ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೈಗಂಬರ ಮಹಮ್ಮದನು ಎಳನೆಯ ಅಧ್ಯಾಯ ಊಹುದೆ ಕದನ ಬದರ್ ಕದನದಲ್ಲಿ ಪರಾಜಯಹೊಂದಿದುದರಿಂದ ಕೊರೈಷ್ ಮನೆ ತನದವರು ಖಿನ್ನ ಮನಸ್ಕರಾದರು. ಅವರಲ್ಲಿ ಕೆಲವು ಮಂದಿ ಅನಾಮ ಥೇಯರು, ವೀರಾಗ್ರಣಿಗಳಾದ ತಮ್ಮನ್ನು ಸೋಲಿಸಿದರೆಂಬ ಅಸಮಾನ ಕಲ್ಪನೆಯಿಂದ ರೋಷ ಭೀಷಣರಾಗಿ, ಮತ್ತೊಮ್ಮೆ ಮೆದೀನಾ ನಗರ ವನ್ನು ಮುತ್ತಿ ಶತ್ರುಗಳನ್ನು ಧ್ವಂಸ ಮಾಡಬೇಕೆಂದು ಚಲವನ್ನು ತೊಟ್ಟರು ; ಯಾರ ಮುಖವನ್ನು ನೋಡಿದರೂ ದ್ವೇಷ ಸಾಧನೆಯ ಜಪವೇ ಕಂಡುಬರುತ್ತಿದ್ದಿತು. ಬದರ್ ಕದನದಲ್ಲಿ ತಮ್ಮ ಕಡೆಯ ಮುಖ್ಯಸ್ಥರು ಬಹು ಮಂದಿ ಮೃತಪಟ್ಟಿದ್ದುದರಿಂದ, ಆ ಕದನದ ಕಾಲದಲ್ಲಿ ವರ್ತಕ ಮಂಡಲಿಯೊಡನೆ ಸಿರಿಯಾ ದೇಶಕ್ಕೆ ವ್ಯಾಪಾರಕ್ಕಾಗಿ ಹೋಗಿದೆ ಅಬೂ ಸಫಾನನೆಂಬೊಬ್ಬನನ್ನು ಸೇನಾಧಿಪತಿಯಾಗಿ ಆರಿಸಿ, ಆತನು ಸಿರಿಯಾ ದೇಶದಲ್ಲಿ ಸರಕುಗಳ ಮಾರಾಟದಿಂದ ಸಂಪಾದಿಸಿದ ಉಾಣಿ ನನ್ನೆಲ್ಲ ಮೆದೀನಾ ನಗರದ ಮುತ್ತಿಗೆಯ ವೆಚ್ಚಕ್ಕೆ ಮುಟ್ಟಿಸಬೇಕೆಂದು ಅವರೆಲ್ಲರೂ ನಿಷ್ಕರ್ಷೆ ಮಾಡಿ, ಒಂದು ವರುಷದೊಳಗಾಗಿ ಮರುಸಾವಿರ ಮಂದಿ ಸೈನಿಕರುಳ ಒಂದು ದಂಡನ್ನು ಸಿದ್ಧಗೊಳಿಸಿದರು. ಕ್ರಿ. ಶ. ೬೨೫ರಲ್ಲಿ ಅವರು ವಿಜಯ ಯಾತ್ರೆ ಹೊರಟು, ಯುದ್ಧ ಕಾಲದಲ್ಲಿ. ರಣ ಕೋಲಾಹಲದ ಗೀತೆಗಳನ್ನು ಹಾಡಿ ಸೈನಿಕರನ್ನು ಹುರಿದುಂಬಿ ಸುವ ಉದ್ದೇಶದಿಂದ ಕೆಲವರು ಸ್ತ್ರೀಯರನ್ನೂ ತಮ್ಮೊಡನೆ ಕರೆದು ಕೊಂಡರು ; ಮೆದೀನಾ ನಗರಕ್ಕೆ ಕಾಲು ಗಾವುದ ದೂರದಲ್ಲಿರುವ ಊಹುದ್ ಗುಡ್ಡದ ತಪ್ಪಲಿನಲ್ಲಿ ಬೀಡು ಬಿಟ್ಟು ಮೆದೀನಾ ನಗರದ ಹುಲ್ಲುಗಾವಲುಗಳನ್ನೆಲ್ಲ ಸ್ವಾಧೀನಪಡಿಸಿಕೊಂಡರು. ಬೆಳೆದು ನಿಂತಿದ್ದ ಪೈರುಗಳನ್ನೆಲ್ಲ 'ಧ್ವಂಸ ಮಾಡಲು ಅವರು ಕುದುರೆಗಳನ್ನೂ ಒಂಟಿ ಗಳನ್ನೂ ಬಿಟ್ಟು, ಮದೀನಾ ನಗರದವರ ಹೊಲಗಳಿಗೂ ತೋಟ. ಗಳಿಗೂ ಎಷ್ಟು ವಿಧವಾಗಿ ನಷ್ಟ ಪಡಿಸುವುದು ಸಾಧ್ಯವೋ ಅಷ್ಟು ವಿಧಗಳಲ್ಲಿಯೂ ಪ್ರವರ್ತಿಸಿದರು.