ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೦ ನೋವು



ಒಬ್ಬನನ್ನು ಸಂಬಳಕ್ಕಿಟ್ಟು ಈ ಊರಲ್ಲೆಯೊಂದು ಹೋಟೆಲು ತೆರೀಬೇಕೂಂತ ಇವರ ಅಪೇಕ್ಷೆ." ಮೌನಪ್ರಿಯಂನಾದ ಗೋಪಾಲ ಸಣ್ಣನೆ ನಕ್ಕ, " ಹೌದೆ ?" ಎಂದರು ಶ್ರೀನಿವಾಸಯು, ಬೆರಗಾಗಿ. ವಿಷ್ಣುಮೂರ್ತಿ ನುಡಿದರು: “ದುಡ್ಡಿನ ಆಸೆಗೋಸ್ಕರ ಅಲ್ಲ ಸ್ವಾಮಿಾ, ಖಂಡಿತ ಅಲ್ಲ, ನನಗೆ ಇಷ್ಟವಾಗಿರೋ ಒಬ್ಬ ಹುಡುಗನಿಗೆ ಸ್ವತಂತ್ರ ಜೀವನ ಮಾರ್ಗ ತೋರಿಸೋಣ ಅಂತ, ಈಗ ಅವನು ನಮ್ಮಲ್ಲಿ ಕ್ಯಾಷಿಯರ್ ಆಗಿದ್ದಾನೆ. ಒಟ್ಟಿನಲ್ಲಿ ಇದಕ್ಕೆ ತಮ್ಮ ಆಶೀರ್ವಾದ ಬೇಕು." ಏನು ಹೇಳಬೇಕೆಂದು ತೋಚದೆ ಶ್ರೀನಿವಾಸಯ್ಯ ಗಟ್ಟಿಯಾಗಿ ನಕ್ಕರು. ಸೊಸೆಯ ಕಡೆ ತಿರುಗಿ, " ಅನ್ನ, ಮಜ್ಜಿಗೆ," ಎಂದರು. ಮುಂದೆ ಮಾನದ ಊಟ. ಕೊನೆಯಲ್ಲಿ ಶ್ರೀನಿವಾಸಯ್ಯ, " ನಮ್ಮ ಆಶೀರ್ವಾದ ದೊಡ್ಡದಲ್ಲ, ವಿಷ್ಟುಮುರ್ತಿಗಳೇ, ಮುಖ್ಯವಾಗಿ ಇದಕ್ಕೆ ಹಳ್ಳಿಯ ಪಟೇಲರ ಒಪ್ಪಿಗೆ ಬೇಕು. ನಿನ್ನೆಯವರೆಗಾದರೆ ನಾನು ಹೇಳಿದ ಮಾತನ್ನು ಅವರು ತೆಗೆದು ಹಾಕ್ತಿರಲಿಲ್ಲ, ಇವತ್ತೂ ಹಾಗೆಯೇ ಅಂತ ಧೈರ್ಯವಾಗಿ ಹೇಳಲಾರೆ. ನಾಳೆ ನೀವೂ ಶಾಮೇಗೌಡರನ್ನು ನೋಡಿ." " ನೋಡ್ತೀನಿ,ನೋಡ್ತೀನಿ"ಎಂದರು ವಿಷ್ಣುಮೂರ್ತಿ

ಬೆಳಗ್ಗೆ ಎದ್ದು ಮುಖಮಾರ್ಜನಾದಿಗಳು ಮುಗಿದೊಡನೆ ವಿಷ್ಟುಮನೂರ್ತಿ, "ಸ್ವಲ್ಪ ಶಾಮೇಗೌಡರಲ್ಲಿಗೆ ಹೋಗಿ ಬರೋಣವೆ, ಗೋವಿಂದರಾವ್ ?" ಎಂದು ಕೇಳಿದರು. " ನಡೀರಿ, ಎಂದ ಗೋವಿಂದ. ವಿಷ್ಣುಮೂರ್ತಿ ಆರು ಮೂಸಂಬಿ ಹಣ್ಣುಗಳನ್ನು ತೆಗೆದು ಹೊರಗಿರಿಸಿ ದರು. ಚೀಲದಲ್ಲಿ ಮತ್ತೂ ಆರು ಉಳಿದುವು, ದೊಡ್ಡದಾದೊಂದು ನಿಂಬೆಯ ಹಣ್ಣೂ ಇತ್ತು, ಆ ಚೀಲವನ್ನು ಕೈಯಲ್ಲಿ ಹಿಡಿದುಕೊಂಡು, ಹೊರಕ್ಕಿರಿಸಿದ ಹಣ್ಣುಗಳ ಕಡೆ ಬೊಟ್ಟ ಮಾಡಿ, " ಗೋವಿಂದರಾವ್, ಇದನ್ನಿಷು ಒಳಕ್ಕೆ ಸಾಗಿಸ್ಟಿಡಿ," ಎಂದರು. ನಕ್ಕೂ ಗೋವಿಂದನೆಂದ: "ಗೌಡರ ಮನೆಗೆ ಸರಿ. ಇಲ್ಲಿಗೆ ಯಾತಕ್ಕೆ ?” " ರಂಪ ಮಾಡ್ಬೇಡಿ, ಒಳಗೆ ಅಜ್ಜಿಯವರ ವಶ ಕೊಟ್ಟು ಬನ್ನೀಪ್ಪ." ಆಗಲಿ ಆಗಲಿ"- ಅಷ್ಟನ್ನು ಮಾಡಿದ ಗೋವಿಂದ, ಮನೆಬಿಟ್ಟು, ವಿಷ್ಣುಮೂರ್ತಿ ಜತೆ ಶಾಮೇಗೌಡರ ಮನೆಯತ್ತ ನಡೆದ. - ಅಪರಿಚಿತನೊಬ್ಬ ಗೋವಿಂದನೊಂದಿಗೆ ಬಂದು ಶ್ರೀನಿವಾಸಯ್ಯನವರಲ್ಲಿ ವಸತಿ ಮಾಡಿದ್ದು ರಾತ್ರೆಯೇ ಶಾಮೇಗೌಡರ ಕಿವಿಗೆ ಬಿದ್ದಿತು, ನೋಡಿದವನೊಬ್ಬ ಬಂದು ತಿಳಿಸಿದ್ದ.