ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೦ ಸತೀಹಿತೈಷಿಣಿ (ಮಾಸಿಕ , , * ಹೇಳು. ನನ್ನ ಕಾವ್ಯಗಳಲ್ಲಿ ಆವುದನ್ನು ಅನೀತಿಯೆಂದು ಹೇಳುವೆ? ಪ್ರಭಾ-ಕ್ಷಮಿಸಬೇಕು. ತಮ್ಮ ಈಗಿನ ಪದ್ಧತಿಯನ್ನು ನೋಡಿದರೆ, ಪಾಶ್ಚಾತ್ಯ ಪದ್ಧತಿಯ ಅನುಕರಣವೆಂಬ ಗಾಳಿ ಸೋಕಿದಂತೆ ಕಾಣುತ್ತದೆ. ನಮ್ಮ ಆರ ಸಮಾಜದಲ್ಲ, ಹುಡುಗಿಯರನ್ನು ತರುಣರ ಬಳಿಯಲ್ಲಿ, ಹಾಗೂ ವಿಲಾಸಪ್ರಿಯರಾದ ಅವ್ಯವಸ್ಥಿತ ಚಿತ್ತರಾದವರ ಬಳಿಯಲ್ಲಿ ನಿರ್ಲಜ್ಞಾ ಪ್ರಕೃತಿಗಳಾಗಿ ವರ್ತಿಸ ವಂತೆ ಮಾಡುವುದು ತುಂಬಾ ಹಾನಿಕರವಾಗಿ ತೋರುತ್ತದೆ. ಹಾಗೆ ಅವರು ವರ್ತಿಸುವದರಿಂದ ವಿದ್ಯಾರ್ಥಿಗಳ ಅಥವಾ ಆ ತರುಣಜನರ ಮನಸ್ಸು ವಿಕಾರವಶವಾಗಿ, ಆ ಹುಡುಗಿಯರ ವಿಷ ಯದಲ್ಲಿ ತಮ್ಮ ಕುಚೇಷ್ಟೆಗಳನ್ನು ತೋರಿಸಲು ಪ್ರಯತ್ನಿಸುವ ರು. ಕಾಲಕ್ರಮದಿಂದ ಅದೇ, ವಿಷಯ ಸನ್ನಿ ಪಾತದಂತೆ ವಿಸ ರೀತದಲ್ಲಿ ಪರಿಣಮಿಸುವುದು. ತಾರಾ.. ಇರಬಹುದು, ಆದರೆ ನಾನು ಮಾಡಿರುವುದರಲ್ಲಿ ಅಂತಹ ಬಾಧ ಕವೇನಿದೆ ? ಅಕ್ಷಯ-ಸ್ವಾಮಿನಾಧ ! ತಮ್ಮ ಈ ದಿನದ ಏರ್ಪಾಡನ್ನೇ ವಿಚಾರಕ್ಕೆ ತೆಗೆದುಕೊಳ್ಳಬೇಕಾಗಿದೆ. ತಮ್ಮ ಸುಕುಮಾರಿಯು 'ಕನ್ಯಾವ ಸ್ಥೆಯನ್ನು ಮೀರಿ, ತಾರುಣ್ಯದಲ್ಲಿ ಕಾಲಿರಿಸಿರುವಳು, ಯವ ನವೇ ಸೌಂದರಮಯವೆಂದು ಹೇಳುವರು. ಅದರಮೇಲೆ ಸೌ ಕುಮಾರ್, ಗಾಂಭೀರ ಚಾತುರಗಳೂ, ಕುಶಲಕಲಾನೈಪುಣ್ಯ ವೂ ಸೇರಿದ್ದರೆ ಹೇಳುವದೇನು ? ಅಂತಹ ಮನೋಮೋಹಿನಿಯರ ಸಂದರ್ಶನ-ಸಂಭಾಷಣಗಳೇ ಮನೋವೇಧಕವಾಗಿ ತೋರುವ ದೆಂದ ಬಳಿಕ ಅವರ ವಿಲಾಸ ನಿಭ್ರಮಾದಿಗಳೊಡಗೂಡಿದ ನೃತ್ಯ,