ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ೮೮ ನೋವು

ದಿಂದ ಶುಚಿರ್ಭೂತವಾಗಿದ್ದ ಗೌಡರ ಮನೆ, ಅಂಗಳ ಎಲ್ಲವೂ ಮೈಕಾಯಿಸಿಕೊಳ್ಳುತ್ತಿದ್ದುವು. ಸುಭದ್ರೆ ಅಡುಗೆ ಕೆಲಸದಲ್ಲಿ ನಾಗಮ್ಮನಿಗೆ ನೆರವಾಗುತ್ತ ಒಳಗಿದ್ದಳು. ರಂಗಣ್ಣ ಬ್ಯಾಗಿನಿಂದ ಆರು ಮಾತ್ರೆಗಳನ್ನು ತೆಗೆದು ಪುಡಿಕೆ ಕಟ್ಟಿದ. ಪಡಸಾಲೆಯಲ್ಲಿ ರಾತ್ರೆ ಹರಡಿದ್ದ ಬಟ್ಟೆಗಳು ಒಣಗಿದ್ದುವು, ಗೌಡರು ಅವನ್ನು ಎತ್ತಿ ಮಡಚಿದರು... ...... ನಿಂಗಿಗೆ ಗೌಡರ ಆದೇಶವನ್ನು ಕರಿಯ ಮುಟ್ಟಿಸಿದಾಗ ಆಕೆ ಗೋಗರೆದಳು: " ನಂಗೆ ಜರಾ, ಯಾಕೆ ಕರೆದವರೊ ?

ಕರಿಯನೆಂದ: 

" ಸುಮ್ಕೆ ಐದನ್ನ ಕರಕೊಂಡು ಓಗು. ಚಿಕ್ಕ ಗೌಡರು ಅವುಸದಿ ಕೊಡ್ತವರೆ." ರಂಗಣ್ಣ ಡಾಕ್ಟರಾಗುವವನೆಂಬುದನ್ನೇನೂ ನಿಂಗಿ ಅರಿಯಳು. ದೊಡ್ಡ ಗೌಡರು ಕೊಟ್ಟರೇನು? ಚಿಕ್ಕ ಗೌಡರು ಕೊಟ್ಟರೇನು? ಔಷಧಿ ಬೇಡಿ ತರಲು ಅಯ್ಯನವರಲ್ಲಿಗೆ ಮಗನನ್ನು ಕಳುಹಿಸಿದರಾದೀತು ಎಂದುಕೊಂಡಿದ್ದಳು ಆಕೆ. ಮೊದಲ ಎರಡು ದಿನ ಈ ಜ್ವರ ದಲ್ಲೇ ತಾನು ಸತ್ತರೆ ವಾಸಿ ಎಂದಿದ್ದವಳು, ಮುಂದೆ ಜ್ವರ ಇಳಿಯದಿದ್ದಾಗ, ಮಗನ, ಮುಖ ನೋಡಿ, ತಾನು ಸತ್ತರೆ ಇವನಿಗೆ ಯಾರು ದಿಕ್ಕು ?–ಎಂದು ದುಃಖಿಸಿ, ಮದ್ದು ಸ್ವೀಕರಿಸುವ ತೀರ್ಮಾನಕ್ಕೆ ಅವಳು ಬಂದಿದ್ದಳು. ಈಗ ಅಯ್ಯನವರಲ್ಲಿಗೆ ಹೈದ ಹೋಗುವ ಬದಲು ಅವನೂ ತಾನೂ ಗೌಡರಲ್ಲಿಗೆ ಹೋದರಾಯಿತು ಎಂದುಕೊಂಡು, ಕರಿಯನ ಸೂಚನೆಯಂತೆ ನಿಂಗಿ ಎದ್ದಳು. ಅಯ್ಯನವರ ಮನೆಯನ್ನು ಕರಿಯ ತಲುಪಿದಾಗ ಹೊಲದ ಉತ್ತನೆಗೆ ನಿರ್ದೇಶ ಗಳನ್ನಿತ್ತು ಉಸ್ತುವಾರಿಗೆ ಗೋಪಾಲನನ್ನು ಬಿಟ್ಟು ಆಗತಾನೇ ಮನೆಗೆ ಹಿಂದಿರುಗಿದ್ದರು ಶ್ರೀನಿವಾಸಯ್ಯ.-

" ಏನು ಬಂದೆ?"ಎಂದು ಅವರು ಕರಿಯನನ್ನು ಕೇಳಿದರು.

" ಗೋವಿಂದಪ್ನೋರ್ನ ಕರಕೊಂಡ್ಬಾ ಅಂದ್ರು ಗೌಡರು."
ಆ ರೀತಿ ಶಾಮೇಗೌಡರಿಂದ ಆ ಮನೆಗೆ ಕರೆ ಬಂದುದು ಅದೇ ಮೊದಲು, ಶಾಮಣ್ಣ ತಾನೇ ಬರದೆ ಆಳನ್ನು ಕಳುಹಿಸಿದನಲ್ಲ–ಎಂದು ಶ್ರೀನಿವಾಸಯ್ಯ ಸ್ವಲ್ಪ ಖಿನ್ನರಾದರು. ಆದರೆ ಆಳಿನ ಮುಂದೆ ಬಹಿರಂಗವಾಗಿ ತೋರ್ಪಡಿಸುವ ಭಾವನೆ ಅದಲ್ಲವಲ್ಲ? 
" ಗೋವಿಂದಾ, ಶಾಮಣ್ಣನ ಮನೆಗೆ ನೀನು ಹೋಗ್ಬೆಕಂತೆ ಕಣೋ" ಎಂದು ಅವರು ಮಗನಿಗೆ ಕೇಳಿಸುವಂತೆ ಕೂಗಿ ನುಡಿದರು... 

ತಂದೆಗೆ ಕೇಳಿಸದಂತೆ ಗೋವಿಂದ, “ಅಂತೂ ಪಟೇಲರಿಂದ ಬುಲಾವ್ ಬರೋಕೆ ಶುರು ವಾಯ್ತು," ಎಂದು ಗೊಣಗಿದ. - - ಆ ದಿನ ನಗರಕ್ಕೆ ಹೋಗುವ ಸಂದರ್ಭ ಒದಗಬಹುದೆಂದು ವೇಸ್ಟ್ ಕೋಟನ್ನೂ ಟೋಪಿಯನ್ನೂ ಒಗೆದು ಮಡಚಿ, ಸುರುಳಿ ಸುತ್ತಿದ್ದ ಹಾಸಿಗೆಯ ಕೆಳಗೆ 'ಇಸ್ತ್ರಿ'ಗಾಗಿ ಇಟ್ಟಿದ್ದ. ಈಗ ಅದವನ್ನು ಹೊರತೆಗೆದ, ತೊಟ್ಟುಕೊಳ್ಳಲು. - " ಶಾಮಣ್ಣನ ಮನೆಗೆ ಹೋಗ್ಬೇಕಾದ್ರೂ ಈ ಡ್ರೆಸ್ ಹಾಕ್ಕೋಬೇಕೇನೋ?" ಎಂದು ಶ್ರೀನಿವಾಸಯ್ಯ ಮಗನನ್ನು ಛೇಡಿಸಿದರು. -