ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

VII. ಊಹುದೆ ಕದನ ೬೫ ಮಹಮ್ಮದನು ತನ್ನ ಆಪ್ತರ ಸಲಹೆಗಳನ್ನು ಕೇಳುವುದಕ್ಕಾಗಿ ಮೆದೀನಾ ನಗರದಲ್ಲಿ ಒಂದು ಸಭೆಯನ್ನು ಸೇರಿಸಿದರು. ಯಾವು ದಾದರೂ ಮಹಾ ಕಾರ್ಯವನ್ನು ನೆರವೇರಿಸಬೇಕಾಗಿ ಬಂದಾಗ್ಗೆ ಅವನು ತನ್ನ ಆಪ್ತ ವರ್ಗದವರ ಆಲೋಚನೆಯನ್ನು ತಪ್ಪದೆ ಕೇಳುತ್ತಿದ್ದನು. ಭವಿಷ್ಯತ್ತಿನ ವಿಚಾರವನ್ನು ಸೂಚಿಸುವ ಕೆಲವು ದೃಶ್ಯಗಳನ್ನು ತಾನು ಕಂಡೆನೆಂದು ಮಹಮ್ಮದನು ಅವರೆಲ್ಲರಿಗೂ ತಿಳಿಸಿ ಅವುಗಳ ಅರ್ಥ ವಿವರಣೆ ಯನ್ನೂ ಮಾಡಿದನು. ಅವನ ಕತ್ತಿಯ ತುದಿಯು ಮುರಿದುಹೋಗಿ ದ್ವಂತೆ ದೃಶ್ಯವನ್ನು ಕಂಡುದರಿಂದ ತನ್ನ ದೇಹಕ್ಕೆ ಘಾಸಿಯುಂಟಾಗು ವದೆಂದೂ, ತಾನು ಉಕ್ಕಿನ ಉಂಗುರಗಳ ಕವಚವನ್ನು ಧರಿಸಿದ್ದಂತೆ ದೃಶವ ಕಂಡಬಂದುದರಿಂದ ಯೋಧರೆಲ್ಲರೂ ಮೊದೀನಾ ನಗರದ ಕೋಟೆಯನ್ನು ಬಿಟ್ಟು ಹೋಗದೆ ಶತ್ರುಗಳೊಡನೆ ಕಾದಾಡಬೇಕೆಂಬ ಅಂಶವು ಅದರಿಂದ ಸೂಚಿತವಾಯಿತೆಂದೂ, ಹಸುಗಳು ವಧೆಯಾಗು ತಿದ್ದಂತೆ ಮೂರನೆಯ ದೃಶ್ಯವು ಗೋಚರಿಸಿದುದರಿಂದ ತನ್ನ ವರಿಗೆ ತೊಂದರೆಯಾಗುವುದೆಂಬುದನ್ನು ಅದು ಸೂಚಿಸಿತೆಂದೂ ಮುಹಮ್ಮದನು ಅಭಿಪ್ರಾಯಪಟ್ಟು, ತಾವು ಕೋಟೆಯನ್ನು ಬಿಟ್ಟು ಕದಲದೆ ಶತ್ರು ದಳ ವನ್ನು ಅಲ್ಲಿಂದಲೇ ಹಿಮ್ಮೆಟ್ಟಿಸಬೇಕೆಂದು ತನ್ನ ವರಿಗೆ ಸಲಹೆ ಹೇಳಿದನು. ಅನುಭವಸ್ಥರಾದ ವಿವೇಕಿಗಳೆಲ್ಲರ ಆ ಸಲಹೆಯನ್ನು ಅನುಮೋದಿ ಸಿದರು ; ಆದರೆ ಅವರ ಸಂಖ್ಯೆಯು ಹೆಚ್ಚಾಗಿರಲಿಲ್ಲ. ಹೆಚ್ಚು ಸಂಖ್ಯೆ: ಯವರಾದ ತರುಣರೊಬ್ಬರೂ ಇದಕ್ಕೆ ಸಮ್ಮತಿಸದೆ ಕೋಟೆಯ ಬಾಗಿಲನ್ನು ಹಾಕಿಸಿ ಯುದ್ಧ ಮಾಡುವುದು ಹೇಡಿತನವೆಂದು ವಾದಿ ಸಿದರು. ಕೊನೆಗೆ, ಮಹಮ್ಮದನು ನಿರ್ವಾಹವಿಲ್ಲದೆ ತರುಣರ ಹೇಳಿ ಕೆಗೆ ಕಿವಿಗೊಡ ಬೇಕಾಯಿತು. ಮಹಮ್ಮದನ ಸೈನ್ಯವು ಮದೀನಾ ನಗರದಿಂದ ಹೊರಟಿತು. ಮಹಮ್ಮದನ ಕಡೆಯಲ್ಲಿ ಒಂದು ಸಾವಿರ ಮಂದಿ ಯೋಧರೂ, ಇಬ್ಬರೇ ಅಶ್ವಾರೋಹಿಗಳಾದ ರಾಹುತರೂ ಇದ್ದರು. ಶತ್ತು ಪಕ್ಷದ ಲ್ಲಾದರೋ ಮರು ಸಾವಿರ ಮಂದಿ ಯೋಧರೂ, ಇನ್ನೂ ರು ಮಂದಿ ರಾಹುತರೂ ಇದ್ದರು. ಮಹಮ್ಮದನಿಗೆ ಹೀಗೆ ಸಾಧನ ಸಂಪತ್ತುಗಳು