ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Iද්ට ನೋವು ಕರಕೊಂಡು ನೇರ ನಗರಕ್ಕೆ ಬಂದ್ದಿಡು, ಗೋಪೂ," \ "ಹ್ಜೂಂ,," ಎಂದ ಗೋಪಾಲ. ಗೋವಿಂದ ಅವನಿಗೆ ನಗರದ ಅಡ್ರೆಸ್ ಕೊಟ್ಟ, - ವಿಘ್ನೇಶ್ವರ ಭವನದ ಬಾಗಿಲಿಗೆ ಬೀಗ ಬಿತ್ತು, ಎರಡು ಮೂರು ದಿನಗಳ ಮಟ್ಟಿಗೆ ಎಂದು. ಗಜಾನನನ ಕುಟುಂಬ ದಿಬ್ಬಣದ ತಂಡವನ್ನು ಸೇರಿಕೊಂಡಿತ್ತು. ಶಾಮೇಗೌಡರು, "ನೀವು ಹೋಗಿ, ನಾಳೆ ಬರ್ತೀನಿ," ಎಂದುಬಿಟ್ಟರು. ಬೀರನನ್ನು ಕರೆದುಕೊಂಡು, ಬೇರೆ ಇಬ್ಬರು ಆಳುಗಳನ್ನು ಮನೆಯ ಕಾವಲಿಗೆ ಗೊತ್ತು ಮಾಡಿ, ತಮ್ಮ ಬಳಗದೊಡನೆ ಶ್ರೀನಿವಾಸಯ್ಯ ಹೊರಟರು. ಆ ರಾತ್ರೆ ಕಣಿವೇಹಳ್ಳಿಯಲ್ಲಿ ವಿಪರೀತ ಮಳೆ, ಮಾರನೆಯ ದಿನ ಕೂಡಾ." ಹಾಲು ಹೊಳೆಗೆ ಮಹಾಪೂರ బంತು. * ಮಲೆನಾಡ್ನಾಗೆ ಮಳೆಯಾಗೈತೆ," ಎಂದರು ಎಲ್ಲರೂ. ಅದೇ ದಿನ ನಗರದಲ್ಲಿ ಮದುವೆ. ಆ ಹೊತ್ತಿಗೆ ಸರಿಯಾಗಿ ಕಣಿವೇಹಳ್ಳಿಯಲ್ಲಿ ಜನ ಉಸಿರು ಬಿಗಿ ಹಿಡಿಯುವಂತೆ ಮಾಡಿದ ಘಟನೆಯೊಂದು ಜರುಗಿತು. ನದೀ ದಂಡೆಯಲ್ಲಿ ನಿಂತಿದ್ದ ರೈತರಲ್ಲೊಬ್ಬ, " ಹಾ!" ಎಂದು ಚೀರಿಕೊಂಡ. ಎಲ್ಲರ ದೃಷ್ಟಿಗಳೂ ಅತ್ತ ತಿರುಗಿದುವು. ಕಣ್ಣೆವೆ ಮುಚ್ಚಿ ತೆರೆಯುವುದರೊಳಗೆ ಆಕಸ್ಮಿಕ ನಡೆದು ಹೋಗಿತ್ತು. .ಆ ದಿನ ಬೆಳಕು ಹರಿದುದು ತಡವಾಗಿ, ಪ್ರಯಾಸದಿ೦ದ. ರಾತ್ರೆ ಆರಂಭವಾದ ಮಳೆ ನಿಂತಿರಲಿಲ್ಲ. ಮೋಡಗಳ ಕೋಟೆ ಕೊತ್ತಲಗಳನ್ನು ಧ್ವಂಸ ಮಾಡುವ ಆಸೆಯಂತೂ ಸೂರ್ಯನಿಗಿರಲಿಲ್ಲ, ಬಿರುಕು ಮಾಡಿಕೊಂಡು ತೂರಿ ಒಳಕ್ಕೆ ಬರಲು ಅವನು ಪ್ರಯತ್ನಿಸಿದ. ಮಬ್ಬ ಬೆಳಕು ಕಣಿವೇಹಳ್ಳಿಯಲ್ಲಿ ಹರಡಿತಾದರೂ ಜನರ ಕಣ್ಣಿಗೆ ಬೀಳಲು ಸೂರ್ಯ ಶಕ್ತನಾಗಲಿಲ್ಲ. - ಅಬ್ದುಲ್ಲನ ಹೊಸ ಜೋಪಡಿ ಕುಸಿದಿತ್ತು, ಹಾಗೆ ಒಮ್ಮೆ ವಿಪರೀತ ಮಳೆಯಾಗ ಬಹುದೆಂದು ಅವನು ನಿರೀಕ್ಷಿಸಿರಲಿಲ್ಲ, ಹಳ್ಳಿಯಲ್ಲಿ ಇತರ ಎರಡು ಮೂರು ಮನೆಗಳ ಗೋಡೆಗಳೂ ಬಿದ್ದಿದ್ದುವು. "ಭೋ ಮಳೆ ಒಡೆಯಾ," ಎಂದ ಕರಿಯ ಗೌಡರಿಗೆ ವರದಿ ಒಪ್ಪಿಸುತ್ತ, ಆ ದಿನೆ ಹೊಲಗಳಲ್ಲಿ ದುಡಿಮೆ ಇಲ್ಲ. "ನಡಿ, ನೋಡ್ಕಂಡ್ವರಾನ," –ಎಂದು ನುಡಿದು ಗೌಡರು ಶಾಲು ಹೊದೆದುಕೊಂಡು ಕೊಡೆ ಹಿಡಿದುಕೊಂಡು ಹೊರಟರು. "ಈ ಪಾಟಿ ಮಳೆಯಾಗೆ ಯಾಕೋಗ್ತೀಯಾ ಅಣ್ಣ ?" ಎಂದು ನಾಗಮ್ಮ ಕೇಳಿದರು.