ಈ ಪುಟವನ್ನು ಪ್ರಕಟಿಸಲಾಗಿದೆ
೧೦೨
ಸತೀಹಿತೈಷಿಣೀ

ಉಪಾ:- ತೋಟಕ್ಕೆ ನೀವಿಬ್ಬರೂ ಜತೆಯಾಗಿ ಹೋಗಿ ದ್ದಿರೋ ?
ಸೌಮ್ಯ: – ಇಲ್ಲ. ಅವನು ಮುಂದಾಗಿ ಹೋಗಿದ್ದನು. ಆ ಬಳಿಕ ನಾನು ಹೋಗಿ ಸೇರಿದೆನು.
ಉಪಾ:- ಅಲ್ಲಿ ಅವನು ಏನು ಮಾಡುತ್ತಿದ್ದನು? ಯಾರೊಡ .ನಿದ್ದನು?
ಸೌಮ್ಯ:-ಒಬ್ಬನೇ ಕಲ್ಲು ಜಗಲಿಯ ಮೇಲೆ ಕುಳಿತು ಆಲೋ ಚಿಸುತ್ತಿದ್ದನು.
ಉಪಾ :- ಏನನ್ನು ಕುರಿತು ಆಲೋಚನೆ ? ಸ್ತ್ರೀವ್ಯಾಮೋಹವನ್ನು ಕುರಿತೋ ?
ಸೌಮ್ಯ:- ಪೂಜ್ಯರೆ! ಹಿರಿಯರ ಬಾಯಿಂದ ರಮಾನಂದನ ವಿಚಾರದಲ್ಲಿ ಇಂತಹ ದೋಷಾರೋಪಣೆಯು ಬರಬಾರದು. ಆತನು ಇದಕ್ಕೆ ಗುರಿಯಾಗುವಂತಿಲ್ಲ.
ಉಪಾ:- ಹಾಗಿದ್ದರೆ ಸಂತೋಷ, ಆತನು 'ಮಧುಕರಿ' ಎಂಬ ವೇಶ್ಯೆಯನ್ನು ನೋಡಿಯಾದರೂ ಇರುವನೋ, ಇಲ್ಲವೋ?
ಸೌಮ್ಯ:- ಗುರುದೇವ! ನಿಷ್ಕಲಂಕಿಯಾದ ರಮಾನಂದನಲ್ಲಿ ಕಲಂಕವನ್ನು ಹೊರಿಸುವದಕ್ಕೂ, ಆತನ ಜೀವಿತವನ್ನು ಕೊನೆಗಾಣಿಸುವದಕ್ಕೂ ಹೊಂಚಿರುವ ದ್ರೋಹಿಗಳ ಹೊರತು, ಮತ್ತಾರೂ ಆತನಲ್ಲಿ ಸಂಶಯ ಪಡುವಂತಿಲ್ಲ, ಮಧುಕರಿಯ ಹೆಸರನ್ನಾದರೂ ಆತನು ಸರಿಯಾಗಿ ಕೇಳಿಲ್ಲ.
ಉಪಾ:- ಹಾಗಾದರೆ, ಮಧು ಕರಿಯ ಪ್ರೇಮ ಪತ್ರಿಕೆಗಳೂ ಭಾವಚಿತ್ರವೂ ಇವನಲ್ಲಿರಲು ಕಾರಣವೇನು?
ಸೌಮ್ಯ:- ಗುರುದೇವ! ಇದಕ್ಕೆ ಕಳಿಂಗ, ರವಿವರ್ಮರೇ ಉತ್ತರವಾದಿಗಳಾಗಬೇಕು,
ಕಳಿಂಗ, ರವಿ:- ಹಾ ಹಾಗೆಂದರೇನು? ನಾವೇಕೆ ಉತ್ತರ