ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು - εό ನಗರಕ್ಕೆ ಹೋದ ಗೋವಿಂದ ಇನ್ನೊಬ್ಬನನ್ನು ಕರೆದುಕೊಂಡು ಬಂದಿದ್ದಾನೆ. ಯಾಕೆ? ಯಾರಿರಬಹುದು ಆತ ? ಯೋಚಿಸಿದಷ್ಟೂ ಸಂದೇಹದ ಸುಳಿ ಗೌಡರನ್ನು ಕೆಳಕ್ಕೆ ಎಳೆಯಿತು. ಇಷ್ಟು ಧೈರ್ಯ ಇವನಿಗೆ,ನೋಡಿಯೇ ಬಿಡೋಣ ಎಂದು .ಮಿಸೆ ಮೇಲೆ ಕೈಯಾಡಿಸಿದ್ದರು ಬಂದವನು ಪೋಲೀಸ್ ಖಾತೆಯವನಿರಬೇಕೆಂದು ಗೌಡರ ಊಹೆ.. ದಫೇದಾರ ಅಥವಾ ಇನ್ಸ್ಪೆಕ್ಟರ್ ಬಂದಿರುವುದು‌

ಸಾದಾ ಉಡುಪಿನಲ್ಲಿ, ಆದರೆ ವೇಷಪಲ್ಲಟ ಯಾಕೆ ? ಇದು ಗೋವಿಂದನ ಕುತಂತ್ರವಿರಬೇಕು. ತಿಳಿಯದ ಹಾಗೆ ಗುಟಾಗಿ ತನಿಖೆ ನಡೆಸಿ–ಮುನಿಯನ ಮರಣಕ್ಕೆ (ಕೊಲೆಗೆ) ಸಂಬಂಧಿಸಿ–ಬಂದವನು ವರದಿ ಒಪ್ಪಿಸಬಹುದು. ಮುಂದೆ ಗುಮಾನಿಯ ಮೇಲೆ ಬಂಧನಗಳಾಗಬಹುದು. ಅದಕಾಗಿ ಪೋಲೀಸ್ ಪಡೆ ಬರಬಹುದು.

ಇಷ್ಟೊಂದು ಅಹಂಕಾರ ! ಒಂದು ಕೈ ನೋಡೋದೇ ಸೈ –ಎಂದು ಗೌಡರು ಮತ್ತೊಮ್ಮೆ ಮಿಾಸೆ ಮುಟ್ಟಿದ್ದರು. ಸಂಜೆಯೇ ಮಗ ರಂಗಣ್ಣ ಮರಳಿದಾಗ ಗೌಡರಿಗೆ ಹೆಮ್ಮೆ ಎನಿಸಿತು, ಬ್ಯಾಗನ್ನು ನೋಡಿ, ಮಗನನ್ನ ಡಾಕ್ಕರಾಗುವಂತೆ ಓದಲು ಬಿಟ್ಟಿದ್ದು ಒಳ್ಳೆದಾಯಿತು. ಸುತ್ತಲಿನ ಹತ್ತಿಪ್ಪತು ಹಳ್ಳಿಗಳಲ್ಲಿ ಯಾರ ಮಗ ಕಟ್ಟಿದ್ದಾನೆ ಡಾಕ್ಟರ್ ಪರೀಕ್ಷೆಗೆ? ಮಗಳಿಗೆ ಜ್ವರವಿನ್ನೂ ಇತು, ರಂಗಣ್ಣ ತಂದ ಔಷಧಿಯಿಂದ ಅದು ಗುಣವಾಗಬೇಕು. ಆಗದೆ ಇದ್ದೀತೆ? ಅಂತೂ ಶ್ರೀನಿವಾಸಯ್ಯನ ಮನೆಗೆ ಹೋಗಿ ಮದ್ದು ಕೊಡಿ, ಎಂದು ಕೇಳುವ ಸಂದರ್ಭ ಒದಗದಿದ್ದರೆ ಸಾಕು ಮಗನನ್ನು ಶಾಮೇಗೌಡರು ಕೇಳಿದ್ದರು: " ಅವುಸದಿ ತಂದಾ?" " ಹೂಂ." " ಏನಂದು ?" " ಬರೇ ಜರ, ಸರೋಗ್ರದೆ." "ಯಾವಾಗ ಕೊಡಿಯಾ ಅವುಸದೀನ ?"

  • ಈಗಲೇ'

" ಕೊಡು ಮತ್ತೆ."

  • ಕೊಟ್ಟೆ."

ಗೋವಿಂದನ ಜತೆ ಅಪರಿಚಿತನೊಬ್ಬ ಬಂದಿರುವ ಸುದ್ದಿ ಆ ರಾತ್ರೆ ಕೆಲ ಕ್ಷಣ ಗೌಡರನ್ನು ಚಿಂತೆಗೀಡುಮಾಡಿದ್ದರೂ ಅವರು ಚೆನಾಗಿ ನಿದ್ರಿಸಿದರು. - ಮಾರನೆಯ ಬೆಳಗ್ಗೆ ಹೊಲದ ಉಳುಮೆಗೆ ಸಂಬಂಧಿಸಿ ಮಾತನಾಡುತ್ತ ನಿಂತಿದ್ದಾಗ ತಮ್ಮ ಮನೆಯ ಕಡೆ ಇಬ್ಬರು ಬರಂತ್ತಿದ್ದುದನ್ನು ಅವರು ಗೌಡರು ಗಮನಿಸಿದರು. ಗೋವಿಂದ ಮತು ಇನ್ನೊಬ್ಬ, ಗೌಡರ ದೃಷ್ಟಿಯನ್ನು ಹಿಂಬಾಲಿಸಿದ ಆಳು–ಹಿಂದಿನ ರಾತ್ರೆ ಸುದ್ದಿ ತಂದವನು–, " ಅವರೇ," ಎಂದ. ಧೋತರ, ಶರಟು, ತಲೆಯ ಕಾಪು ದೃಢಕಾಯ, ಗೌರಾಂಗ, ಕೈಯಲ್ಲಿ ,ಚೀಲ