ಈ ಪುಟವನ್ನು ಪ್ರಕಟಿಸಲಾಗಿದೆ

ರಮಾನಂದ
೬೭

ರೆವು.

ವಿದ್ಯಾ :- ಅದೇನೆಂಬುದನ್ನು ಬಾಯ್ದೆರೆದು ಹೇಳಬಾರದೇ?

ರವಿ:- ಮತ್ತೇನೂ ಇಲ್ಲ. ರಮಾನಂದನು ಶಾಲೆಗೆ ಬರುವಾಗ ಚಾವಡಿಯ ಮುಂದೆ ಬರುತ್ತಿದ್ದನು.

ರಮಾ:- (ಕೌತುಕವಿಸ್ಮಯಗಳಿಂದ ನೋಡುವನು).

ವಿದ್ಯಾ:- ಆ ಮೇಲೆ ?

ರವಿ:- ಹಾಗೆ ಬರುತ್ತಿದ್ದವನ ಹಿಂದೆಯೇ ಮತ್ತೂಬ್ಬ ಜೂಜುಗಾರನು ಓಡಿಬಂದು, ಇವನನ್ನು ಹಿಡಿದು ನಿಲ್ಲಿಸಿಕೊಂಡನು. ಹಿಂದೆ ದೂರದಲ್ಲಿ ಬರುತ್ತಿದ್ದ ನಾವು ಇದನ್ನು ನೋಡಿ, ಸಂಗತಿಯನ್ನು ತಿಳಿಯಲು ಅಲ್ಲಿಯೇ ನಿಂತೆವು.

ವಿದ್ಯಾ:- (ಶಂಕಿತನಾಗಿ) ಆ ಮು೦ದೆ ?

ರವಿ:- ಹಾಗೆ ಆತನು ಹಿಡಿದು ನಿಲ್ಲಿಸಿಕೊಂಡ ಒಂದೆರಡು ನಿಮಿಷದಲ್ಲಿಯೇ ಈತನು ತಪ್ಪಿಸಿಕೊಂಡು ಓಡಿಹೋದನು.

ವಿದ್ಯಾ:-- ಇದೇನೋ ವಿಚಿತ್ರವಾಗಿದೆ, ಮುಂದೆ ಹೇಳಿರಿ.

ರವಿ:- ಇವನು ಓಡಿದ ವೇಗದಿ೦ದ ಕ೦ಕುಳಲ್ಲಿ ಅಡಗಿದ್ದ ಪುಸ್ತಕವು ಕಳೆದು ಕೆಳಗೆ ಬಿದ್ದು ಹೋಯಿತು. ಆತುರದಲ್ಲಿದ್ದ ಇವನಿಗೆ ಅದು ಗೊತ್ತಾಗಲಿಲ್ಲವೇನೋ ತಿಳಿಯೆವು. ಹೇಗೂ ಅದನ್ನು ಆತನು ಕೈಕೊಂಡು ತೆರೆದು ನೋಡುತ್ತ ಅದರಲ್ಲಿದ್ದ ಪತ್ರವನ್ನು ತೆಗೆದು, ಕೆಳಗೆ ಬಿಸುಟು, ಬಂದದಾರಿಯಲ್ಲಿ ಹಿಂದಿರುಗಿದನು.

ರಮಾ:- (ತಲೆದೂಗಿ) ಅಣ್ಣ | ವಾರ್ತಾತರಂಗಗಳು ಬಹುಪ್ರಯಾಸದಿಂದ ಕಂಠಪಾಠಮಾಡಲ್ಪಟ್ಟು ಹೊರಹೊರಡುವುದೆಂದು ತೋರುತ್ತಿರುವುವು.

ವಿದ್ಯಾ:- (ದರ್ಪಿತನಾಗಿ) ಸಂಗತಿಯನ್ನು ವಿಸ್ತರಿಸುವುದಕ್ಕೆ ಮೊದಲೇ ನೀನೇಕೆ ತಡೆಯುತ್ತಿರುವೆ ?

ರಮಾ:- ಗುರುದೇವ | ಸತ್ಯಕ್ಕೆ ಸಾವಿಲ್ಲವೆಂದು ನಂಬಿರು