೧೬] ರಘುಕುಲಚರಿತಂ. ೧೧೧ ಉತ್ತರದಿಕೆಯು - ಹಿಮವತ್ಸಂಬಂಧದಿಂದುಂಟಾದ ಹಿಮವೃಷ್ಟಿಯೆಂಬ ಆನಂದಬಾಷ್ಪವನ್ನು ಕರೆಯುತಲಿದ್ದಿತು, ಆಗ - ಹೇರಳವಾದ ತಾಪವ ನ್ನೊಳಗೊಂಡಿರುವದಿವಸ, ವಿಶೇಷವಾಗಿ ಕೃಶಿಸಿರುವರಾತ್ರಿ ಎಂಬೀ ಎರಡೂ ಪ್ರಣಯ ಕಲಹವೇಮೊದಲಾದ ವಿರೋಧಾಚರಣೆಯಿಂದ ಅಗಲಿ, ಅನುತಾಪ ಪಡುತಲಿರುವ ಗಂಡ ಹೆಂಡಿರಂತೆ ಇರುತ್ತಿದ್ದುವು. ಪುಣ್ಯವಂತರ ಮನೆಗಳ ಅಂಗಳಗಳಲ್ಲಿನ ಕೊಳಗಳೊಳಗೆ ನೀರು - ಒಣಗಿದ ಪಾವಸೆಗಳನ್ನು ಮಾತ್ರವೇ ಸೋಪಾನಗಳಮೇಲೆ ಉಳಿಸುತ್ತಾ, ದಿನದಿನಕ್ಕೂ ಕೆಳಕೆ ಇಳಿದು, ನೀರಾಟಕ್ಕೆ ತಕ್ಕುದೆನಿಸುವಹಾಗೆ ನಾರಿಯರ ಟೊಂಕದುದ್ದ ರೆ. ಪ್ಲಾಗಿ ನಿಲ್ಲುತಬಂದಿತು, ತೋಟಗಳೊಳಗೆ ಸಂಜೆಯಹೊತ್ತಿನಲ್ಲಿ ಅರಳುತ ಸುವಾಸನೆಯನ್ನು ಹರಡುತಲಿರುವ ಮಲ್ಲಿಗೆಯ ಮೊಗ್ಗು ಗಳಮೇಲೆ, ಕಾಲ ನ್ಯೂರಿಯ ಊರದಹಾಗೆ ಹಾರಾಡುತಲಿರುವ ದುಂಬಿಗಳು - ಬಾಯಿಂದ ಲೆಕ್ಕವನ್ನು ಹೇಳಿ, ಕಾಲಿನಿಂದ ಎಣಿಸುತಲಿರುವುವೊ ಎಂಬಂತೆ ಕಾಣಬ ರುತ್ತಿದ್ದುವು. ನಾರಿಯರು ಕಿವಿಗಳ ಸಂದಿನಲ್ಲಿ ನಿಂಗರಿಸಿಕೊಂಡಿರುವ ಬೆಟ್ಟ ಮಲ್ಲಿಗೆಯಹೂಗಳು - ಉದಿರುವಹಾಗೆ ಬಾಗಿದ್ದರೂ ಕಪೋಲಗಳ ಇನ ಬೆವರು ಹನಿಗಳಲ್ಲಿ ರೇಕುಗಳು ಮೆತ್ತಿಕೊಳ್ಳುತಲಿದ್ದು ದರಿಂದ ತಟ್ಟನೆ ಕೆಳಕ್ಕೆ ಬೀಳುತಲಿರಲಿಲ್ಲ. ಭಾಗ್ಯವಂತರು - ತಮ್ಮ ದಿವ್ಯ ಭವನಗಳೂ ಳಗೆ ಇಡಿಸಿರುವ ಜಲಧಾರಾ ಯಂತ್ರಗಳ ಮೂಲಕ ಶೀತಲಚಂದನ ರಸಗ ಳನ್ನು ಚೆಲ್ಲಿಸಿ, ಮಣಿಮಯವಾದ ಹಲಗೆ ಗಲ್ಲುಗಳನ್ನು ತೊಳೆಯಿಸಿ, ಅವು ಗಳಮೇಲೆ ಸವಳಸುತ್ತಾ, ಬಿಸಿಲಿನ ಜಳವನ್ನು ಪರಿಹರಿಸಿಕೊಂಡು ತಂಪು ಮಾಡಿಕೊಳ್ಳುತಲಿದ್ದರು, ಪುರ ಸುಂದರಿಯರು - ಸಂಜೆಯಹೊತ್ತಿನಲ್ಲಿ ಸುಖಮಜ್ಞನಮಂಗೈದು ತಮ್ಮ ಅಂದವಾದ ಕೂದಲಿಗೆ ಪರಿಮಳ ಧೂಪ ವನ್ನು ಕೊಟ್ಟು ಗಮಗಮಿಸುವ ಮಲ್ಲಿಗೆಯ ಮೊಗ್ಗುಗಳಿಂದ ಅಲಂಕರಿಸಿ ಕೊಳ್ಳುವರು. ರಜದಿಂದ ತುಂಬಿ, ಹೊಂಬಣ್ಣವಾಗಿಯೂ, ನೀಳವಾಗಿಯೂ ಇರುವ ಅರ್ಬನತರುಕುಸುಮಮಂಜರಿಯು" - ದೇಹವನ್ನೇ ಸುಟ್ಟು ಬಿಟ್ಟರೂ ಶಾಂತನಾಗದೆ ಮೃತ್ಯುಂಜಯನು ಕತ್ತರಿಸಿದ ಕಾಮನ ಬಿಲ್ಲಿನ ಹೆಡೆಯಂತೆ ಕಂಗೊಳಿಸುತಲಿದ್ದಿತು. ಮನೋಹರವಾಗಿರುವ ಮಾವಿನ ಗಿಡಗಳ ಚಿಗುರು, ಕಬ್ಬಿನಹಾಲಿನಿಂದ ಮಾಡಿದ ಮದರಸ, ಗಮಗಮಿಸುವ
ಪುಟ:ರಘುಕುಲ ಚರಿತಂ.djvu/೧೧೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.