ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೪ ಸತೀಹಿತೈಷಿಣ (ತ್ರೈಮಾಸಿಕ Twwyv\\\ \/\//MMMMM (ಆಪ್ತರೇ ! ನಮ್ಮ ಮಾತೃಭೂಮಿಯಲ್ಲಿ ಅಲ್ಲಲ್ಲಿಗೆ ಕಲಾಶಾಲೆ ಗಳೂ, ಎಷ್ಟೋ ವಿದ್ಯಾಪೀಠಗಳೂ, ಎಷ್ಟೆಷ್ಟೋ ಆಶ್ರಮಗಳೂ ಇರು ವುವು. ಅವುಗಳಲ್ಲಿ ಅಸಂಖ್ಯಾತರಾದ ವಿದ್ಯಾರ್ಥಿಗಳೂ ಅನೇಕಾನೇಕ ವಿದ್ಯಾಬೋಧಕ-ಗುರುವರ್ಗಿಯರೂ ಇರುವರು, ಸಾಂಸತ್ತಿಕ ದೃಷ್ಟಿ ಯಿಂದಲೂ, ವ್ಯಾವಹಾರಿಕ ದೃಷ್ಟಿಯಿಂದಲೂ ಅವುಗಳೆಲ್ಲವೂ ವರ್ತ ಮಾನಸ್ಥಿತಿಯಲ್ಲಿ ಅತ್ಯುಚ್ಚ ಪದದಲ್ಲಿರುವಂತೆಯ ಹೆಸಗೊಂಡಿರು ವವು. ಆದರೆ, ನಾನು ನೋಡಿರುವುದರಲ್ಲಿ, ನನ್ನ ಅನುಭವಕ್ಕೆ ಬಂ ದಿರುವ ವಿಚಾರಗಳಲ್ಲಿ ಈ ಶಾಂತಿನಿಕೇತನ ಪುಣ್ಯಾಶ್ರಮದಲ್ಲಿ ಲಭಿ ಸುವ ಶಮ, ದಮ, ಉಪರತಿ, ತಿತಿಕ್ಷಾ, ಸಮಾಧಾನ ಶ್ರದ್ಧಾ ಎಂಬ ಷಡ್ವಧಸಂಪತ್ತಿಯು ಮಾನುಷ ಜನ್ಮ ಧಾರಣದ ಸಾರ್ಧಕತೆಗೆ ಅತ್ಯಾವ ಶ್ಯಕವಾಗಿ ಅನುಷ್ಠಯವಾದ, ಅದರಲ್ಲಿಯೂ ಆರ್ಯಕುಲೋತ್ಪನ್ನರಿಗೆ ಸಾರಭೂತವೂ - ಆಧಾರವಸ್ತುವೂ ಆಗಿ ಪ್ರಕಾಶಿಸುವ - ಆ ದಿವ್ಯ ಸಂಪತ್ತಿಯು ,ಮತ್ತೆಲ್ಲಿಯೂ ಲಭಿಸುವುದೆಂದು ನಾನು ನಂಬಲಾರೆನು, ಎಂದರೆ ಅವೆಲ್ಲವೂ ನಿರರ್ಥಕವೆಂದು ಹೇಳಿದಂತಲ್ಲ. ಜೀವನ ನಿರ್ವಾಹ ಕ್ಕೆ ಬೇಕಾಗುವ ಔದ್ಯೋಗಿಕ ಮತ್ತು ವ್ಯಾವಹಾರಿಕ ವಿಚಾರಕ್ಕೆ ಅವು ಗಳು ಅತ್ಯಂತ ಸಹಕಾರಿಗಳೇ ಸರಿ, ಆದರೂ, ಅಲ್ಲಿ ಆತ್ಮಸಮಾಧಾನಕ್ಕೆ ಆಧಾರವಾಗಿರುವ ದೃಢವಿಶ್ವಾಸವೂ, ಧರ್ಮಶ್ರದ್ಧೆಯ, ಸದಸದ್ವಿವೇ ಚನೆಯೂ, ಅಷ್ಟು ಪ್ರಧಾನವಾಗಣಿಸಲ್ಪಡುವವರೆಗೆ ಅವು ಸಾರ್ಥಕವೆ ನಿಸುವಂತಿಲ್ಲ. ಹಾಗೆ ಅವು ಸಾರ್ಥಕವೆನಿಸಬೇಕಾದರೆ ಶಾಂತಿನಿಕೇತನದ ಶಿಕ್ಷಣಾಕ್ರಮವನ್ನು ಅವೂ ಆಚರಣೆಗೆ ತರಲು ಹೇಳಿದರೆ ತಪ್ಪಾಗು ವಂತಿಲ್ಲ, ಏಕೆಂದರೆ “ ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ | ಚಕ್ಷುರುನ್ನೀಲಿತಂ ಯೇನ ತಸ್ಮ ಶ್ರೀ ಗುರುವೇನಮಃ |”