ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೬

ನೋವು

ರಾತ್ರಿ ಕಳೆಯುವುದರೊಳಗೇ ಜ್ವರ ಇಳಿಮುಖವಾಯಿತು. ಮತ್ತೂ ಒಂದು ದಿನ ಅತ್ತೆಮ್ಮ
ಕೊಟ್ಟ ಮಾತ್ರೆಗಳನ್ನು ಅವಳು ತಿಂದಳು. ಜ್ವರ ಪೂರ್ತಿ ಬಿಟ್ಟು ಹೋಯಿತು. ಮುಂದಿನ
ಎರಡು ದಿನಗಳಲ್ಲಿ ನಿಶ್ಯಕ್ತಿಯೂ ಮಾಯವಾಯಿತು.

ಹೀಗೆ ಸುಭದ್ರೆ ದೇ‌ಹಸ್ಥಿತಿಗೆ ಸಂಬಂಧಿಸಿ ಮೊದಲಿನಂತಾದಳು.
ಮಾನಸಿಕವಾಗಿ ಮಾತ್ರ ಅವಳಲ್ಲಿ ತೀವ್ರ ಬದಲಾವಣೆಯಾಗಿತ್ತು.
ಮ್ಲಾನವಾದ
ಮುಖ. ಸ್ನಾನ ಮಾಡುತ್ತಿದ್ದಳು; ಆದರೆ ಸಿಂಗರಿಸಿಕೊಳ್ಳುತ್ತಿರಲಿಲ್ಲ. ಸ್ವಲ್ಪ ಮಂಕು
ಕವಿದವರ ಹಾಗಿತ್ತು ಅವಳ ನಡವಳಿಕೆ.
ತಮ್ಮ ಶಂಕೆಯನ್ನು ಪಿಸುದನಿಯಲ್ಲಿ ಬಹಿರಂಗಪಡಿಸಿದರು ನಾಗಮ್ಮ:
"ದಿಬ್ಬದ್ಹೊಂಡದ ದೆಯ್ಯ ಸೋಂಕಿರೀಕಣ್ಣ. ವೀರಾಚಾರೀನ ಒಸಿ ಕರೆಸಿ ಕೇಳ್ಬಾರ್ದಾ?"
"ಬೇರೆ ಸಂದರ್ಭವಾಗಿದ್ದರೆ ಶಾಮೇಗೌಡರು ಹೂಂ ಅನ್ನುತ್ತಿದ್ದರು. ಆದರೆ ಈ ಸಲ
ಅವರು ಬೇರೆ ಉತ್ತರವಿತ್ತರು:
"ಬ್ಯಾಡ ನಾಗೂ. ಇನ್ನೂ ಎರಡ್ಡಿವ್ಸ. ಸರ್ಹೋತದೆ."
"ಅದೆಂಗೆ ?"
"ದೆಯ್ಯ ಸೋಂಕಿಲ್ಲ ನಾಗೂ. ಅಯ್ಯನೋರ ಚಿಕ್ಹುಡುಗ ಅದಾನಲ್ಲ ಅವನೇ ದೆಯ್ಯ."
"ಅದೇನ್ಮಾತು ?"
"ಅದೊಂದ್ಮಾತು. ಅಷ್ಟು ತಿಳ್ಕೊ, ಸಾಕು."
"ಸುಬ್ಬಿ ಎಳೇ ಮೊಗ."
"ಊ. ಅಲ್ಲಾ ಅಂದ್ನೆ ? ನಿನ್ನ ಮನಸ್ಸಮಾಧಾನಕ್ಕೆ ಮಾರಮ್ನಿಗೆ ಅರಕೆ ಒತ್ಕೊ."
...ಅಣ್ಣನೊಡನೆ ಮಾತನಾಡಿ ಇತ್ಯರ್ಥವಾಗದೇ ಹೋದ ವಿಷಯವನ್ನು ನಾಗಮ್ಮ
ಅಳಿಯನೊಡನೆ ಪ್ರಸ್ತಾಪಿಸಿದರು.
"ಸುಬ್ಬಿ ಯಾಕೋ ಒಂತರಾ ಅವ್ಳಲ್ಲ, ರಂಗ..."
-"ನೀವು ಸುಮ್ಮಿರಿ, ಅತ್ತೆಮ್ಮ. ಜ್ವರ ಬಿಟ್ಟಿದೆ, ಸರ್ಹೋಗ್ತಾಳೆ."
"ಇಂಗ್ಲೀಸು ಅವುಸದಿ, ಆಲು ಗೀಲು ಜಾಸ್ತಿ ಕುಡೀಬೇಕು: ಅಲ್ಲವಾ ರಂಗ ?"
"ಹೂಂ ಅತ್ತೆಮ್ಮ. ನಮ್ಮಲ್ಲೇನು ಹಾಲಿಗೆ ಕಮ್ಮಿನಾ ? ಕುಡಿಸಿ"
"ಆದರೂ ಮಾರಮ್ಮನಿಗೊಂದು ಅರಕೆ ಒತ್ಕೊಳ್ಳೋದು ಮೇಲು ಅನಿಸ್ತೇತೆ."
"ಅಷ್ಟಾದರೂ ಮಾಡದೆ ಬಿಟ್ಟೀರಾ ? ಒತ್ಕೊಳ್ಳಿ, ಯಾರು ಬೇಡ ಅಂತಾರೆ ? ಗುಡಿ
ಮೇಲಿನ ದೇವರಿಗೂ ಒಂದ್ಹರಕೆ ಬಿತ್ಕೊಂಡ್ರೆ ಚೆನ್ನೆ."
"ಊನಪ್ಪ ರಂಗ, ಅಂಗೇ ಮಾಡಾನ."
"ಮೂಲೇಲಿ ಮೈ ಮುದುಡ್ಕೊಂಡು, ಕುಂತ್ಕೊಳ್ಳೋ ಬದಲು ಒಂದಿ‌‌‌‌‌‌‌‌‍‍‍‍‍‍‍‍‍‍‍‍‍‍‍‍‍‍‍‍‍‍‍‍‌‌‌‌‌‌‌‍‌‌‌‌‌‌ಷ್ಟು ಆಚೀಚೆ
ಓಡಾಡು ಅನ್ನಿ ಸುಬ್ಬಿಗೆ."
"ಯೋಳ್ತೀನಿ. ಅಯ್ಯನೋರ ಚಿಕ್ಹುಡುಗ ಏನ್ಮಾಡ್ದ ?"
"ಏనిల్ల, ಏనిల్ల. ಆಟಕ್ಕೆ ಕರ್ದ ಅಷ್ಟೇ."
"ನೀನೂ ಓಗ್ಲಿಲ್ವ ?"
ಆ ಬೇಸರದ ಮಧ್ಯೆಯೂ ನುಸುಳಿ ಬಂದ ನಗೆಯನ್ನು ಹತ್ತಿಕ್ಕಿ ರಂಗಣ್ಣನೆಂದ: