ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ನೋವು - ತಂದೆಯೇನು ಬಲ್ಲರು ಆ ಡ್ರೆಸ್ಸಿನ ಮಹತ್ವ? ಅಂತಹ ಕಟೂಕ್ತಿಗಳನೆಲ್ಲ ಲಕ್ಷಿಸು ವವನಲ್ಲ ಗೋವಿಂದ. ಆತನೆಂದ : - "ಬಂದರೆ ಇನ್ನು ಒಂದು ಘಂಟೆಯೊಳಗೇ ಅವರು ಬರಬೌದು. ಗೌಡರಲ್ಲಿಗೆ ಹೇಳಿ ಕಳಿಸಿ ಅಣ್ಣಯ್ಯ.” - “ ಹೂಂ, ಹೂಂ. ನೀನು ಹೋಗು. ಶಾಮಣ್ಣ ಯಾಕೆ ಕರೆದನೋ ಕೇಳೋಂಡ್ಬಾ.” ' ದಿರಿಸು ' ಹಾಕಿಕೊಂಡು ಹೊರಟ ಗೋವಿಂದನನ್ನು ಕರಿಯ ಹಿಂಬಾಲಿಸಿದ. ಗೌಡರು ತನ್ನನ್ನು ಯಾಕೆ ಕರೆದಿರಬಹುದೆಂಬ ಊಹಾಪೋಹದಲ್ಲಿ ನಿರತನಾಗಿದ್ದ ಗೋವಿಂದ, ಅದೂ ಇದೂ ಎಣಿಕೆ ಹಾಕಿ, ಕರಿಯನನ್ನು ಕೇಳಿದ: "ನನ್ನೊಬ್ಬನನ್ನೇ ಕರಕೊಂದಡ್ಬಾ ಅಂದ್ರೊ, ಗೌಡರು?" - " ಇಲಾ.. ನಿಂಗೀನೂವೆ ಅವಳ ಐದನ್ನೂವೆ ಬರಯೋಳವರೆ, ಅಂಗೇನೇಯ ಎಂಕಟಪ್ನೋರ್ನೊವೆ ಕರ್ಕಂಬಾ ಅಂದವರೆ." - - ಗೋವಿಂದ ಲೆಕ್ಕಹಾಕಿದಃ ಮುನಿಯನಿಗೆ ಸಂಬಂಧಿಸಿದ್ದೇ ಏನೋ ಇರಬೇಕು. ಅಬ್ದುಲ್ಲ ಬಂದಿದಾನೋ ಹಾಗೆ? - " ಅಬ್ದುಲ್ಲನ್ನ ಕಂಡಿಯಾ, ಕರಿಯ?" - "ಇಲ್ರಾ ! ಆವತ್ತು ಒಂಟೋದವ್ನು ಬಂದೇ ಇಲ್ಲ." ಮಳೆ ಸುರಿದು ನೆಲ ತೋಯ್ದ ಸಂಭ್ರಮದಲ್ಲಿ, ರಾತ್ರಿಯ ವೇಳೆ ಅಬ್ದುಲ್ಲ ತನ್ನ ಹಟ್ಟಿ ಸೇರಿದನೆಂಬುದು ಹಳ್ಳಿಯ ಜನರಿಗೆ ತಿಳಿದಿರಲಿಲ್ಲ. - ಗೋವಿಂದ ಮತ್ತೊಮ್ಮೆ ಯೋಚಿಸಿದ. ಅಬ್ದುಲ್ಲ ಇಲ್ಲದಿದ್ದರೂ ಕೋರ್ಟಿನ ವ್ಯವ ಹಾರಕ್ಕೆ ಸಂಬಂಧಿಸಿ ಏನನ್ನೋ ಕೇಳಲು ತನ್ನನ್ನು ಕರೆದಿದ್ದಾರೆ, ಎಂದುಕೊಂಡ. - ಅರ್ಧ ಹಾದಿ ನಡೆದ ಮೇಲೆ ಕರಿಯ, " ನೀವು ಓಗ್ತಾ ಇರಿ. ಎಂಕಟಪ್ನೋರಿಗೆ ಯೋಳ್ಬರ್ತೀನಿ," ಎಂದು ಬೇರೆ ದಾರಿ ಹಿಡಿದ. ಗೋವಿಂದ ಗೌಡರಲ್ಲಿಗೆ ಬಂದಾಗ ನಿಂಗಿ ತನ್ನ ಮಗನೊಡನೆ ಅಂಗಳದ ಮೂಲೆಯಲ್ಲಿ ಕುಳಿತಿದ್ದಳು. ಅವಳ ಕೈಯಲ್ಲೆಂದು ಕಾಗದದ ಪುಡಿಕೆ ಇತ್ತು. ಗೋವಿಂದನನ್ನು ನೋಡಿ ಆಕೆ ಎದ್ದು ನಿಂತಳು. - " ಕುಂತ್ಕೋ, ಕುಂತ್ಕೋ.." ಎಂದು ನುಡಿದು ಗೋವಿಂದ, ಮನೆಯನ್ನು ಹೊಕ್ಕು, ಹೊರಗೆ ಜಗಲಿಯಲ್ಲಿ ಚಾಪೆಯ ಮೇಲೆ ಕುಳಿತಿದ್ದ ಗೌಡರಿಗೆ ವಂದಿಸಿದ. " ಬಾ, ಗೋವಿಂದಪ್ಪ," ಎಂದರು ಗೌಡರು, ಚಾಪೆಯನ್ನು ಅಂಗೈಯಿಂದ ತಟ್ಟುತ್ತ, ಗೋವಿಂದನನ್ನು ನೆಟ್ಟ ದೃಷ್ಟಿಯಿಂದ ನೋಡಿ ಅವರೆಂದರು :

" ಅಬ್ದುಲ್ಲ ಬಂದವನೆ." 
ಗೋವಿಂದನೆ ಕಣ್ಣುಗಳು ಅರಳಿದುವು. - - " ಹಾಗೇನು ? ಬಹಳ ಗುಟ್ಟಾಗಿ ಬಂದಂತಿದೆಯಲ್ಲ! ಹಳ್ಳೀಲಿ ಯೂರಿಗೂ ಗೊತ್ತೇ ಇಲ್ಲ."

ಗೋವಿಂದನ ಮೇಲಿನ ತಮ್ಮ ದೃಷ್ಟಿಯನ್ನು ತೆಗೆಯದೆಯೇ ಗೌಡರೆಂದರು :