ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು ೮೭. ಹಳ್ಳಿಯ ಒಬ್ಬ ಸಾಮಾನ್ಯ ಪ್ರಜೆ. ಗ್ರಾಮ ಶಾಸನಕ್ಕೆ ಅವನು ಹೊರತಲ್ಲ.ತಾವು ಋಜು ಮಾರ್ಗಾವಲಂಬಿಯಾದಷ್ಟು ಕಾಲ ತಮ್ಮನ್ನು ಜರೆಯುವ ಧೈರ್ಯ ಯಾರಿಗಿದೆ ?

    ...... ಯೋಚನೆಗಳು ಮುಗಿದು, ಮಳೆಯೂ ಪೂರ್ತಿಯಾಗಿ ನಿಂತಿದೆ ಎಂದು ಮನವರಿಕೆಬ ಯಾದಾಗ, ಗೌಡರೆದ್ದು ಕೊಟ್ಟಿಗೆಗೆ ಹೋಗಿ ಬಂದರು: ಜಲಬಾಧೆ ತೀರಿಸಿದರು. ತಲೆ ಬಾಗಿಲಿನ ಅಗಣಿ ಹಾಕಿ, ಕಂಬಳಿಯನ್ನು ಕತ್ತಿನವರೆಗೂ ಎಳೆದು, ಕಣ್ಣಗಳನ್ನು ಮುಚ್ಚಿ ಕೊಂಡರು. 
    ಮುಂದೆ ಸ್ವಲ್ಪ ಹೊತ್ತಿನಲ್ಲೇ ಅವರಿಗೆ ನಿದ್ದೆ ಬಂತು. 
    ...... ಬೆಳಗ್ಗೆ ಗೌಡರು ಎದ್ದ ಕೆಲ ನಿಮಿಷಗಳಲ್ಲೇ ಆಳುಗಳು ಬಂದರು.
    ಉತ್ಸಾಹ, ಸಡಗರ. 
    ಉಳುವ ಕೆಲಸ ಆರಂಭವಾದುದನ್ನು ಸ್ವಲ್ಪ ಹೊತ್ತು ಆಳುಗಳ ಮಧ್ಯೆ ಇದ್ದು, ಈಕ್ಷಿಸಿ,
ರಂಗಣ್ಣನನ್ನೂ ಕರೆದುಕೊಂಡು, ಗೌಡರು ಮನೆಗೆ ಮರಳಿದರು.
    ತಮ್ಮನ್ನು ಹಿಂಬಾಲಿಸಿ ಬಂದ ಕರಿಯನಿಗೆ ಅವರೆಂದರು :
    "ಆ ನಿಂಗಿಯನ್ನಿಷ್ಟು ಕರಕೊಂಡ್ಬಾ. ಅವಳ ಹೈದನೂ ಬರ್ಲಿ. ಅಂಗೇ ಆ ಗೋವಿಂದಪ್ಪನಲ್ಲಿಗೆ ಓಗಿ ಯೋಳು : ಪಟೇಲರು ಕರೆದವರೆ: ತಕ್ಸಣ ಬರಬೇಕಂತೆ–ಅಂತ. ಬರ್ತಾ, ಎಂಕಟಪ್ಪನನ್ನೂ ಕರಕೊಂಡ್ಬಾ." *
    ಅಂತಹ ದೌತ್ಯವೆಂದರೆ ಕರಿಯನಿಗೆ ಯಾವಾಗಲೂ ಎರಡು ರೆಕ್ಕೆ ಬಂದ ಹಾಗೇ ಆತ ಹೊರಟುಹೋದ.

ತಮ್ಮ ಆ ದಿನದ ಕಾರ್ಯಕ್ರಮವೇನೇಂಬುದನ್ನು ಮಗನಿಗೆ ಹೇಳಬೇಕು–ಎನಿಸಿತು ಗೌಡರಿಗೆ ಒಮ್ಮೆ. ಆದರೆ ಏನು ಪ್ರಯೋಜನ ? ಅವನು ಅದರಲ್ಲಿ ಆಸಕ್ತಿ ತೋರುವ ಸಂಭವ ಕಡಮೆ. ಎಷ್ಟೋ ಸಲ ಕಾಡಿದ್ದ ಒಂದು ಯೋಚನೆಯ ಚೇಳು ಈಗ ಪುನಃ ಅವರನ್ನು ಕುಟುಕಿತು. ತಮ್ಮ ಅನಂತರ ರಂಗಣ್ಣ ಪಟೇಲನಾಗುವನೆ? ಗೌಡರು ಬಲ್ಲರು –ಆಗ ಲಾರ. ಮುಂದೆ ಡಾಕ್ಕರಾಗುವವನು ಪಟೇಲ ಯಾಕಾದಾನು? ಎರಡನೆಯ ಸಂತಾನವೂ ಗಂಡಾಗಿದ್ದಿದ್ದರೆ ಕಿರಿಯವನು ಹಳ್ಳಿಯಲ್ಲೇ ಇದ್ದುಕೊಂಡು ಪಟೇಲನಾಗುತ್ತಿದ್ದ. ಗಾಮದ ಹಿರಿತನದ ಕಥೆ ಆ ರೀತಿಯಾದರೆ, ಆಸ್ತಿಪಾಸ್ತಿಳ ಗತಿಯೊ ? ಗೇಣಿ ಒಕ್ಕಲುಗಳನ್ನಲ್ಲವೆ ನಂಬಬೇಕು ರಂಗಣ್ಣ? ಸುಬ್ಬಿಯ ಕೈ ಹಿಡಿಯುವವನು ವಕೀಲ, ನಿಜ. ಸರಕಾರದ ವಿಚಿತ್ರ ಕಾನೂನುಗಳಿಂದ ಅವನು ಮನೆತನವನ್ನು ರಕ್ಷಿಸುತ್ತಾನೆ. ಆದರೆ ತಮ್ಮ ಮನೆತನದ ಪೀಳಿಗೆಯಾಗಿ ಈ ಹಳ್ಳಿಯಲ್ಲಿ ಉಳಿಯುವವರು ಯಾರು? +.

  ತಮ್ಮ ಅನಂತರ ಕೃಷ್ಣೇಗೌಡನ ಮಗ ಪಟೇಲನಾಗುತ್ತಾನೆ. ಆಗಲಿ, ಆಗಲಿ !......
  ......ನಿಂಗಿಗೆ ಜ್ವರ ಎಂಬುದು ನೆನಪಾಗಿ ಗೌಡರು ಮಗನೊಡನೆ ಅಂದರು:
 "ರಂಗ, ಮುನಿಯನ ಎಣ್ತಿಗೆ ಜರವಂತೆ. ಮಾತ್ರೆ ಗೀತ್ರೆ ಯಾನಾದರೂ ಇದ್ದರೆ ಕೊಡು." 
  ರಂಗಣ್ಣನಿಗೆ ತಂದೆ ಹಾಗೆ ಕೇಳಿದರೆಂದು ಹೆಮ್ಮೆ. 
" ಕೊಡ್ತೀನಿ," ಎಂದ ಆತ. 
  ಸೂರ್ಯನ ಹೊಂಗಿರಣಗಳು ಕಣಿವೇಹಳ್ಳಿಯನ್ನು ಬೆಳಗುತ್ತಿದ್ದುವು. ದೀರ್ಘ ಸ್ನಾನ