ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು % యునేుర్చే, - .ಅಂತೂ ರಂಗಣ್ಣ ಭಾಗ್ಯನಗರವನ್ನು ತಲಪಿದ. ಊರ ಹೊರಗಿನಿಂದ ಸಿಟಿ ಬಸ್ಸಿನಲ್ಲಿ ಕುಳಿತು ನೇರ ಆಸ್ಪತ್ರೆಗೆ ಹೋದ. ಅವನ ಪಾಧಾಪಕರ ಭೇಟಿ ಸಾಧ್ಯವಾಯಿತು. ಶಟಗೋಪನ್ ಸಿಕ್ಕಿದ. ಬಂದ ಕೆಲಸ ವಾಯಿತು. - ಭೇದಿಗೆ ಜ್ವರಕ್ಕೆ, ತಲೆನೋವಿಗೆ, ಮಲಬದ್ಧತೆಗೆ, ಎಂದೆಲ್ಲ ಕೆಲ ಸಾಮಾನ್ಯ ಔಷಧಿ ಗಳನ್ನು ಕೊಂಡ. - ಔಷಧದಂಗಡಿಯಲ್ಲೇ ಡಾಕ್ಟರರ ಬಾಗೂ ದೊರೆಯಿತು. ಮಾರಾಟದವನು ಹೌಸ್ ಸರ್ಜನ್ ಶಟಗೋಪನ್ ಗೋಸ್ಕರವೇ ಆ ಬಾಗು ಎರಿದುಕೊಂಡ. ಶಟಗೋಪನ್ ಹೇಳಿದುದೂ ಹಾಗೆಯೇ: * ನನ್ನ ಹೆಸರಲ್ಲಿ ಕ್ರೆಡಿಟ್ ಬಿಲ್ ಹಾಕ್ಟಿಡಿ." ರಂಗಣ್ಣನೊಡನೆ ಪಿಸುದನಿಯಲ್ಲಿ ಶಟಗೋಪನ್ ಅಂದ * ಸಿರಿಂಜ್ ಬೇಡ್ವೆ ?" ಇಂಜೆಕ್ಷನ್ ಕೊಡಲು ಕಲಿತಿರಲಿಲ್ಲ ರಂಗಣ್ಣ, " ಈಗ ಬೇಡ,' ಅಂದ... ತಿಂಡಿ ಕಾಫಿ. ಎರಡು ಪಾಕೆಟ್ ಸಿಗರೇಟುಗಳ ಖರೀದಿ. ನಾಲ್ಕೂವರೆಗೆ ಬಸ್ಸು ಸೋಮಪುರದ ಕಡೆಗೆ ಹೊರಟಿತು. ಕಣಿವೇಹಳ್ಳಿಯ ಕಾಲುದಾರಿ ಮೋಟಾರು ರಸ್ತೆಯನ್ನು ಸಂಧಿಸುವಲ್ಲಿ ಕರಿಯ ನಿಂತಿದ್ದ. ಬಾಗಿನೊಡನೆ ಕೆಳಗಿಳಿದ ಯುವಕ 'ಡಾಕ್ಟರನ್ನು ಬಸ್ಸಿನಲ್ಲಿದ್ದವರೆಲ್ಲ ಕೌತುಕದಿಂದ ಗೌರವ ದಿ೦ದ ನೋಡುವವರೇ, - ಕರಿಯ ಬ್ಯಾಗನ್ನು ಇಸಕೊಂಡು ತನ್ನ ತಲೆಗೇರಿಸಿದ. ಕತ್ತಲಾಗುವುದರೊಳಗೆ ಅವರು ಹಳ್ಳಿ ತಲಪಿದರು. .ಅಂದು ರಾತ್ರೆ ಎಂಟರ ಸುಮಾರಿಗೆ ಗೋವಿಂದ ಭಾಗ್ಯನಗರದಿಂದ ಕಣಿವೇಹಳ್ಳಿಗೆ వాబెనాదా. - ಅವನ ಜತೆಯಲ್ಲಿ ಅಪರಿಚಿತರು ಒಬ್ಬರು ಇದ್ದರು. 8. ಪದ್ಮನಾಭನ ಕೊಠಡಿಯ ಬಾಗಿಲು ಮುಚ್ಚಿತು, ಹೊರಗಡೆ ನಿಂತು ದೊಡ್ಡಮ್ಮ ঠতে3ে33: म " ಪದ್ಮ, ವಿ ಪದ್ಮ." - ಉತ್ತರ ಬರಲಿಲ್ಲವೆಂದು ಅವರು ಬಾಗಿಲನ್ನು ತಳ್ಳಿದರು. ಅದು ತೆರೆದುಕೊಂಡಿತು. ಒಳಗಿನಿಂದ ಅಗಣಿ ಹಾಕಿರಲಿಲ್ಲ. ಅಲ್ಲಿ ಕತ್ತಲು. ಅದೇನೂ ದೊಡ್ಡಮ್ಮನಿಗೆ ಅಡ್ಡಿಯಾಗದು. ಆ ಮನೆಯ ಅಂಗುಲ ಅಂಗುಲವನ್ನೂ ಅವರು ಬಲ್ಲರು.