ಬಂತು. " ಏಳಬಹುದಲ್ಲ ಇನ್ನು," ಎಂದು ಶಾಮೇಗೌಡರು ಹೇಳುತ್ತಿದ್ದಂತೆ, ಗೋವಿಂದ ಎದ್ದು ನಿಂತು, "ನನ್ನ ಮಿತ್ರರಾದ ಗಜಾನನರಾಯರ ವಿಘ್ನೇಶ್ವರ ಭವನ ಕಾಫೀ ಕ್ಲಬ್ ಶುರುವಾದಂತಾಯ್ತು. ಅದನ್ನು ಉದ್ಘಾಟಿಸಿದ ಕಣಿವೇಹಳ್ಳಿಯ ಪಟೇಲರಾದ ಶ್ರೀಮಾನ್ ಶಾಮೇಗೌಡರಿಗೂ ಅಧ್ಯಕ್ಷತೆ ವಹಿಸಿದ ನಗರದ ಗಣ್ಯ ವಕೀಲರಾದ ಶ್ರೀಮಾನ್ ಮೋಹನ ರಾಯರಿಗೂ ಆಮಂತ್ರಣವನ್ನು ಅಂಗೀಕರಿಸಿ ಇಲ್ಲಿತನಕ ದಯಮಾಡಿರುವ ತಮ್ಮೆಲ್ಲರಿಗೂ ಅನಂತಾನಂತ ವಂದನೆಗಳು, ಎಂದ. ಕೊನೆಗೂ ಈ ಗೋವಿಂದ ಬಿಡಲಿಲ್ಲ – ಎನಿಸಿತು ಶಾಮೇಗೌಡರಿಗೆ. ......ಸ್ವಲ್ಪ ಹೊತ್ತಿನಲ್ಲೇ ವಿಘ್ನೇಶ್ವರ ಭವನ ಬರಿದಾಯಿತು.

ಸಮಾರಂಭ ಮುಗಿಯುವವೇಳೆಗೆ ಸರಿಯಾಗಿ ಎದ್ದು ಅಳತೊಡಗಿದ ಮಗುವನ್ನು ಜಲಜೆ ಒಳಗೆ ರಮಿಸಿದಳು.

" ನಾನು ಬರ್ತೀನಿ ಗಜಾನನ," ಎಂದು ಹೇಳಿ ಗೋವಿಂದ ಹೊರಟು ಹೋದ. ......ಹೊರಗೆ ಚೆನ್ನಾಗಿ ಕತ್ತಲಾದಮೇಲೆ ಗೋಪಾಲ ವಿಘ್ನೇ ಶ್ವರ ಭವನಕ್ಕೆ ಬಂದ. "ಅಂತೂ ಬಂದಿರಲ್ಲ, ಗೋಪಾಲರಾವ್.ಕೂತ್ಕೊಳ್ಳಿ, ಅಲ್ಟೋಪಹಾರ ಸ್ವೀಕರಿಸಿ," ಎಂದು ನುಡಿದು ಗಜಾನನ ಒಳಕ್ಕೆ ಹೋದ. ......ಗೋಪಾಲ ಒಂದೆರಡು ಚಮಚ ತಿಂಡಿ ಬಾಯಿಗಿರಿಸಿದ್ದನೋ ಇಲ್ಲವೋ, ಬೀರ ಓಡಿಯೋಡಿ ಬಂದ. ಏದುಸಿರು ಬಿಡುತ್ತ ಗೋಪಾಲನೊಡನೆ ಅವನೆಂದ. ತಕ್ಸಣ ಬರಬೈಕಂತೆ. ಚಿಕ್ಕಮ್ಮಾವ್ರು ಎಂಗೆಂಗೋ ಆಡ್ತಾ ಅವ್ರೆ. ತಕ್ಸಣ ಬರಬೈಕಂತೆ.”