ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ ನೋವು ಜವಾಬುದಾರಿಯ ಹೊರೆಹೊತ್ತ ಹೆಗಲು ಬಾಗುವುದು ಸ್ವಾಭಾವಿಕ. ಇಷ್ಟಿದ್ದೂ ಮಗಳಿಗಾಗಿ ಔಷಧಿ ತರಲೆಂದು ಅಯ್ಯನವರಲ್ಲಿಗೆ ಅಣ್ಣ ಹೋದುದು ದೊಡ್ಡ ವಿಷಯ.

   ಹುಡುಗ ಹುಚ್ಚು ಹುಚ್ಚು ಮಾತುಗಳನ್ನೇನೋ ಆಡಿದನಲ್ಲ? ಇನ್ನು ಈ ಮನೇಲಿ ಕಾಯಿಲೆ ಏನ್ ಬಂದ್ರೂ ಅವನೇ ನೋಡ್ಕೋತಾನಂತೆ... ಆಗಲಿ, ಆಗಲಿ. ಹಾಗೇ ಆಗಲಿ... ಸದ್ಯಃ ಸುಬ್ಬಿಯ ಜ್ವರಕ್ಕೆ ದೊಡ್ಡಮ್ಮ ಇಷ್ಟು ಔಷಧಿ ಕೊಟ್ಟರೆ ಸಾಕು.
   ಬಾಗಿಲು ಬಿಟ್ಟು ಪಡಸಾಲೆಯತ್ತ ಮರಳಿದ ನಾಗಮ್ಮಗೆ ಸುಭದ್ರೆ ಮೆಲುದನಿಯಲ್ಲಿ ಕರೆದುದು ಕೇಳಿಸಿತು.
   " అತ್ತೆಮ್ಮಾ, ఒసి బన్నిe..."   
   " ಬಂದೆ ಮೊಗ," ಎನ್ನುತ್ತ ನಾಗಮ್ಮ ಅತ್ತ ಹೋದರು. 
   ...ಪಟೇಲ ಶಾಮೇಗೌಡರು ದಾರಿ ನಡೆದರು. ಮೇಲೇರುತ್ತಿದ್ದ ಸೂರ್ಯನ ತೀಕ್ಷ್ಣತೆ ಹೆಚ್ಚುತ್ತಲಿತ್ತು. ನಿನ್ನೆಯಂತೆಯೇ ಇವತ್ತೂ. ಇನ್ನು ಹೆಚ್ಚೆಂದರೆ ಎರಡು ವಾರ. ಮುಂಗಾರು ಮಳೆ ಆರಂಭವಾಗುವುದು. ಆಗ ಹೊಲದಲ್ಲಿ ಬಿಡುವಿಲ್ಲದ ಕೆಲಸ.
   ಅಬ್ದುಲ್ಲ ಬಂದೊಡನೆ ಮುನಿಯನ ಹೊಲವನ್ನು ಅವನ ಹೆಂಗಸಿಗೆ ಕೊಡಿಸಿಬಿಡಬೇಕು. ಸಿದ್ಧಪ್ಪ ಹಣ ತೆಗೆದುಕೊಂಡು ಹೊರಟುಬಿಟ್ಟುದರಿಂದ ಇಷ್ಟೆಲ್ಲ ಅನರ್ಥವಾಯಿತು. ಅಬ್ದುಲ್ಲನನ್ನು ಒಕ್ಕಲೆಬ್ಬಿಸಿ, ಜಮೀನನ್ನು ತೆರವು ಮಾಡಿಸಿ, ಮುನಿಯನ ವಶಕ್ಕೆ ಕೊಟ್ಟು ಹೋಗಬೇಕಿತ್ತು ಆತ. ತಾವಾಗಲೀ ಹಳ್ಳಿಯ ಇತರ ಪ್ರಮುಖರಾಗಲೀ ಆ ಬಗ್ಗೆ ಏನೂ ಆಸಕ್ತಿ ವಹಿಸಲಿಲ್ಲ ಎಂಬುದು ನಿಜ. ಪ್ರಾಯಶಃ ಮುನಿಯನಿಗೆ ಆಗಲೇ ನ್ಯಾಯ ದೊರಕಿಸಿ ಕೊಟ್ಟಿದ್ದರೆ ಅವನ ಪ್ರಾಣ ಉಳಿಯುತ್ತಿತ್ತೋ ಏನೊ. ಅದೇನಿದ್ದರೂ ಇಡಿಯ ಹಳ್ಳಿಯನ್ನು ಎದುರುಹಾಕಿಕೊಂಡು, ಹೊಲ ಕೊಳ್ಳಲು ಹೋದುದು ಮುನಿಯನ ತಪ್ಪು.
