ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು O&O ತಂಗಿಯತ್ತ ನೋಡಿ ಗೌಡರೆಂದರು ; so * ಬಿರ್ನೆ ಬಂದ್ಬುಡ್ತೀನಿ, ನಾಗೂ." \ ಗೋಣಿಚೀಲವನ್ನು ಒಳಮೈ ಮಡಚಿ, ತಲೆಯನ್ನೂ ಬೆನ್ನನ್ನೂ ಮುಚ್ಚಿಕೊಂಡಿದ್ದ, ಕರಿಯ, ಒದ್ದೆಯಾಗಿ ನೀರು ಸುರಿಯುತ್ತಿದ್ದ ತುಣುಕು ಬಟ್ಟೆ ಅವನ ನಡುವನ್ನು ಬಳಸಿತ್ತು. ಸಂಪೂರ್ಣ ತೋಯ್ದ ಮೈ ಕುಟು ಕುಟು ನಡುಗುತ್ತಿತ್ತು. ಆತ ಗೌಡರನ್ನು ಹಿಂಬಾಲಿಸಿದ. - ನಾಗಮ್ಮ ಬಾಗಿಲಲ್ಲಿ ನಿಂತು, ಮಳೆಯಲ್ಲಿ ಮಸಕಾಗಿ ಹೋದ ಅಣ್ಣನನ್ನೂ ಆಳನ್ನೂ ದಿಟ್ಟಸಿದರು. ವಿಪರೀತ ಮಳೆ, ಮೇಲ್ಗಡೆ ನಿನ್ನೆ ಮೊನ್ನೆಯೂ ಹೀಗೆಯೇ ಸುರಿದಿದ್ದರೆ, ನದಿಯಲ್ಲಿ ಪ್ರವಾಹ ಬರುವುದು ಖಂಡಿತ.ಇಂಥ ಮಳೆಯನ್ನು ತಾವು ನೋಡಿ ಎಷ್ಟು ವರ್ಷವಾಯಿತೊ ? ಎಂದೆಲ್ಲ ಯೋಚಿಸುತ್ತ ನಾಗಮ್ಮ ಒಳಕ್ಕೆ ಹೊರಳಿದರು. ಸುಭದ್ರೆ ಕಿಟಿಕಿಯ ದಂಡೆಯ ಮೇಲೆ ಕೈಗಳ ಕಂಬ ನೆಟ್ಟು ಹೊರಗೆ ಸುರಿಯುತ್ತಿದ್ದ ಮಳೆಯನ್ನು ನೋಡುತ್ತ ನಿಂತಿದ್ದಳು.

  • "ಇವತ್ತೂ ಇಂಗೇ ಉಯ್ದ್ರೆ ಬಿತ್ತನೆಯೆಲ್ಲಾ ಕೊಚ್ಚೋಯ್ತದೆ,," ಎಂದರು ನಾಗಮ್ಮ ಸುಭಧ್ರೆಯೊಡನೆ,. -

ಸುಭದ್ರೆ ಮಾತನಾಡಲಿಲ್ಲ. ಬಿತ್ತನೆಯಿಂದ ಅಯ್ಯನವರ ಮನೆಯ ಮದುವೆಯತ್ತ ತಿರುಗಿತು ನಾಗಮ್ಮನವರ ಯೋಚನೆ, " ನಗರದಾಗೂ ಇ೦ಗೇ ಇರ್ತೇತೋ ಯಾನೋ, ಎಂದರು. ಅದು ಮದುವೆಗೆ ಒದಗಬಹುದಾದ ಅಡ್ಡಿ ಆತಂಕಗಳ ವಿಷಯ. లేుటి ಕಚ್ಚಿಕೊಂಡು, ಮಗುವಿನೊಡನೆ ಈ ಮಾತು ಸರಿಯಲ್ಲ-ಎಂದು, * ಸುಬ್ಬೀ, ಬಿಸಿ ಗಂಜಿ ಮಾಡ್ಲಾ ? ಚಳಿಗೆ ಚೆಂದಾಗಿರ್ತೇತೆ," ಎಂದರು. ಬಲು ಕ್ಷೀಣವಾಗಿ, " ಹೂಂ," ಎಂದಳು ಸುಭದ್ರೆ.. ಅವಳ ಮುಖ ಸಪ್ಪಗಿತ್ತು. ನಾಗಮ್ಮ ಒಳಕ್ಕೆ ನಡೆದರು. ಮುಂದೆ ಅದೆಷ್ಟು ಹೊತ್ತು ಸುಭದ್ರೆ ಅಲ್ಲಿಯೇ ಇದ್ದಳೊ ! ಅವಳಿಗೆನಿಸುತ್ತಿತು : ಕಾಲ ನಿಂತಿರಬೇಕು. ವೇಳೆ ನಿಲ್ಲುವುದು ಎಂದಿಲ್ಲವೆ ? ದುಡಿದು ದುಡಿದು ದಣಿದಾಗ ಎಂದಾದರೊಮ್ಮೆ ಯಾವ ಚಲನೆಯೂ ಇಲ್ಲದೆ ಪ್ರತಿಯೊಂದೂ ತಣ್ಣ ಗಾಗುವುದಿಲ್ಲವೆ ? - ಅತ್ತೆ ಕೇಳಿದಳು : 'ನಗರದಾಗೂ ಇಂಗೇ ಇರ್ತೇತೊ ಯಾನೊ ? ತನಗೇನು ಗೊತ್ತು ? ಇರಬಹುದು, ಇಲ್ಲದಿರಬಹುದು. ಆದರೆ ಅಷ್ಟಕ್ಕೇ ನಿಲ್ಲಿಸಿಬಿಟ್ಟರಲ್ಲ, ಅತ್ತೆ ? - ಆ ಘಳಿಗೆಯಲ್ಲಿ ತಾನಾದರೂ ಅದೇ ಯೋಚನೆ ಮಾಡುತ್ತಿದ್ದೆನಲ್ಲ ? ಆದರೆ ಒಂದು ವಿಷಯ : ನಗರದಲ್ಲಿ ಮಳೆ ಸುರಿದರೇನು ? ಬಿಟ್ಟರೇನು ? ತನಗೂ ಅದಕ್ಕೂ ಏನು ಸಂಬಂಧ ? - ಮಳೆಯ ಭೋರ್ಗರೆತ ವಾಲಗದ ಸದ್ದಿನಂತೆ ಕೇಳಿ ಬರತೊಡಗಿತು ಸುಭದ್ರೆಗೆ.