ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು ೧೮೩

            ಆಗ ದೇವತೆಗಳು ಅಳುವ ಬದಲು ನಗುತ್ತಿದ್ದರೇನೊ. ಅಥವಾ, ಸಿಟ್ಟಿನಿಂದ ಕೂಗಾಡು 
        ತ್ತಿದ್ದರೊ?
           "ನೀ ನನ್ನ ಮದುವೆಯಾಗ್ತೀಯಾ, ಸುಬ್ಬಿ ?" 
           ಎಷ್ಟು ಇಂಪಾಗಿತ್ತು ಧ್ವನಿ, ಎದೆಯೊಳಗೇನೋ ಕುಪ್ಪಳಿಸಿದ ಹಾಗಾಯಿತು ತನಗೆ. 
           ತಾನು ಕೇಳಿದ್ದೆ: 
           "ಏ, ಅದೆಂಗಾತದೆ " 
           "ಯಾಕೆ ?ನೀನು ಯಾರ ಹೆಂಡತೀನೂ ಅಲ್ವಲ್ಲ?"
           "ಇಸ್ಸಿ" 
           ಮಾತಿಗೆ ಅರ್ಥ ಬೇಡವೆ ? 
           ಅವರು ಕೇಳಿದ್ದರು : 
           "ಅಂದರೆ ? ನಾನು ಒಪ್ಪಿಗೆ ಇಲ್ಲ ಅಂತಲಾ ?"
           "ನಿಮ್ಮನ್ನ ನಾನು ಒಪ್ಕಂಡು ಎಷ್ಟೋ ವರ್ಸ ಆಯ್ತು." 
           ಅದು ನಿಜ. ಸಾವಿರ ಬಾರಿಗೂ ನಿಜ. ಚಿಕ್ಕವಳಿದ್ದಾಗಿಂದ ಅವರನ್ನೇ ಅಲ್ಲವೆ ತಾನು 
       ಗ೦ಡ ಎ೦ದು ಭಾವಿಸಿದ್ದುದು ?
           ಅವರೆಂದಿದ್ದರು : 
           "ಎಲಾ ಕಳ್ಳಿ! ಇಷ್ಟು ದಿನ ಹೇಳೇ ಇರ್ಲಿಲ್ಲ..." 
           "ನಾಚ್ಕೆ."
           "ಹಾಗಾದರೆ ನಡಿ. ದಿಬ್ಬದ ಹೊಂಡಕ್ಕೆ ಹೋಗೋಣ. ನಾಚ್ಕೆ ಬಿಟ್ಟು ಒಪ್ಪಿಗೆ 
       ಅನ್ನೋದನ್ನೆ ತೋರಿಸ್ಕೊಡು."
           ಡವಡವನೆಂದಿತ್ತು ತನ್ನ ಎದೆಗುಂಡಿಗೆ. ತುಸು ಕಂಪಿಸುವ ಸ್ವರದಲ್ಲಿ ತಾನು ಪ್ರಶ್ನಿಸಿದ್ದೆ :
           "ಹೆಂಗೆ?"
           "ತುಟಿಗೆ ತುಟಿ..."
           "ಥುತ್! ! ಥುತ್ !"
           "ಹಾಗಾದರೆ ಠು ಬಿಟ್ಟೆ."
           "ನೀವು ಕೆಟ್ಟೋರು."
           ತನ್ನ ಪಾದಗಳು ನೆಲಕ್ಕೆ ಅಂಟಿಕೊಂಡುವು ಒಂದು ಕ್ಷಣ.
           "ಯಾಕೆ ? ನಿಂತುಬಿಟ್ಟೆಯಲ್ಲ ! ಎತ್ಕೊಂಡು ಹೋಗ್ಲೇನು ?"
           "ನನಗೆ ಭಯ ."
           "ನಾನಿದೀನಿ ಸುಬ್ಬೀ.” -
           ಶವ ಹದ್ದುಗಳು. ತಾವು ಓಡಿ ಬಂದೆವು...
           ನಾನಿದೀನಿ ಸುಬ್ಬಿ-ಎಂದು ಅವರು ನುಡಿದಾಗ ಎಷ್ಟೊಂದು ಧೈರ್ಯವಂತರಂತೆ
       ಕಂಡರು !
           ನಾನಿದೀನಿ ಸುಬ್ಬಿ. ಅದೇ ಕೊನೆಯ ಮಾತು. ಅದೇ ಕೊನೆಯ ಮಾತು. 
           ...ಕಿಟಿಕಿಯ ಬಳಿ ನಿಂತು ಯೋಚಿಸುತ್ತಿದ್ದ ಸುಭದ್ರೆಯ ಕಣ್ಣುಗಳು ಭಾರವಾದುವು.