ಈ ಪುಟವನ್ನು ಪ್ರಕಟಿಸಲಾಗಿದೆ
50
ಮುಡಿ

ಒಂದು ಸಂಸ್ಕೃತಿ ಪ್ರಕಾರಕ್ಕೆ ತನ್ನತನ, ಗುರುತು, ಇರುತ್ತದೆ. ಇದು ಅದರ ಸ್ಥೂ ಲವಾದ ಸ್ಥಿರಾಂಶ, ಯಕ್ಷಗಾನ ಘಟಕಗಳಾದ ವೇಷ, ನೃತ್ಯ, ಗಾನಾದಿಗಳ ಶೈಲಿ ಅಂತಹ ಲಕ್ಷಣಗಳು.ಅದಿಲ್ಲದೆ ಆ ಕಲೆ ಇಲ್ಲ. ಅದು ಅದಾಗಿರುವುದೇ ಶೈಲಿಯಿಂದ. ಅಂದರೆ ಶೈಲಿಯೇ ಕಲೆ ಎಂಬಷ್ಟು ಐಕ್ಯವಿದೆ. ಇಲ್ಲಿ ಔಚಿತ್ಯಕ್ಕೆ ಶೈಲಿ ಬದ್ಧತೆಯೇ ಮುಖ್ಯ ಮಾನದಂಡ. ಹಾಗೆಂದು ಯಕ್ಷಗಾನ ಎಂದರೆ ಕೇವಲ ಶೈಲಿ ಮಾತ್ರ ಅಲ್ಲ. ಅದಕ್ಕಿಂತ ಆಚೆಗೆ ಅದರ ಸತ್ವವೂ ಮುಖ್ಯ.

ಕಲೆಯು ಬದಲಾಗುತ್ತಾ ಬರುವುದಿಲ್ಲವೇ ? ಹಿಂದೆ ಇದ್ದಂತೆ ಯಾವುದು ಈಗ ಇದೆ ? ಬದಲಾವಣಿ ಅನಿವಾರ್ಯವಲ್ಲವೇ ? ಬೆಳವಣಿಗೆಗೂ ಬದಲಾವಣೆಯು ಅಗತ್ಯವಲ್ಲವೇ ? ಹೊಸ ಪ್ರಯೋಗ ಬೇಡವೇ ? ಕಲಾವಿದನಿಗೆ ನಾವೀನ್ಯದ ಸ್ವಾತಂತ್ರವಿಲ್ಲವೇ? - ಹೀಗೆ ಹಲವು ಪ್ರಶ್ನೆಗಳು ಶೈಲಿಗೆ ಇದಿರಾಗಿ ಬರುತ್ತವೆ. ಇವೆಲ್ಲವುಗಳಲ್ಲಿ ಸತ್ಯಾಂಶ ಇದೆ ನಿಜ. ಆದರೆ ಈ ಪ್ರಶ್ನೆಯನ್ನು ಯಾರು ಯಾಕಾಗಿ ಕೇಳುತ್ತಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಬದಲಾವಣೆಯನ್ನು ಯಾಕಾಗಿ ಮಾಡುತ್ತೇವೆ, ಅದರಿಂದ ಸಿದ್ಧಿಸುವ ಕಲಾತ್ಮಕ ಪ್ರಯೋಜನವೇನು ಎಂಬುದು ಪರಿಶೀಲಿಸಬೇಕಾದ ಸಂಗತಿ.

ವ್ಯಾಕರಣವು ಕಾವ್ಯವಲ್ಲ; ವ್ಯಾಕರಣ ಬದ್ಧತೆ ಒಂದು ಒಳ್ಳೆಯ ಕಾವ್ಯದ ಮಾನದಂಡವಾಗದು ನಿಜ. ಆದರೆ ಸುಮ್ಮಸುಮ್ಮನೆ ವ್ಯಾಕರಣವನ್ನು ಭಂಗಿಸಿ, ಬರೆಯುವುದು ಸುಧಾರಣೆ ಅಲ್ಲ ಹೇಗೋ, ಹಾಗೆಯೇ ಕಲೆಯ ಬಗೆಗೆ ಕೂಡ.

ಒಂದು ಕಲೆಯಲ್ಲಿ ನಡೆಯುವ ಹೊಸ ಸೃಷ್ಟಿ ಎಂಬುದು ಆ ಕಲಾರೂಪದ ಒಟ್ಟು ತಿಳುವಳಿಕೆಯಿಂದ, ಅಧ್ಯಯನದಿಂದ ಮೂಡಿದುದಾಗಿರಬೇಕು. ಭರತನಾಟ್ಯಂ ನೃತ್ಯದಲ್ಲಿ ಒಂದು ಹೊಸ ಹೆಜ್ಜೆಗಾರಿಕೆಯನ್ನೂ, ಹೊಸ ಭಂಗಿಯನ್ನೂ ನಿರ್ಮಿಸುವವನಿಗೆ ಒಟ್ಟು ಭರತ ನಾಟ್ಯಂನ ಶೈಲಿ, ನಡೆ, ಸ್ವಭಾವಗಳು ತಿಳಿದಿರಬೇಕು. ಇಲ್ಲವಾದರೆ ಆತನು ಎಷ್ಟೇ ಒಳ್ಳೆಯ ಉದ್ದೇಶದಿಂದ ಮಾಡಿದ ಹೊಸ ನಾಟ್ಯವಾದರೂ ಲಾಂಛನವಾಗಿ, ತೇಪೆಯಾಗಿ ಸಡಿಲವಾಗಿ ಕಾಣುತ್ತದೆ.

ಯಕ್ಷಗಾನದ ವೇಷಕ್ಕೆ ಒಂದು ಹೊಸ ಅಂಶವನ್ನು ಒಂದು ಕೈಕಟ್ಟು, ಸೊಂಟಪಟ್ಟಿ ,ಕಾಲು ಪಟ್ಟಿ ನಾವು ಸೇರಿಸುತ್ತಿದ್ದೇವೆ ಎಂದಿಟ್ಟುಕೊಳ್ಳೋಣ. ಅದನ್ನು ತಯಾರಿಸಬೇಕಾದರೆ ಯಕ್ಷಗಾನ ವೇಷಭೂಷಣಗಳ ಶೈಲಿಯ ಅರಿವು ಬೇಕು. ನಾವು ಮಾಡುವ ಹೊಸ ಅಂಶ

* ಡಾ. ಎಂ. ಪ್ರಭಾಕರ ಜೋಶಿ