ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪುನಃ ಅಹಮದ್ ನಗರದ ಕೋಟೆಯಲ್ಲಿ ಯೊಂದು ಅಸ್ತಿತ್ವಕ್ಕೆ ತಲೆಬಾಗುವ ತತ್ತ್ವವನ್ನೇ ಬೋಧಿಸಿವೆ, ಯಾವುದೋ ಒಂದು ಪರಶಕ್ತಿಯ ಇಚ್ಛೆಯಂತೆ ಎಲ್ಲವೂ ವಿಧಾಯಕವಾಗಿದೆ ಎಂಬ ನಂಬಿಕೆಯಿಂದ ಸಮಾಜ ಜೀವನದಲ್ಲಿ ಒಂದು ಬಗೆಯ ಬೇಜವಾಬ್ದಾರಿ ಬೇರೂರಿದೆ. ಕಾರಣ ಬದ್ದ ಭಾವನೆ ಮತ್ತು ವಿಚಾರ ಪರತೆಗೆ ಬದಲಾಗಿ ಭಾವಾವೇಶಕ್ಕೆ ಮತ್ತು ಭಾವಾತಿರೇಕಗಳಿಗೆ ಮಾನ್ಯತೆ ಬಂದಿದೆ. ಧರ್ಮವು ಅಸಂಖ್ಯಾತ ಮಾನವ ಜೀವಿಗಳಿಗೆ ಮನಶ್ಯಾಂತಿ ಕೊಟ್ಟು, ಅದರ ಮೌಲ್ಯಗಳಿಂದ ಸಮಾಜಕ್ಕೊಂದು ಭದ್ರತೆ ಕೊಟ್ಟಾಗ್ಯೂ ಮಾನವ ಸಮಾಜಕ್ಕೆ ಸಹಜವಾದ ಎಲ್ಲ ಪರಿವರ್ತನೆ ಮತ್ತು ಪ್ರಗತಿ ಪ್ರಯತ್ನಗಳಿಗೆ ಅಡ್ಡಿ ಬಂದಿದೆ. - ದರ್ಶನ ಶಾಸ್ತ್ರವು ಈ ಅನೇಕ ಕೊರಕಲುಗಳಿಗೆ ಬೀಳದೆ ಭಾವನಾ ಸ್ವಾತಂತ್ರಕ್ಕೂ, ವಿಚಾರ ಶೀಲತೆಗೂ ಪ್ರೋತ್ಸಾಹ ಕೊಟ್ಟಿದೆ. ಆದರೆ ಅಂತಿಮ ಧೈಯಗಳಿಗೆ ಮಾತ್ರ ಪ್ರಾಮುಖ್ಯತೆ ಕೊಟ್ಟು ಮಾನವ ಜೀವನದೊಂದಿಗೆ ಯಾವ ಸಂಬಂಭವನ್ನೂ ಕಲ್ಪಿಸದೆ ಜೀವನ ಮತ್ತು ಜೀವನದ ದೈನಂದಿನ ಸಮಸ್ಯೆಗಳಿಂದ ದೂರನಿಂತು ದರ್ಶನ ಶಾಸ್ತ್ರವು ಸಾಮಾನ್ಯವಾಗಿ ಕನಸಿನ ಪ್ರಪಂಚದಲ್ಲೇ ವಾಸಮಾಡು ತಿದೆ, ತರ್ಕ ಮತ್ತು ನಿಮಿತ್ತಗಳೇ ಅದರ ಮಾರ್ಗ ಸೂಚಿಗಳಾದವು. ಅನೇಕ ಮುಖಗಳಲ್ಲಿ ಅದನ್ನು ಕೊಂಡೊಯ್ದು ಬೆಳೆಸಿದವು; ಆದರೆ ಆ ತರ್ಕ ಶಾಸ್ತ್ರವೆಲ್ಲ ಮನೋಕಲ್ಪಿತ ರಾಜ್ಯದ್ದು, ವಾಸ್ತವಿಕತೆಗೂ ಅದಕ್ಕೂ ಬಹುದೂರ, ವಿಜ್ಞಾನವು ವಾಸ್ತವಿಕತೆಗೆ ಮಾತ್ರ ಲಕ್ಷಕೊಟ್ಟು ಅಂತಿಮ ಧೈಯ ಅಲಕ್ಷೆಮಾಡಿತು. ಪ್ರಪಂಚವು ಒಂದೇ ಹೆಜ್ಜೆಯಲ್ಲಿ ಕುಪ್ಪಳಿಸಿ ಹಾರುವಂತೆ ಮಾಡಿತು ; ಕಣ್ಣು ಕುಕ್ಕುವ ಥಳಥಳಿಪ ನಾಗರಿಕತೆ ಯೊಂದನ್ನು ನಿರ್ಮಿಸಿತು ; ಜ್ಞಾನದ ಬೆಳೆವಣಿಗೆಗೆ ನಾನಾ ಮಾರ್ಗ ತೋರಿಸಿತು ; ತನ್ನ ಸುತ್ತಲಿನ ಪ್ರಕೃತಿಯನ್ನು ಗೆದ್ದು ಅಧೀನಪಡಿಸಿಕೊಂಡು ತನ್ನ ಇಷ್ಟದಂತೆ ಆ ಪ್ರಕೃತಿ ಶಕ್ತಿ ಉಪಯೋಗಿಸಲು ಸಾಧ್ಯ ವಿದೆ ಎನ್ನುವ ಮಟ್ಟಕ್ಕೆ ಮೊಟ್ಟಮೊದಲು ಅದು ಮಾನವನ ಶಕ್ತಿಯನ್ನು ಹೆಚ್ಚಿಸಿತು. ಭೂಗ್ರಹದ ಸ್ವರೂಪವನ್ನು ರಸಾಯನಿಕವಾಗಿ, ಭೌತಿಕವಾಗಿ ಮತ್ತು ಇನ್ನೂ ಅನೇಕ ರೀತಿಯಲ್ಲಿ ಪರಿವರ್ತನೆ ಮಾಡುತ್ತ ಮಾನವನೂ ಒಂದು ಭೂಶಕ್ತಿಯಾದ, ಈ ದುಃಖ ಪರಿಸ್ಥಿತಿ ಪೂರ್ಣ ತನ್ನ ಅಧೀನದಲ್ಲಿದೆ, ಇನ್ನೇನು ತನ್ನ ಇಚ್ಛೆ ಈಡೇರಬಹುದು ಎನ್ನುವಾಗಲೇ ಏನೋ ಒಂದು ದೊಡ್ಡ ನ್ಯೂನತೆ, ಏನೋ ಒಂದು ಮುಖ್ಯ ವಸ್ತುವಿನ ಅಭಾವ. ಅದಕ್ಕೆ ಅಂತಿಮ ಧೈಯಗಳ ಅರಿವೂ ಇರಲಿಲ್ಲ ; ಜೀವನಕ್ಕೆ ಒಂದು ಗುರಿ ಇದೆ ಎಂದು ವಿಜ್ಞಾನ ಯಾವಾಗಲೂ ನಮಗೆ ತಿಳಿಸಲಿಲ್ಲ. ಪ್ರಕೃತಿ ಶಕ್ತಿಯನ್ನು ಅಧೀನ ಪಡಿಸಿಕೊಂಡು ಬಲಶಾಲಿಯಾದ ಮಾನವ ತನ್ನನ್ನು ತಾನು ಹಿಡಿತದಲ್ಲಿಟ್ಟು ಕೊಳ್ಳುವ ಆತ್ಮ ಸಂಯಮವ ನ್ನಾಗಲಿ, ತಾನೇ ಸೃಷ್ಟಿಸಿದ ರಾಕ್ಷಸೀ ಶಕ್ತಿಯನ್ನು ಪೂರ್ಣ ಅಧೀನ ಇಟ್ಟುಕೊಳ್ಳುವ ಶಕ್ತಿಯನ್ನಾಗಲಿ ಸಂಪಾದಿಸಿಕೊಳ್ಳಲಿಲ್ಲ. ಪ್ರಾಯಶಃ ಪ್ರಾಣಿಶಾಸ್ತ್ರ, ಮನಶ್ಯಾಸ್ತ್ರ ಮುಂತಾದ ವಿಜ್ಞಾನಗಳಲ್ಲಿ ನಡೆಯ ಬಹುದಾದ ಮುಂದಿನ ಪ್ರಗತಿ ಯಿಂದ, ಪ್ರಾಣಿಶಾಸ್ತ್ರ ಮತ್ತು ಭೌತಶಾಸ್ತ್ರಗಳ ವಿವರಣೆಗಳಿಂದ ಮೊದಲಿಗಿಂತ ತನ್ನನ್ನು ತಾನು ಹೆಚ್ಚು ಅರಿತುಕೊಂಡು ಆತ್ಮಸಂಯಮ ಶಕ್ತಿ ಸಂಪಾದಿಸಲು ಮಾನವನಿಗೆ ಸಾಧ್ಯವಾಗ ಬಹುದು, ಅಥವ ಮಾನವ ಜೀವನ ಮೇಲೆ ಅಂತಹ ಪ್ರಗತಿಯಿಂದ ಪರಿಣಾಮವಾಗುವ ಮುಂಚೆಯೇ ಮಾನವನು ತಾನು ಕಟ್ಟಿದ ನಾಗರಿಕತೆಯ ಸೌಧವನ್ನೇ ಒಡೆದು ಪುಡಿಪುಡಿ ಮಾಡಿ ಹೊಸದಾಗಿ ಪುನಃ ಆರಂಭಿಸಬೇಕಾಗಿ ಬರಬಹುದು. - ವಿಜ್ಞಾನದ ನಿರಾತಂಕ ಪ್ರಗತಿಗೆ ಅವಕಾಶಕೊಟ್ಟರೆ ಯಾವ ಮಿತಿಯೂ ಇರುವಂತೆ ಕಾಣುವುದಿಲ್ಲ, ಆದರೂ ವಿಜ್ಞಾನ ಮಾರ್ಗದ ವೀಕ್ಷಣೆ ಮಾನವನ ಅನುಭವದ ವೈವಿಧ್ಯತೆಗಳಿಗೆ ಎಲ್ಲ ಸಂದರ್ಭಗಳಲ್ಲೂ ಸರಿಹೊಂದುವಂತೆ ತೋರುವುದಿಲ್ಲ; ಮತ್ತು ನಮ್ಮ ಸುತ್ತಲಿನ ಅನಂತ ಅಪಾರ ಸಾಗರವನ್ನು ದಾಟಲು ಅದಕ್ಕೆ ಸಾಧ್ಯವಿರುವಂತೆ ತೋರುವುದಿಲ್ಲ. ದರ್ಶನ ಶಾಸ್ತ್ರದ ಸಹಾಯದಿಂದ ಇನ್ನು ಸ್ವಲ್ಪ ಮುಂದೆ ಹೋಗಿ ಆ ಅನಂತ ಸಾಗರದ ಯಾನಕ್ಕೆ ಧೈರ್ಯ ಮಾಡಬಹುದು. ವಿಜ್ಞಾನ ಮತ್ತು ದರ್ಶನ ಶಾಸ್ತ್ರ ಎರಡೂ ನಮ್ಮ ಸಹಾಯಕ್ಕೆ ಒದಗದಿದ್ದಾಗ ನಮಗೆ ಸಾಧ್ಯವಿರುವ ಇತರ ಜ್ಞಾನ ಶಕ್ತಿಯನ್ನು ನಾವು ನಂಬ ಬೇಕಾಗುತ್ತದೆ. ನಮ್ಮ ಇಂದಿನ ಮಾನಸಿಕ ಸ್ಥಿತಿಯಲ್ಲಿ ಯಾವುದೋ ಒಂದು ನಿರ್ದಿಷ್ಟ ನಿಲುವಿನಾಚೆ