ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೬. ನೋವು ನಿನಗೂ ಮುನಿಯನ ಕುಟುಂಬಕ್ಕೂ ರಾಜಿಯಾಗದೆ ಅಂತ ಪತ್ರ ಬರಸ್ಬೇಕು. ಅದು ದೊಡ್ದಲ್ಲ. ನಾಳೇನೇ ಮಾಡ್ಸಾನ." "ಊಂ." " ಏಳು, ಓಗು."

 ಉಳಿದಿದ್ದ ತುಸು ಅಳಲನ್ನು ಕೊನೆಯ ಬಾರಿಗೆ ಬಿಕ್ಕಿ ಬಿಕ್ಕಿ ಹೊರಚೆಲ್ಲಿ, ನೀಳವಾಗಿ ಉಸಿರೆಳೆದು ಬಿಟ್ಟು, ಆಬ್ಬುಲ್ಲ ಗೌಡರ ಪಾದಗಳಿಗೆ ಮತ್ತೊಮ್ಮೆ ನಮಿಸಿದ.
 ತೀರಾ ಒಣಗಿದ್ದ ಧ್ವನಿಯಲ್ಲಿ ಅವನೆಂದ:
 " ನೀವು అಲ್ಲಾ ಇದ್ದ ಹಾಗೆ."
 " ಅಲ್ಲಾ ಮ್ಯಾಕಿದ್ದಾನೆ, ಆಬ್ದುಲ್ಲ. ನೀನು ಓಗು."
  ಅಬ್ದುಲ್ಲ ಎದ್ದು ನಿಂತ. ಆದರೆ ಮತ್ತೂ ಹೊರಡಲು ಹಿಂಜರಿಯುತ್ತಿದ್ದುದನ್ನು ಗಮನಿಸಿದ ಗೌಡರು ತಾವೂ ಎದ್ದು, "ಓಗು ನಿದ್ದೆಮಾಡು," ಎಂದರು.
  ಮುದುಡಿದ್ದ ಎರಡೂ ಕೈಗಳನ್ನು ಪುನಃ ಜೋಡಿಸಿ, ಬಾಗಿ ನಮಿಸಿ, ತಾನು ಯಾರಿಗೂ ಅಡ್ಡಿಯಾಗಬಾರದೆನ್ನುವಂತೆ ಬಾಗಿಲ ಚೌಕಟ್ಟಿಗೆ ಮೈ ತಗಲಿಸಿಕೊಂಡು ಅಬ್ದುಲ್ಲ ಅಂಗಳ ಕ್ಕಿಳಿದ. 
  ಮಳೆಯ ರಭಸ ಕಡಮೆಯಾಗಿತ್ತು.  ಮಿಂಚು ಆಗಾಗ್ಗೆ ಕಣ್ಣು ಒರೆಸಿ ಕೋರೈಸುತ್ತಿತ್ತು; ಗುಡುಗು ತಬ್ಬಿಸುತ್ತಿತ್ತು.
  ಅಬುಲ್ಲ ಬೇಗಬೇಗನೆ ಹೆಜ್ಜೆ ಇರಿಸುತ್ತ ಹೊರಟುಹೋದ.

...... ಹೋಗಿ ನಿದ್ದೆಮಾಡು–ಎಂದು ಅವನಿಗೇನೋ ಗೌಡರು ಅಂದಿದ್ದರು. ಆದರೆ, ಸ್ವತಃ ಅವರನ್ನು ಆ ರಾತ್ರೆ ನಿದ್ದೆ ಬಹಳ ಹೊತ್ತು ಕಾಡಿಸಿತು.

  ಮಳೆ ಮಧ್ಯರಾತ್ರಿಯವರೆಗೂ ಸಣ್ಣನೆ ಬರುತ್ತಲಿದ್ದು ಕೊನೆಗೊಮ್ಮೆ ನಿಂತು ಹೋಯಿತು. ಆತನಕ ಬೀಳುತ್ತಿದ್ದ ಹನಿಗಳ ಸದ್ದಿಗೆ ಕಿವಿಗೊಡುತ್ತ ಗೌಡರು ಯೋಚಿಸಿದರು:
  ಕೋರ್ಟಿನಲ್ಲಿ ಅಬ್ದುಲ್ಲನ ಮೇಲಣ ಮೊಕದ್ದಮೆ ಎಲ್ಲಿ ತನಕ ಬಂದಿದೆಯೋ? ಮುನಿಯನ

ಪರ ವಾದಿಸಿರುವ ವಕೀಲ ಎಂಥವನೋ ? ನ್ಯಾಯಸ್ಥಾನದ ಹೊರಗಡೆ ಆಗುವ ರಾಜಿಗೆ ಅವನೇನು ಅಡ್ಡಿಮಾಡುವನೊ? ನಿಂಗಿ, ಆಕೆಯ ಮಗ, ಅಬ್ದುಲ್ಲ ಇವರು ಮೂವರನ್ನೂ ನಗರಕ್ಕೆ ಕರೆದುಕೊಂಡು ಹೋಗುವುದು ಆಗದ ಮಾತು. ರಾಜೀಪತ್ರವನ್ನು ಇಲ್ಲಿಯೇ ಮಾಡಿಸಬೇಕು. ಅದನ್ನು ನಗರಕ್ಕೆ ಒಯ್ದು ಕಾನೂನಿಗೆ ಸಂಬಂಧಿಸಿದ ಕೆಲಸಮಾಡಿ ಮುಗಿಸು ವವರು ಯಾರು? ಗೋವಿಂದನಿಗೆ ಅದನ್ನು ವಹಿಸಿಕೊಡಬೇಕು. ಆತ ನಡುವೆ ಪುಢಾರಿ ಕೆಲಸವನ್ನೇನಾದರೂ ಮಾಡಿ ತೊಂದರೆ ಕೊಟ್ಟರೊ? ಅವನು ಹದ್ದುಮಿಾರಿ ಹೋಗದ ಹಾಗೆ ಬಿಗಿಯಾಗಿ ವರ್ತಿಸಬೇಕು. ನಾಳೆ ಬೆಳಗ್ಗೆಯೇ ಅವನನ್ನು ಕರೆಸಿ ಮಾತನಾಡಬೇಕು...

   ಒಂದು ಕ್ಷಣ ಗೌಡರಿಗೆನ್ನಿಸಿತು : ಅಬ್ದುಲ್ಲನ ಪ್ರಕರಣದ ವಿಷಯದಲ್ಲಿ ಶ್ರೀನಿವಾಸಯ್ಯ ನವರ ಸಲಹೆ ಪಡೆಯುವುದು ಬೇಡವೆ ತಾವು? ಅವರಿಂದ ಆಜ್ಞಪ್ತನಾದರೆ ಗೋವಿಂದ ಸರಿಯಾಗಿ ನಡೆದುಕೊಳ್ಳಬಹುದು.
   ಮರುಕ್ಷಣವೆ, ಅಂಥ ಯೋಚನೆಗಾಗಿ ಗೌಡರು ತಮ್ಮನ್ನು ತಾವೇ ಟೀಕಿಸಿಕೊಂಡರು :

ತಾವು ಕಣಿವೇಹಳ್ಳಿಯ ಪಟೇಲರು, ಶ್ರೀನಿವಾಸಯ್ಯ ಅಲ್ಲ. ಇತರರ ಹಾಗೆ ಗೋವಿಂದನೂ