ಈ ಪುಟವನ್ನು ಪ್ರಕಟಿಸಲಾಗಿದೆ

138
ಮುಂದುವರಿದಾಗ ಶೈಲಿಯ ಕುರಿತ ಕಾಳಜಿ, ಸ್ಪಂದನಗಳೇ ಅಪ್ರಸ್ತುತವಾಗುವ ಸ್ಥಿತಿ ಬರುತ್ತದೆ. ಗೋವಾದ ದಶಾವತಾರಿ ಯಕ್ಷಗಾನ ಹೀಗಾಗಿ ಪೂರ್ಣ ವಿಘಟನೆಯ ಹತ್ತಿರಕ್ಕೆ ಬಂದುಬಿಟ್ಟಿದೆ. ಈ ದೃಷ್ಟಾಂತದಿಂದ ನಾವು ಎಚ್ಚರಗೊಳ್ಳಬೇಕು. ಯಕ್ಷಗಾನದ ಪರಿಷ್ಕಾರದ ಪ್ರೌಢ ಚರ್ಚೆಗಳಿಗೆಲ್ಲ, ಯಕ್ಷಗಾನವೆಂಬ ಕಲಾರೂಪದಲ್ಲಿ ಅಂಗೀಕೃತವಾದ, ಅದರ ತಳಪಾಯವಾದ ರೂಪದ ಬಗೆಗಿನ ನಿಷ್ಠೆಯು ಪ್ರಥಮ ನಿಬಂಧನೆ, ಸಾಂಗತ್ಯ - ಅಸಾಂಗತ್ಯ, ಪ್ರಾಚೀನತೆ - ನಾವೀನ್ಯ, ಪರಂಪರೆ - ಪ್ರಯೋಗ ಮೊದಲಾದವು ಬರಿಯ ಶಬ್ದಗಳಲ್ಲ. ಸಂಕೀರ್ಣವಾದ, ಗಹನವಾದ ಕಲಾತತ್ತ್ವ ವಿಚಾರಗಳು.
(ಈ ಬರಹಕ್ಕೆ ಪ್ರತಿಕ್ರಿಯೆಯಾಗಿ ಇಂತಹ ಧೋರಣೆಯು ಸಂಕುಚಿತವಾದುದು. ಅದು ವಿಮರ್ಶಾ ರಾಜಕೀಯ, ಪುರಾಣ ಪರ ಧೋರಣೆ~ ಎಂಬ ಪ್ರತಿಕ್ರಿಯೆ ಪ್ರಕಟವಾಗಿತ್ತು. ಅದಕ್ಕೆ ಮರುಮಾತಾಗಿ ಮುಂದಿನ ಲೇಖನವಿದೆ.)

0 ಡಾ. ಎಂ. ಪ್ರಭಾಕರ ಜೋಶಿ