ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೯ ಮೈರಾವಣನ ಕಾಳಗ ಎನಲು ನಕ್ಕನು ವೀರಹನುಮನು || ಮನದೊಳಗೆ ಸಲೆ ಚಿಂತೆದಾಳಿದ | ಹನುಮ ತಾ ದಿಟವರೆನೊ ಪಲ್ಲಟವಾದೆನೋ ಮೇಣು | ಮನವಚನದೊಳು ಸತಿಯರೆನಗಂ | ಜನೆಯ ಸಮವೀಧೂರ್ತ ತನ್ನಲಿ || ಜನಿಸಿದಂದವಿದೆಂತೆನುತೆ ನುಡಿಸಿದನು ನಂದನನ ||೭೮|| ನೀನು ಹನುಮನ ತನಯನೆಂತ್ಯೆ | ಮಾನಿನಿಯರಾತಂಗೆ ತಾಯ್ಕ ಳು | ನೀನು ಜನಿಸಿದ ಪರಿಯ ವಿಸ್ತರವಾಗಿ ಹೇಳಿದೆನಲು || ತಾನು ಜನನಿಯ ನೇಮದಿಂದಲಿ | ಭಾನುಮಂಡಲಕುರವಣಿಸಲಾ | ವಾನರನ ತನುಬೆವರಿ ಸುರಿದುದು ಕಡಲ ಮಧ್ಯದಲಿ ||೭೯|| ಅದನು ತಿಮಿಯಾದರಿಸಿ ನುಂಗಿದು | ದದುದರದೊಳು ಗರ್ಭ ಬಳೆದುದು | ಉದಧಿಯೊಳು ಬೆಸಲಾಗಲಾದಿನಕರನ ತೇಜದಲಿ || ವದನ ಮತ್ಯಾಕಾರ ದೇಹವು || ವಿದಿತ ವನಚರರೂಪಿನಿಂದಲಿ | ಮುದದಿ ಜನಿಸಿದೆ ಮತ್ತೈವಾನರನೆಂದು ಹೆಸರೆನಗೆ ||೮೦|| ಇನ್ನು ನೀನಾರೆಂಬುದನು ಸಂ | ನನ್ನ ಹೇಣತೆನೆ ಮನದಿ ನಾಚುತೆ | ತನ್ನ ತನಯನ ಕೂಡೆ ನುಡಿದನು ಹನುಮ ಎನಯದಲಿ || ನಿನ್ನ ಸಾಹಸವೆನ್ನ ತನುವನು | ಬನ್ನ ಬಡಿಸಿದುದೆನಲು ಶೌರ್ಯೋ | ತೃನ್ನ ನೀನಹುದೆಂದು ಭಯಭಕ್ತಿಯಲಿ ಬೆಸಗೊಂಡ ||೧|| ಮೆಚ್ಚಿದನು ಮನದೊಳಗೆ ಪವನಜ | ನುತ್ಸವದೊಳಂದಾಕುಮಾರಗೆ | ನಿಶ್ಚಯವ ಕೇಳಿನ್ನು ಕಲಿ ಹನುಮಂತ ತಾನೆನಲು ||