   ಇದರಲ್ಲಿ ಗೋವಿಂದ ಮುನಿಯನಿಗೆ ಸ್ವಲ್ಪ ನೆರವಾದ. ಸಂಶಯವಿಲ್ಲ. ಬಡಗಿ ಅದೇನೋ ಮಾಡಿದನಲ್ಲ. ಹಾಗೆ. ಏನಾದರೂ ಉದ್ಯೋಗ ಕೈಗೊಂಡು ತನ್ನಷ್ಟಕ್ಕೆ ತಾನಿರಬಾರದೆ ಗೋವಿಂದ ? 
   ಶ್ರೀನಿವಾಸಯ್ಯನ ಮನೆ ಬಂತು. ['ನಾನು ಮಾತನಾಡಲೇಬೇಕಾದ ಘಳಿಗೆ ಇದೊಳ್ಳೆಯ ಪೀಕಲಾಟ!']
   ಅಂಗಳದಲ್ಲಿ ಮಲಗಿದ್ದ ಕಂತ್ರಿನಾಯಿ ಎದ್ದು ಒಮ್ಮೆ ಬಗುಳಿತು. ಅಷ್ಟೆ ತನ್ನ ಕೆಲಸ ಎಂದು, ಮುದುಡಿಕೊಂಡು ನಿದ್ದೆ ಹೋಯಿತು.
   ನಾಯಿ ಬಗುಳಿದುದನ್ನು ಕೇಳಿದ ದೊಡ್ಡಮ್ಮ ಮನೆ ಬಾಗಿಲಲ್ಲಿ ಕಾಣಿಸಿಕೊಂಡರು. ಅಲ್ಲೆ ನಿಂತಿದ್ದ ಗೌಡರನ್ನು ನೋಡಿ, "ಯಾರು ಶಾಮಣ್ಣನಾ? ಬಾ, ಕೂತ್ಕೋ, ಏನು ಇಷ್ಟೊಂದು ವಿರಾಮವಾಗಿ ಬಂದೆ?" ಎಂದರು.
   ಗೌಡರು ಸ್ವಲ್ಪವಷ್ಟೇ ಮಂದಸ್ಮಿತರಾಗಿ, “ ಅಯ್ಯನೋರತ್ರ ಒಸಿ ಮಾತಾಡ್ಬೇಕಾಗಿತ್ತು" ఎంದರು.
   "ಸ್ನಾನ  ಮಾಡ್ತಿದಾನೆ, ಇಷ್ಟರಲ್ಲೇ ಬಂದ್ಬಿಡ್ತಾನೆ."
ಮಾತು ಗೀತೆಲ್ಲ ಮುನಿಯನ ವಿಚಾರವಾಗಿಯೇ ಎಂದು ಶ್ರೀನಿವಾಸಯ್ಯನ ತಾಯಿಯ ಊಹೆ. ಹೆಚ್ಚನ್ನು ತಿಳಿಯಲು ಗೌಡರನ್ನು ಅವರು ಕೆದಕಲಿಲ್ಲ. ಬದಲು, "ರಂಗಣ್ಣನನ್ನ