ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೪

ನೋವು

ವವಳೋ ಹೋಟೆಲು ಮಾಲಿಕನ ಮಗಳು.
ಇವರೆಲ್ಲ ಎಲ್ಲಿರುತ್ತಾರೆ? ಯಾವ ಕೋಣೆಗಳಲ್ಲಿ ?
ಮದುವೆಯಾದ ಮೇಲೆ ಪದ್ಮ ಓದು ಮುಗಿಸಬಹುದು ಅಂದರು. ಆಗ ಅವನ ಹೆಂಡತಿ
ಇಲ್ಲಿಯೇ ಇರುತ್ತಾಳೊ ? ಅಥವಾ ತವರು ಮನೆಯಲ್ಲೊ ?
ಆ ಯೋಚನೆಗಳ ಮಧ್ಯೆ ಭಾಗೀರಥಿಗೆ ಅನಿಸಿತು:
ತಾನೊಮ್ಮೆ ತವರಿಗೆ ಹೋಗಿಬರಬೇಕು.
...ದೊಡ್ಡಮ್ಮ ಬಂದು ದಿನದ ಅಡುಗೆಯ ಆಡಳಿತ ಸೂತ್ರಗಳನ್ನು ವಹಿಸಿಕೊಂಡರು.
ಮಗು ಎದ್ದಿತೆ ? -ಎಂದೊಮ್ಮೆ ನೋಡಿಬಂದ ಭಾಗೀರಥಿ ಲವಲವಿಕೆಯಿಂದ ದೊಡ್ಡಮ್ಮನಿಗೆ
ನೆರವಾದಳು.
...ಆ ದಿನ ಸೂರ್ಯ ನಡುನೆತ್ತಿಗೆ ಬರುವುದಕ್ಕೆ ಮುನ್ನವೇ ಶ್ರೀನಿವಾಸಯ್ಯನವರ ಮನೆಯಲ್ಲಿ
ಎಲೆ ಹಾಕಿದರು. ಪದ್ಮನಾಭನೂ ಜತೆಯಲ್ಲಿ ಕುಳಿತ.
ದೊಡ್ಡಮ್ಮ ಒಂದೆಡೆ ನಿಂತು ನಿರ್ದೆಶಗಳನ್ನಿತ್ತರು. ಭಾಗೀರಥಿ ಬಡಿಸಿದಳು.
ವಿಷ್ಣುಮೂರ್ತಿ ಅಡುಗೆಯನ್ನು ಹೊಗಳುತ್ತ, ಹಳ್ಳಿಯ ಗುಣಗಾನ ಮಾಡುತ್ತ.
ಹೊಟ್ಟೆ ತುಂಬ ಉಂಡರು.
ಶ್ರಿನಿವಾಸಯ್ಯ ಊಟದ ಮಧ್ಯೆ ಆಂದರು :
"ಎಲ್ಲಿಯ ನೀರಿನ ಋಣ ಎಷ್ಟೆಷ್ಟರವರೆಗಿರುತ್ತೊ ಅಷ್ಟರವರೆಗೆ ಆಯಾ ಕಡೆ
ಮನುಷ್ಯ ಇರಲೇಬೇಕು."
"ಪರಮ ಸತ್ಯ, ಪರಮ ಸತ್ಯ" ಎಂದರು ವಿಷ್ಣುಮೂರ್ತಿ.
ಶ್ರಿನಿವಾಸಯ್ಯ ತಮ್ಮ ತಂದೆಯನ್ನು ಸ್ಮರಿಸಿಕೊಂಡಿದ್ದರು. ಆತ ಅಲ್ಲಿಗೆ ಬಂದುದರಿ೦
ದಲ್ಲವೆ ಕಣಿವೇಹಳ್ಳಿ ಅವರ ಊರಾದುದು? ಅವರು ಅಲ್ಲಿ ಹುಟ್ಟಿದುದು? ವಂಶದ ಗಿಡ
ಬೆಳೆದು ಮರವಾದುದು?
ಕೆಲ ನಿಮಿಷ, ಆಲೋಚನೆಗಳ ಜಾಡು ಹಿಡಿದು ಅವರು ನಡೆದರೂ ಬಹಿರಂಗವಾಗಿ
ಏನನ್ನೂ ಹೇಳಲಿಲ್ಲ:
ಸಾಧಾರಣವಾಗಿ ಊಟದ ವೇಳೆಯಲ್ಲಿ ಬಹಳ ಮಾತನಾಡುವವನು ಗೋವಿಂದ, ಇವತ್ತು
ಅವನು ಹೆಚ್ಚಿನ ಮಟ್ಟಿಗೆ ಮೌನವಾಗಿದ್ದ.
ಮಾವನಾಗುವವನ ಮುಂದೆ ನಾಲಿಗೆ ಸಡಿಲ ಬಿಡಲು ಹುಡುಗ ಹಿಂತೆಗೆಯುತ್ತಿದ್ದಾನೆ,
ಎಂದುಕೊಂಡರು ದೊಡ್ಡಮ್ಮ.
ಊಟವಾದ ಮೇಲೆ ಪಡಸಾಲೆಯಲ್ಲಿ ವೀಳ್ಯ ಹಾಕಿಕೊಳ್ಳಲು ಕುಳಿತವರು ಇಬ್ಬರೇ:
ವಿಷ್ಣುಮೂರ್ತಿ ಮತ್ತು ಶ್ರಿನಿವಾಸಯ್ಯ.
"ಇನ್ನು ಹತ್ತೇ ನಿಮಿಷ ಟೈಮು. ನಾವು ಹೊರಡ್ಬೇಕು," ಎಂದು ಹೇಳಿ ಗೋವಿಂದ
ಹೊರಕೊಠಡಿಗೆ ಹೋದ.
ದೊಡ್ಡಮ್ಮ ಬಂದು ಬಾಗಿಲ ಬಳಿ ನಿಂತರು.
"ಅಮ್ಮ ಇನ್ನೂ ಉಂಡಿಲ್ಲ, ಊಟ ಆಗಿದ್ದರೆ ಚೆನ್ನಾಗಿತ್ತು," ಎಂದರು ವಿಷ್ಣುಮೂರ್ತಿ.
ದೊಡ್ಡಮ್ಮ ನಕ್ಕು ಅಂದರು: