ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು ೧೬೭

ವಟರ ವಟರ ವಟರ. ಗೌಡರಿಗೆ ಯಾವಾಗೂ ಆ ಸ್ವರ ಇಷ್ಟ.  ಭೂಮಿಯ ಗರ್ಭ
ಧಾರಣೆಗೆ  ಅದೊಂದು ಮಂಗಳವಾದ್ಯ.
          ಇನ್ನು ಮಳೆಗಾಲ.      ದುಡಿಮೆಯ ಸಡಗರ.
          ಹೇಗೂ ಸುಗ್ಗಿಯ ತನಕ     ಕಾಯುವ ಮಾತಿಲ್ಲ.     ಬಿತ್ತನೆ ಮುಗಿದಮೇಲೆ ಆಗಲಿ-
ಎಂದು ಅವರೂ ಒಪ್ಪಿರುವರಲ್ಲ. ಆ ವೇಳೆಗೆ ಒಂದು ಹದಿನೈದು ದಿವಸವಾದರೂ ರಜಾ
ಪಡೆದು ಬರುವ ಹಾಗೆ ರಂಗಣ್ಣನಿಗೆ ಹೇಳಿ   ಕಳುಹಿಸಬೇಕು — ಜವಳಿ ಖರೀದಿಗಾಗಿ ತಾವೂ
ಒಮ್ಮೆ   ನಗರಕ್ಕೆ  ಹೋಗಬೇಕು. ಅಳಿಯನಿಗಾಗಿ    ಸೂಟು ಹೊಲಿಸಬೇಕು......
  ಅಯ್ಯನವರ ಮಕ್ಕಳ ಮದುವೆ ನಗರದಲ್ಲೇ ನಡೆದೀತು.
  ತಾವು ನಗರದಿಂದ ಬ್ಯಾಂಡಿನವರನ್ನು ಕರೆಸಬೇಕು. ಅದ್ದೂರಿಯಿಂದ ನಡೆಯಬೇಕು 
ಸುಭದ್ರೆಯ ಮದುವೆ.
           ...... ಯೋಚನೆಗಳು ತಿಳಿಯಾಗಿ ಪ್ರತಿಯೊಂದೂ   ಸ್ಪಷ್ಟವಾದಂತೆ ಶಾಮೇಗೌಡರ
ಮನಸ್ಸನ್ನು ಆವರಿಸಿದ್ದ ಖಿನ್ನತೆ ಕ್ರಮಶಃ ಮಾಯವಾಯಿತು. ದೂರದಲ್ಲಿ ಮನೆಯ ಬೆಳಕು
ಕಾಣಿಸಿದಾಗ, ಅವರೊಳಗಡೆ ಸಮಾಧಾನ ಸಂಪೂರ್ಣವಾಗಿ ಮನೆಮಾಡಿತ್ತು......
        ...... " ತಕ್ಸಣ  ಬರಬೈಕಂತೆ.     ಚಿಕ್ಕಮ್ಮಾವ್ರು ಎಂಗೇಗೋ ಆಡ್ತಾ     ಅವ್ರೆ.         ತಕ್ಸಣ
ಬರಬೈಕಂತೆ," ಬೀರ ತಂದ ಸಂದೇಶ ಕೇಳಿದೊಡನೆ ಗೋಪಾಲ ಗಡಬಡಿಸಿ ಎದ್ದ.
           " ನಾನು ಬರ‍್ತೀನಿ." ಎಂದ. ಕಾಫಿಯೊಡನೆ ಬಂದ ಗಜಾನನನನ್ನು ನೋಡಿ.
ಬೀರ ಹೇಳಿದುದು ಗಜಾನನನಿಗೂ ಕೇಳಿಸಿತ್ತು.
" ಕಾಫಿ ಕುಡಿದ್ಬಿಟ್ಟು ಹೋಗಿ, ಗೋಪಾಲರಾವ್," ಎಂದ ಆತ.
ಹೇಗೂ ಪಾನೀಯ ತಣ್ಣಗಿತ್ತು, ಒಂದೆರಡು ಗುಟುಕು ಗೋಪಾಲ ಕುಡಿದ.
ಒಳಬಾಗಿಲಲ್ಲಿದ್ದ ಜಲಜೆಗೂ ಹೊರಗಿನ ಮಾತೆಲ್ಲ ಕೇಳಿಸಿತ್ತು.
" ಏನಾಯ್ತೋ ಏನೋ, ಪಾಪ."ಎಂದಳಾಕೆ.
"ಕತ್ತಲಾಯ್ತು. ದಾರೀಲೆಲ್ಲ ನೀರು," ಎಂದ ಗಜಾನನ.
ಬೀರನೆಂದ :
" ಲಾಟೀನು ಕಳಿಸ್ಕೊಟ್ಟವರೆ."
ಗಜಾನನ ತಾನೇ ಅದನ್ನು ಹಚ್ಚಿದ. 
ಗೋಪಾಲ ಹೊರಕ್ಕೆ ಹೆಜ್ಜೆ ಇಡುತ್ತಿದ್ದಂತೆ, " ನಾವು ಬರೋ ಅಗತ್ಯ ಇದ್ದರೆ ಹೇಳಿ 
ಕಳಿಸಿ, ಗೋಪಾಲರಾವ್. ಸ್ವಲ್ಪ ಹೊತ್ನಲ್ಲೇ ಬಂದ್ಬಿಡ್ತೀವಿ," ಎಂದ ಗಜಾನನ.
         ಏನನ್ನೂ ಹೇಳಲಿಲ್ಲ ಗೋಪಾಲ. 
        ಬೀರ ವೇಗವಾಗಿ ಮುಂದೆ ನಡೆದ.   ಗೋಪಾಲ ನೀಳ ಹೆಜ್ಜೆಗಳನ್ನಿಡುತ್ತ ಅವನನ್ನು
ಹಿಂಬಾಲಿಸಿದ.
           ಕಪ್ಪೆಗಳ ಹಾಡುಗಾರಿಕೆ ನಡೆದಿತ್ತು.   ತನ್ನ ಹೆಂಡತಿ ಏನೋ ಅಪಾಯಕ್ಕೀಡಾಗಿದ್ದಾಳೆ 
ಎಂದು ಗೋಪಾಲ ವ್ಯಥಿತನಾಗಿದ್ದ ಆ ಘಳಿಗೆಯಲ್ಲಿ ಕಪ್ಪೆಗಳ ಸಂಗೀತ ಕರ್ಕಶವಾಗಿ ಆತನಿಗೆ
ಕೇಳಿಸಿತ್ತು.
           ಹೋಟೆಲಿಗೆ ಬರುವ ಮನಸ್ಸಿರಲಿಲ್ಲ ಅವನಿಗೆ.