ಈ ಪುಟವನ್ನು ಪ್ರಕಟಿಸಲಾಗಿದೆ
ತಾಳಮದ್ದಳೆಯ ಹಿಮ್ಮೇಳ
39

ಕ್ಯಾಸೆಟ್‌ನಲ್ಲಿ ಸನ್ನಿವೇಶ ಪರಿವರ್ತನೆಗಳಿಗೆ ಚೆಂಡೆಮದ್ದಲೆಗಳ ಗತ್ತುಗಳ ಒತ್ತು ಇಲ್ಲದಿದ್ದರೆ, ತಾಳಮದ್ದಲೆ ಫಕ್ಕನೆ ಬಿಗಿ ತಪ್ಪಿದ ಅನುಭವವಾಗುತ್ತದೆ.

ಹಿಮ್ಮೇಳವು ತಾಳ ಮದ್ದಲೆಯಲ್ಲಿ ಕ್ರಿಯಾತ್ಮಕವಾಗಿ ಪಾಲುಗೊಳ್ಳುವು ದರಿಂದ ಹಿಮ್ಮೇಳ-ಮುಮ್ಮೇಳಗಳೊಳಗೆ ಒಂದು ಸಂವಾದ ಮನೋಧರ್ಮದ ಕೂಡುಕೊಳುಗೆಯಿಂದ ಮಾತ್ರ ಅರ್ಥಗಾರಿಕೆಗೆ ಒಂದು ಚೌಕಟ್ಟು ಒದಗಿ ಬರು ತ್ತದೆ. ಹಿಮ್ಮೇಳ ಸಾಕ್ಷಿ ಮಾತ್ರವಾಗಿದ್ದಾಗ ಅಂತಹ ಬಿಗಿತಪ್ಪಿ, ತಾಳಮದ್ದಲೆ ಚೌಕಟ್ಟಿಲ್ಲದ ಚಿತ್ರವಾಗುತ್ತದೆ.

ಭಾಗವತರು, ಮದ್ದಲೆಗಾರರು ಸಹ ಅರ್ಥಧಾರಿಯ ಜತೆ ಸೇರಿ, ಅವನ ಸ್ವಗತಗಳಿಗೆ ಪೂರಕವಾಗಿ, ಪೋಷಕವಾಗಿ ಮಾತುಗಳಿಂದ, ಹುಂಕಾರ ಗಳಿಂದ ಒತ್ತುಕೊಟ್ಟರೆ ಅರ್ಥಧಾರಿಗೆ ಸಿಗುವ ಪ್ರೇರಣೆ, ಉತ್ಸಾಹಗಳು ಅಸಾಧಾರಣವಾದವುಗಳು, ಮಾತಿನ ಏಕತಾನತೆ ತಪ್ಪಿಹೋಗುವುದು ಮಾತ್ರವಲ್ಲ, ಹಿಮ್ಮೇಳವು ಕೇಳುವ ಒಂದು ಪ್ರಶ್ನೆ-ಹೌದೆ ?' 'ಓಹೋ, ಹೀಗೆ ಯಾಕೆ ಮಾಡಿದಿರಿ ?' ಇಂತಹ ಚಿಕ್ಕ ಪ್ರಶ್ನೆಗಳೂ ಸಹ-ಅರ್ಥಧಾರಿಯ ಕಲ್ಪನೆಯ ಕದವನ್ನು ತೆರೆಯುತ್ತವೆ. ಅರ್ಥಧಾರಿಯ ಜತೆ ಹಿಮ್ಮೇಳ ಪೂರ್ಣವಾದ ಪ್ರಮಾಣದಲ್ಲಿ ನಾಟಕಕ್ರಿಯೆಯಲ್ಲಿ ಸೇರಿ, ತಾನೂ ಆದರ ಅಂಗ ವಾಗಿ ಒಳಗೊಂಡು ಪ್ರದರ್ಶಿತವಾಗಬೇಕಾದರೆ, ಹಿಮ್ಮೇಳದ ರಸಿಕತೆ ಜಾಗೃತ ವಾಗಿ ಕೆಲಸ ಮಾಡಬೇಕು.26 ಅರ್ಥಧಾರಿಗೆ ಅದು ಉಲ್ಲಾಸವನ್ನು ನೀಡು ವುದು ಮಾತ್ರವಲ್ಲ ಪದ್ಯಗಳನ್ನು ನವೀನ ಆರ್ಥವಂತಿಕೆ, ನವೀನ ವ್ಯಾಖ್ಯೆ ಗಳೊಂದಿಗೆ ಮಂಡಿಸಲು ಪ್ರೇರಣೆ ದೊರೆಯುತ್ತದೆ.

ಅರ್ಥಧಾರಿಯ ಅರ್ಥಕ್ಕೆ, ಅದರಲ್ಲೂ, ಪೀಠಿಕೆಗಳಿಗೆ ಬೇಕಾದ ದ್ರವ್ಯ ವನ್ನು, ಪದ್ಯದ ಒಂದು ಶಬ್ದದ ಉಚ್ಚಾರದ ಕ್ರಮದಿಂದ, ಒಂದು ಶಬ್ದದ ವ್ಯತ್ಯಾಸದಿಂದ ಓರ್ವ ಭಾಗವತನು ಹೇಗೆ ಒದಗಿಸಬಲ್ಲ ಎಂಬುದಕ್ಕೆ ಒಂದು ಉದಾಹರಣೆ-ಗದಾಪರ್ವದ ದುರ್ಯೋಧನನ ಪ್ರವೇಶದ ಮೊದಲ ಪದ್ಯವಾಗಿ ಭಾಗವತರು-'ಕುರುರಾಯನಿದನೆಲ್ಲ ಕಂಡು ಸಂತಾಪದಿ' ........ಎಂಬುದನ್ನು ಇದ್ದಂತೆಯೇ ಹಾಡಿ ಮತ್ತೊಮ್ಮೆ 'ಕುರುರಾಯನದನೆಲ್ಲ' ಎಂದೂ ಹಾಡಿದರು.