ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

VI, ಮಹಮ್ಮದನ ಅಧಿನಾಯಕತ್ವದ ಒಳಗುಟ್ಟು ಬದರ್ ಕದನವು ಮುಗಿದ ಮೇಲೆ ಮಹಮ್ಮದನಿಗೆ ಒಂದು ಮದು ವೆಯ ಮನೆಗೆ ಆಹ್ವಾನವು ಬಂದಿತು. ಆ ಕದನದಲ್ಲಿ ಅವನು ಜಯಶೀಲ ನಾದುದನ್ನು ಕುರಿತು, ಬಾಲಿಕೆಯರು ಆ ಮದುವೆಯ ಮನೆಯಲ್ಲಿ ಹಾಡುಗಳನ್ನು ಹೇಳುವಾಗ, ನಾಳೆ ನಡೆಯುವುದನ್ನು ಕೂಡ ಇಂದೇ ಹೇಳಬಲ್ಲ ಮಹಾ ಪುರುಷನು ನಮ್ಮ ಗುರುವಾಗಿ ಲಭಿಸಿದ್ದಾನೆ ಎಂದು ತಾತ್ಪರ್ಯವಾಗುವಂತೆ ಹೇಳಿದರಂತೆ. ಆಗ ಮಹಮ್ಮದನು, “ ಇನ್ನು ಮುಂದೆ ಇಂತಹ ಹಾಡುಗಳನ್ನು ಹೇಳಬೇಡಿರಿ; ಎಲ್ಲಿ ! ಬೇರೆ ಹಾಡು ಗಳನ್ನು ಹೇಳಿರಿ, ಸಂತೋಷದಿಂದ ಕೇಳುವೆನು ಎಂದು ಹೇಳಿ ಅವರು ಆ ಹಾಡುಗಳನ್ನು ಹೇಳದಂತೆ ತಡೆದನಂತೆ. ಅಂತು, ಇವೆಲ್ಲ ಸದ್ಗುಣಗಳೂ ಇದ್ದುದರಿಂದ ಮಹಮ್ಮದನು ಜನರಲ್ಲಿ ಪ್ರಮುಖನಾಗಿ ನಿಲ್ಲಲು ಯೋಗ್ಯನೆನಿಸಿದನು. ಅವನ ಅಧಿ ನಾಯಕತ್ವವು ಬಹಳ ಸಮರ್ಪಕವಾಗಿ ನೆರವೇರಿತು.