ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೨

ನೋವು

“ಏನನ್ನ?"
"ವಿಷ್ಣುಮೂರ್ತಿ ಇರೋ ಮನೆ, ಅವನ ಮಕ್ಕಳು..."
"ಸರಿ. ಪದ್ಮನಿಗೆ ಹುಡುಗಿ ಹುಡುಕೋ ವಿಷಯ ಹ್ಯಾಗೆ ಮಾಡೋಣ ? ಗಂಗಾಧರ
ಶಾಸ್ತ್ರಿಗಳಿಗೆ ಹೇಳೋಣವೆ?"
"ಶಾಸ್ತ್ರಿಗಳು ಸೋಮಪುರದಲ್ಲಿ ಹುಡುಕ್ಯಾರು. ಸುತ್ತುಮುತ್ತ ಹಳಿಗಳಲ್ಲಿ
ನೋಡ್ಯಾರು. ನಗರದ ಕಡೆ ಅವರಿಗಷ್ಟು ಬಳಕೆ ಇಲ್ಲ, ಶೀನ."
"నిజ. ಈಗೇನು ಮಾಡೋಣ?"
"ವಿಷ್ಣುಮೂರ್ತಿಗೇ ಒಂದು ಮಾತು ಹೇಳ್ಬಹುದು.ನೋಡೋಣ."
ಅಷ್ಟು ನುಡಿದು ದೊಡ್ಡಮ್ಮ ಅಡುಗೆಮನೆಗೆ ಹೊರಡಲು ಅಣಿಯಾದರು.
ಹೋಗುತ್ತ, " ಏಳು ಶೀನ. ಸ್ನಾನ, ಪೂಜೆ ಮುಗಿಸ್ಬಿಡು," ಎಂದರು.
"ಹೂನಮ್ಮ," ಅಂದರು, ಶ್ರೀನಿವಾಸಯ್ಯ.
...ವಿಷ್ಣು ಮೂರ್ತಿಯನ್ನು ಕರೆದುಕೊಂಡು ಹಳ್ಳಿ ನೋಡಲು ಹೊರಟ ಗೋವಿಂದ
ಕೃಷ್ಣೇಗೌಡನ ಪರಿಚಯವನ್ನು ವಿಷ್ಣುಮೂರ್ತಿಗೆ ಮಾಡಿಕೊಟ್ಟ.
"ಓಟ್ಲೋ? ಭೋ ಸಂತೋಷ. ಬೇಜಾರಾದಾಗ ಕಾಫಿಗೀಫಿ ಕುಡೀಬೌದು," ಎಂದ
ಕೃಷ್ಣೇಗೌಡ.
ಗೊವಿಂದನೆಂದ:
"ವಿಷ್ಣುಮೂರ್ತಿಗಳೇ,ಕೃಷ್ಣೇಗೌಡರು ಸಾಮಾನ್ಯರು ಅಂದ್ಕೊಬೇಡಿ. ಪಟೇಲ
ಶಾಮೇಗೌಡ್ರು ವಯಸ್ನಲ್ಲಿ ಹಿರೇರು. ನನ್ನಂಥ ಹುಡುಗರು ಏನಾದರೂ ಮನಸ್ಸು ಬಿಚ್ಚಿ
ಮಾತಾಡೋದಿದ್ರೆ ಇವರ ಹತ್ರಾನೇ."
ಕೃಷ್ಣೇಗೌಡ ನಕ್ಕು ಅಂದ:
"ಗೋವಿಂದಪ್ಪನ ಮಾತು ನಂಬಬೇಡಿ, ಸೋಮಿಯೋರೆ. ಇವನು ಭೋ ಕಿಲಾಡಿ.
"ವಿಷ್ಣುಮೂರ್ತಿಯೆಂದರು:
"ಹ್ಹೆ ಹ್ಹೆ ! ನಿಮ್ಮ ಪರಿಚಯವಾದ್ದು ನನ್ನ ಭಾಗ್ಯ. ನಗರಕ್ಕೆ ಬಂದಾಗಲೆಲ್ಲ ನಮ್ಮಲ್ಲೇ
ನೀವು ಉಳ್ಕೋಬೇಕು."
ಕೈಗಳನ್ನು ಜೋಡಿಸಿಯೇ ಅವರು ವಿನಂತಿ ಮಾಡಿದರು.
"ಆಗಲಿ, ಆಗಲಿ. ನಗರದಲ್ಲೂ ಇಲ್ಲೂ ಎರಡೂ ಕಡೆ ಎಂಗ್ಮಾಡ್ತೀರಪ್ಪ?"
ಗೋವಿಂದನೆಂದ:
"ಅಲ್ಲಿಯ ರಾಜ್ಯ ಬಿಟ್ಟು ಇವರು ಎಲ್ಲಿಗೆ ಬರೋದುಂಟೆ ?ತಮ್ಮ ಕಡೆಯ ಒಬ್ಬನನ್ನು
ಇಲ್ಲಿ ಇಡ್ತಾರೆ."
ತುಸು ಧ್ವನಿ ತಗ್ಗಿಸಿ ಆತ್ಮೀಯವಾಗಿ ವಿಷ್ಣುಮೂರ್ತಿ ಅಂದರು :
"ನಿಮ್ಮಲ್ಲಿ ಗುಟ್ಟೇನು? ಈ ಹೋಟೆಲು ನನ್ನ ಸ್ವಂತಕ್ಕಲ್ಲ, ನಮ್ಮ ಕಡೆಯ ಒಬ್ಬ
ಹುಡುಗನ ಜೀವನಕ್ಕೆ ಮಾರ್ಗವಾಗ್ಬೇಕೂಂತ ಈ ಏರ್ಪಾಡು."
"ಅಂಗೋ ಸಮಾಚಾರ? ಸರಿ, ಕಾಫಿ ಕುಡಿಯೋರ್‍ಗೆ ಓಟ್ಲು ಯಾರದಾದರೇನು?
ಅಲ್ವಾ ಗೋವಿಂದಪ್ಪ ?"