ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು

೭೫

“ನಮ್ಮ ಊಟ ದೊಡ್ಡದಲ್ಲ, ಹೆಂಗಸರದು ಯಾವಾಗಲೂ ತಡವೇ."
ನಿಷ್ಕಾರಣವಾದ ವಿಳಂಬಕ್ಕೆ ಅವಕಾಶವೀಯದೆ ವಿಷ್ಣುಮೂರ್ತಿ ಕೇಳಿದರು :
"ಏನು ತೀರ್ಮಾನಿಸೋಣಾಯಿತು?"
ಶ್ರಿನಿವಾಸಯ್ಯ ದೊಡ್ಡಮ್ಮನ ಮುಖ ನೋಡಿದರು.
ಆಕೆ ಅoದರು :
"ಜಾತಕಗಳನ್ನು ಕಳಿಸ್ಕೊಡಿ, ಶೀನ ನೋಡ್ತಾನೆ. ಸರಿಹೋದರೆ ಗೋವಿಂದ ಹುಡುಗೀನ
ನೋಡೋ ಶಾಸ್ತ್ರ ಮುಗಿಸೋಣ. ಹಾಗೇ ನಿಮ್ಮ ಗುರುತಿನವರಿಗೆ ಹೇಳಿ, ನಮ್ಮ ಪದ್ಮನಿಗೆ
ಒಳ್ಳೇ ಸಂಬಂಧ ನಗರದಲ್ಲಿಯೇ ಎಲ್ಲಾದರೂ ಕುದಿರಿಸೋಕಾಗುತ್ತೊ ನೋಡಿ."
ವಿಷ್ಣುಮೂರ್ತಿ, ಸುಣ್ಣ ಮುಟ್ಟಿಸಿ ತೀಡಿ ಉಂಡೆಯಾಗಿ ಮಾಡಿದ್ದ ಹೊಗೆಸೊಪ್ಪಿನ
ಚೂರನ್ನು ಬಾಯಿಯೊಳಕ್ಕೆ ಎಸೆದು,
"ಅರ್ಥವಾಯ್ತು, ಹಾಗೇ ಆಗಲಿ. ಕಿರಿಯವನಿಗೆ ವಧು ದೊರಕಿಸೋ ಜವಾಬ್ದಾರಿ
ನನಗಿರಲಿ," ಎಂದರು.
"ಆಗೋದಾದರೆ ಇಬ್ಬರ ಮದುವೇನೂ ಒಟ್ಟಿಗೆ ಆಗ್ವೇಕು, ಬೇಗ್ನೆ ಈ ವರ್ಷವೇ,"
ಎಂದು ದೊಡ್ಡಮ್ಮ ಸ್ಪಷ್ಟಪಡಿಸಿದರು.
"ದೇವರು ನಡೆಸ್ಕೊಡ್ತಾನೆ," ಎಂದು ಹೇಳಿ ವಿಷ್ಣುಮೂರ್ತಿ ಎದ್ದರು.
ಹೊರಗೆ ಆಳು ತುಂಬಿದ ಬುಟ್ಟಿಯೊಡನೆ ಸಿದ್ಧವಾಗಿದ್ದ.
"ಏನದು ?" ಎಂದು ಕೇಳಿದರು ವಿಷ್ಣುಮೂರ್ತಿ.
"ಗೌಡರು ಕೊಟ್ಟ ರಸಪುರಿ. ರುಚಿ ನೋಡುವುದಕ್ಕೆ ನಮ್ಮ ತೋಟದ್ದೂ ಒಂದಿಷ್ಟು,”
ಎಂದರು ಶ್ರಿನಿವಾಸಯ್ಯ.
"ಮಾವಿನ ಹಣ್ಣಿನ ಸೀಕರ್ಣೆ ಅಂದರೆ ನಮ್ಮವಳಿಗೆ ಇಷ್ಟ. ಮಕ್ಕಳಿಗೂ ಅಷ್ಟೆ.
ಇನ್ನು ನಾಲ್ಕು ದಿವಸ ಅವರಿಗೆ ಹಬ್ಬ... ಅಪ್ಪಣೆ ಕೊಡಿ."
"ಹೋಗಿ ಬನ್ನೀಪ್ಪಾ," ಎಂದು ನುಡಿದು ದೊಡ್ಡಮ್ಮ ಒಳಕ್ಕೆ ನಡೆದರು.
ಶ್ರೀನಿವಾಸಯ್ಯ ಅವರನ್ನು ಬೀಳ್ಕೊಡಲು ಅಂಗಳದವರೆಗೂ ಹೋದರು.
ಭಾಗೀರಥಿ ಊಟ ಮುಗಿಸಿ (ಎದ್ದಿದ್ದ ಮಗುವಿಗೂ ಉಣ್ಣಿಸಿ) ಕೊಠಡಿಗೆ ಬಂದಾಗ
ತಡವಾಗಿತ್ತು. ಗೋಪಾಲನಿಗೆ ಮಂಪರು ಹತ್ತಿತ್ತು. ಅವನ ಮೈ ಮುಟ್ಟಿ ಎಚ್ಚರಿಸಿ ಭಾಗೀರಥಿ ಅಂದಳು : "ರೀ, ರೀ, ನನಗೆ ಏನನ್ಸುತ್ತೆ ಗೊತ್ತಾ ?"

೧೦

ಮೂರು ನಾಲ್ಕು ದಿನಗಳಲ್ಲಿ ಸುಭದ್ರೆ ಮೊದಲಿನಂತಾದಳು. ಮೊದಲಿನಂತೆ ಎನ್ನುವುದು
ಸಮರ್ಪಕವೆನ್ನಿಸದೇನೋ? ರಂಗಣ್ಣ ತಂದ ಸಲ್ಫಾ ಮಾತ್ರೆಗಳನ್ನು ತಿನ್ನಲು ಆಕೆ
ನಿರಾಕರಿಸಿದ್ದಳು. ನಾಗಮ್ಮ ಒತ್ತಾಯಪಡಿಸಿ ನುಂಗಿಸಿದರು. ಅದರ ಪ್ರಭಾವದಿಂದ ಆ