ಈ ಪುಟವನ್ನು ಪ್ರಕಟಿಸಲಾಗಿದೆ
ಶ್ರೀ
ಪ್ರಥಮಾಂಕ ಪ್ರಾರಂಭ.

(ಕ್ಷೇಮದರ್ಶಿಯ ಪ್ರವೇಶ.)

ಕ್ಷೇಮ:- (ಮೇಲೆ ನೋಡಿ) ತ್ರಿಕಾಲವಂದ್ಯನಾದ ಭಗವಾನ್ ದಿನನಾಥನಿಗೆ ವಂದನೆ. (ಸಭೆಯ ಕಡೆಗೆ ತಿರುಗಿ) ಲೋಕದಲ್ಲಿ ಪ್ರತಿ ಮಾನವನ ಉನ್ನತಿಗೂ, ಅವನತಿಗೂ ಸಹವಾಸವೇ ಕಾರಣವೆನ್ನಬೇಕು, ಸಹವಾಸವು ಸರಿಯಾಗಿಲ್ಲದಿದ್ದರೆ, ಸತ್ಕುಲದಲ್ಲಿ ಹುಟ್ಟಿದ ಮಾತ್ರದಿಂದ ಉನ್ನತಿಯನ್ನು ಪಡೆಯಲಾರನು. ಇದಕ್ಕೆ ಉದಾಹರಣೆಗೆಂದರೆ ನಮ್ಮ ಶ್ರೀಮಂತನ ಕುಮಾರರೀರ್ವರ ವಿಚಾರವನ್ನು ತೆಗೆದುಕೊಂಡರೆ ಸಾಕಾಗಿದೆ. ಆದರೆ, ಸುಜನರ ಸಹವಾಸವನ್ನು ಹೊಂದುವುದಕ್ಕೆ ಬಾಲ್ಯ ಸುಶಿಕ್ಷಣೆ ಸಹಕಾರಿಯಾಗುವುದೆಂದರೆ ತಪ್ಪಾಗದು. ಅದಿಲ್ಲವಾದರೆ ಪಾತ್ರಸ್ವರೂಪಜ್ಞಾನವೂ, ಅದರಿಂದಾಗುವ ಫಲಾನುಭವವೂ ಅವರ ಮನಸ್ಸಿಗೆ ಹೊಳೆಯಲಾರವು, ಈ ವಿಚಾರದಲ್ಲಿ ತಾಯ್ತಂದೆಗಳೂ, ಪೋಷಕರೂ ಅಥವಾ ಗುರುಜನರೂ ಬಹು ಜಾಗರೂಕರಾಗಿರಬೇಕಾದುದು ಅತ್ಯಾವಶ್ಯಕವ. ( ಕೆಲವು ಹೊತ್ತು ಸುಮ್ಮನಿದ್ದು ಬಳಿಕ ಎಚ್ಚತ್ತು ) ಏನಿದು ! ಸಹವಾಸದ ಫಲಾನುಭವದ ವಿಚಾರವನ್ನು ವಿಮರ್ಶಿಸುತ್ತ, ನಾನು ಬಂದ ಕೆಲಸವನ್ನೇ ಮರೆತಿದ್ದೆನು. ಈಗಾಗಲೇ ಬಿಸಲೇರುತ್ತ ಬರುತ್ತಲಿದೆ. ಇನ್ನು ತಡಮಾಡಿದರೆ ನನಗೆ ಮಹೋಪಾಧ್ಯಾಯರ ದರ್ಶನವು ದುರ್ಲಭವಾದೀತು, ನಾನಿನ್ನು ಹೊರಡುವೆನು, (ಹೊರಡುವನು)
ಸ್ನಾನ ೧:- ವಿದ್ಯಾವಾಗೀಶನ ಅಕ್ಕಿ ಕ ಸ್ಥಳ.
(ಕ್ಷೇಮದರ್ಶಿಯು ಪ್ರವೇಶಿಸಿ, ಮುಂದೆ ಬಗ್ಗಿ ನೋಡಿ) ಆಹಾ! ಇದಲ್ಲವೆ, ಪೂಜ್ಯರ ವಿದ್ಯಾಭವನವ? (ಮುಂದಕ್ಕಡಿಯಿಟ್ಟು ನೋಡಿ)