ಈ ಪುಟವನ್ನು ಪರಿಶೀಲಿಸಲಾಗಿದೆ

౧೮೪ ನೋವು

ಹಾಗೆಯೇ ನಿದ್ದೆ ಬಂದು ತಾನು ಕೆಳಗೆ ಉರುಳಬಹುದು ಎನಿಸಿತು. ಆದರೆ ಮರುಕ್ಷಣವೇ ಮಂಪರಿನ ಪರದೆ ಸರಿದು ಎಲ್ಲವೂ ಸ್ಪಷ್ಟವಾಗತೊಡಗಿತು ಸುಭದ್ರೆಗೆ. - ನಾನಿದ್ದೀನಿ ಸುಬ್ಬೀ- ಎಂದು ಆತ ಹೇಳಿದುದು ಆಡಂಬರದ ಮಾತು, ನಟನೆ, ಕೃತ್ರಿಮ. ಅದು ನಿಜವಾಗಿದ್ದರೆ ಬೇರೆ ಮದುವೆಯಾಗುತ್ತಿದ್ದರೆ ಅವರು ? ಬೇರೆ ಮದುವೆ? ಬೇರೆ ಎನ್ನುವುದು ಸರಿಯೆ ? ನನ್ನನ್ನ ಅವರು ಮದುವೆಯಾಗಲಿಲ್ಲ? ತನಗೆ ತಾಳಿ ಕಟ್ಟಿರಲಿಲ್ಲವಲ್ಲ ? ಹೊಸಳ್ಳಿಯಿಂದ ಮುನಿಸಾಮಿ ಬಂದು ವಾಲಗ ಬಾರಿಸಲಿಲ್ಲವಲ್ಲ ? ಈಗ ತನಗೆ ಕೇಳಿಸುತ್ತಿರುವುದು ವಾಲಗದೆ ಸದ್ದು. ನಗರದಿಂದ. ರಂಗಣ್ಣನಿಗೆ ಇನ್ನೂ ಚೆನ್ನಾಗಿ ಕೇಳಿಸುತ್ತಿರಬಹುದು. ರಂಗಣ್ಣ– - ಅಣ್ಣನಾದವನೇ ಕತ್ತು ಹಿಸುಕಿದ. ಆದರೆ, ಅಣ್ಣನ ತಪ್ಪೇನಿದೆ ಇದರಲ್ಲಿ? ಹೆತ್ತವರಿಗೆ ಹೆದರಿಕೊಂಡು ತನ್ನನ್ನು ಮರೆತವರು ಅವರೇ ಅಲ್ಲವೆ? ಅತ್ತೆ ಹೇಳಿದ್ದಾರೆ : ಈ ವರ್ಷವೇ-ನವರಾತ್ರಿಗೆ ಎಂದರಲ್ಲವೆ? ತನ್ನ ಮದುವೆ. ಹೊಸಳ್ಳಿಯ ಗೌಡರ ಮಗ ವರ, ಮುನಿಸಾಮಿ ಅವರ ಜತೆಯಲ್ಲೇ ಬರುವನೊ ? ಮುಂಚಿತ ವಾಗಿಯೆ ಹಾಜರಾಗುವನೊ ? - ಆ ವರನನ್ನು ತಾನು ನೋಡಿದ್ದುಂಟು. ಆದರೆ, "ನಿಮ್ಮನ್ನೆ ನಾನು ಒಪ್ಕಂಡು ಎಷ್ಟೋ ವರ್ಸ ಆಯ್ತು' ಎನ್ನುವ ಹಾಗಿಲ್ಲ. ತಾನು ಒಪ್ಪಿಕೊಂಡವರಿಗೆ ಬೇರೆ ಮದುವೆ. ಇನ್ನು ತನಗೂ ಬೇರೆ ಮದುವೆ. .ಸುಭದ್ರೆಯ ಗಂಟಲೊಳಗೇನೋ ಗೊರಗೊರ ಸದ್ದಾಗುತ್ತಿತ್ತು, ಬಾಯಿ ತೆರೆದು ಗಟ್ಟಿಯಾಗಿ ಅರಚಬೇಕು ಅನ್ನಿಸಿತು ಆಕೆಗೆ. ಆದರೆ ಕೊರಳಿನ ಸೆರೆಗಳು ಉಬ್ಬಿಕೊಂಡಿದ್ದುವು. ತನ್ನ ಕತ್ತನ್ನು ಬಲಿಷ್ಟ ಕೈಗಳು ಒತ್ತುತ್ತಿದ್ದಂತೆ ಭಾಸವಾಯಿತು. ಸುಭದ್ರೆಯ ಮೈಯೆಲ್ಲ ಒಮ್ಮೆ ನಡುಗಿತು. ಕಂಕುಳಲ್ಲಿ ಬೆವರ ಹನಿ ಮೂಡಿತು. ಮೈಯೆಲ್ಲ ಒಮ್ಮೆ ನಡುಗಿತು ಕಂಕುಳಲ್ಲಿ ಬೆವರ ಹನಿ ಮೂಡಿತು ಮೈ ತಣುಪೇರಿತು - ವಾಲಗದ ಸದ್ದಿಲ್ಲ. ಎಲಾ! ಇದೇನು ? ಏನಾಗಿರಬಹುದು ? ನಗರದಲ್ಲಿ– ಸುಭದ್ರೆ ಕಣ್ಣುಗಳನ್ನು ಅರಳಿಸಿ ಕಿಟಿಕಿಯಿಂದ ಹೊರಕ್ಕೆ ನೋಡಿದಳು. ಮಳೆ ನಿಂತಿತು, ಪೂರ್ತಿಯಾಗಿ. - ಕಡಮೆಯಾಗಿ, ಹನಿಯಾಗಿ, ಅದು ನಿಂತೇ ಹೋದುದನ್ನು ತಾನು ಕಾಣಲಿಲ್ಲವಲ್ಲ- ಎಂದು ಸುಭದ್ರೇಗೆ ಆಶ್ಚರ್ಯವಾಯಿತು. ಹಾಗಾದರೆ ತಾನು ಕೇಳುತ್ತಿದ್ದುದು ವಾಲಗದ ಸದ್ದನ್ನೆಲ್ಲ, ಮಳೆಯ ಸಪ್ಪಳವನ್ನು, ಅಲ್ಲಿ ಮದುವೆ ನಿಂತಿಲ್ಲ. ಜುಟ್ಟಿನ ಭಟ್ಟರು ಮಂತ್ರ ಹೇಳುತ್ತಿರಬೇಕು ಈಗ... ಕಿಟಿಕಿಯ ಕಂಬಿಗಳಿಂದ ಕೈಗಳನ್ನು ಕಿತ್ತು, ಕೊಠಡಿಯಿಂದ ಹೊರಬರಲು ಸುಭದ್ರೆ ಯತ್ನಿಸಿದಳು. ಎಡಗಾಲಿಗೆ ಜೋಮು ಹಿಡಿದಿತ್ತು, ಬೀಳುವ ಹಾಗಾಯಿತು. ಮತ್ತೆ ಕಿಟಕಿಯ ದಂಡೆಗೆ ಆತು ನಿಂತಳು. - ಈ ಜೋಮು ದೇಹವನ್ನೆಲ್ಲ ಆವರಿಸಿ, ಸಹಸ್ರ ಸಹಸ್ರ ಸೂಜಿಗಳು ಶರೀರವನ್ನು