ಈ ಪುಟವನ್ನು ಪ್ರಕಟಿಸಲಾಗಿದೆ
ರಮಾನಂದ
೮೫

ಕಿವಿಗೊಡದೆ ಸ್ವಚ್ಚಂದನಾಗಿ ತಿರುಗುವುದನ್ನು ನೋಡಿ ವಿಷಾದಪಡುವೆನಾದರೂ ಯತ್ನವಿಲ್ಲದೆ ಸುಮ್ಮನಿರಬೇಕಾಗಿದೆ, ಈ ದಿನವೂ ಆತನು ಬಾಲೋದ್ಯಾನದ ಮಂಟಪದಲ್ಲಿ ಒಬ್ಬನೇ ಕುಳಿತಿದ್ದುಧನ್ನೂ ಆತನಲ್ಲಿಗೆ “ ಮಧುಕರಿ ' ಎಂಬ ವೇಶ್ಯಾಂಗನೆಯು ಚೇಟಿಯೊಡನೆ ಹೋಗುತ್ತಿದ್ದುದನ್ನು ನೋಡಿ, ಅಲ್ಲಿ ನಿಂತಿರಲಾರದೆ ಹೊರಟು ಬಂದನು, ಇದು ನಿಜವೋ ಸುಳ್ಳೋ ಎಂದು ನಿರ್ಧರಿಸಬೇಕಾಗಿದ್ದರೆ ಸತ್ಯ ಸೇನನನ್ನು ಕೇಳಬಹುದು.” ಎಂದು ಹೇಳಿದನು, ಆ ಬಳಿಕಲಂತೂ ಗುರುಗಳು ಕ್ರೋಧದಿಂದ ಅಧೀರರಾಗಿ ಕುಳಿತು- ಚಿಃ | ಚಿಃ!! ಇನ್ನು ನನ್ನಿ೦ದ ಕೇಳಲಾಗುವುದಿಲ್ಲ. ಹೇಳದಿರಿ. ಒಬ್ಬನಿಂದ ಆತನು ನಾಟಕಶಾಲೆಗೆ ಹೋಗುತ್ತಿರುವನೆಂಬುದನ್ನು ತಿಳಿಯಲಾಯ್ತು. ಮತ್ತೊಬ್ಬನಿಂದ ನಿಶಾಚರನಾಗಿ ದುರ್ವ್ಯಸನದಲ್ಲಿ ಬಿದ್ದಿರುವನೆಂಬುದನ್ನು ಕೇಳಿದೆನು, ಮತ್ತೊಬ್ಬನಿಂದ ಇವೆಲ್ಲವೂ ಒಟ್ಟಿಗೆ ನಿರ್ಧಾರವಾಗುವಂತೆ ಮಾಡಲ್ಪಟ್ಟಿತು. ಇನ್ನು ಉಳಿದಿರುವುದೇನು ? ಇಂತಹ ಶಿಷ್ಯರನ್ನು ಬಳಿಯಲ್ಲಿರಿಸಿಕೊಂಡು ಕಲಿಸುವೆನೆಂಬ ಗುರುವೇ ಹುಚ್ಚ ನಾಗುವನಲ್ಲದೆ, ಬೇರಿಲ್ಲ.” ಎಂದು ಹೇಳಿ, ಅಲ್ಲಿಂದೆದ್ದು ಎಲ್ಲರೊಡನೆ ಹೊರಟುಹೋದರು, ನಾನು ಅವರ ಕಟ್ಟಾಣತಿಯಂತೆ ನಿನ್ನನ್ನು ಹುಡುಕಲು ಇಲ್ಲಿಗೆ ಬಂದೆನು.
ರಮಾ;- (ಸ್ತಬ್ಧನಾಗಿ ಕುಳಿತುಕೊಳ್ಳುವನು.)
ಸೌಮ್ಯ:- ಎಲಾ ಪಾಪಿ ! ರವಿವರ್ಮ! ದಾಯಾದಮಾತ್ಸರ್ಯದಿಂದ ಬೀಗಿ ಹೀಗೆ ಹೇಳಿದೆಯಾ ? ಒಡಹುಟ್ಟಿದ ಪ್ರೀತಿ, ಎಳ್ಳಷ್ಟಾದರೂ ಬೇಡವೇ ? ಹೇಗೆ ಬಂದೀತು ? : ನೀತಿಯೇ ಇಲ್ಲವೆ ?

ಕ೦ದ ||" ಒಡಹುಟ್ಟಿದರೇಂ ನಂಟರೆ ?|
ಒಡಪುಟ್ಟಿಯೇ ಕೊಲ್ಗುಮತ್ತೆ ಕುತ್ತಂ ನರನಂ |
ಅಡವಿಯೊಳೆ ಪುಟ್ಟ ಮೂಲಿಕೆ |
ಕಿಡಿಕುಂ ಗಡರುಜೆಯ ನನ್ನರುಂ ಬುವಿಯೊಳೊಳರ್ ”