ಈ ಪುಟವನ್ನು ಪ್ರಕಟಿಸಲಾಗಿದೆ

ಶ್ರೀ

||

!!ಶ್ರೀ ಲಕ್ಷ್ಮೀ ಪ್ರಸನ್ನ !!

ತು ರೀ ಯಾಂ ಕೆ

( ಪ್ರಾರ್ಥನೆ. )

ರಾಗಾ-
( ತರಣಿ ವಂಶಾಬ್ದಿ ಚಂದ್ರ )

ಪಾಲಿಸೆನ್ನನು ಜಾನಕಿ-ಅರವಿಂದನಾಯಕಿ - ಪಾಲಿಸೆನ್ನನು ಜಾನಕೀ ||ಪ||
ಫಾಲಲೋಚನನುತೆ-ತ್ರೈಲೋಕ್ಯವಿಖ್ಯಾತ ಬಾಲಾರ್ಕದ್ಯುತಿ ಭಾಸುರಾನನೆ -
ನೀಲಾಭಕ ನಿತ್ಯ ನಿರ್ಮಲೆ || ಪಾಲಿಸೆನ್ನನು ||ಅನು||
ಜನನಿಯಲ್ಲವೆ ನೀನು- ತನು ಭವರೋಳು-ಇನಿತು ನಿರ್ದಯವೇನು? |
ಮನಕೆತಾರಲು ನೀನು -ಕ್ಷಣದೊಳು ದೀನನಂ-ಅನಘಸಂಪದದಿಂದ ಮೆರೆಯಿಪ
ಘನತೆಯಾಂತವಳಲ್ಲವೇನು? -||ಪಾಲಿಸೆನ್ನನು||||೧||

ಬಾಗುತಶಿರವಿಳಿಗೆ ಬೇಡುವಬಗೆ- ಕೂಗುಬೀಳದೆ ಕಿವಿಗೆ | ಭಾಗವಶಾರ್ಚಿತ--ಭಾರ್ಗವೀನಾಮಖ್ಯಾತೆ - ಬೇಗೆಯೆಲ್ಲವ ಪರಿದುಯನ್ನನು-
ರಾಗದಿಂದಲಿ ನೋಡು ಭರದಲಿ || ಪಾಲಿಸೆನ್ನನು||೨|
ನೀನಲ್ಲದನ್ಯರ - ಕಾಣೆನುಹಿತರ-ಮಾನಿತಗುಣಯುತರ |
ಆನತರಾಗುವ- ಸೂನೃತವ್ರತಿಗಳಿ ಗಾನಂದವಿತ್ತು ಸಲಹುವ-ರಾಜೇಂದ್ರ
ನಾಥನ ರಾಣಿ ಶ್ರೀಮಣಿ || ಪಾಲಿಸೆನ್ನನು ||೩||

ಸ್ನಾನ ೧:- ಬಾಲೋದ್ಯಾನದ ಮುಂಗಡಯ ದಾರಿ.

(ವ್ಯಸ್ತಚಿತ್ತನಾದ ರಮಾನಂದನ ಸಹಾಧ್ಯಾಯಿ ಸೌಮ್ಯನ ಪ್ರವೇಶ.)

ಸೌಮ್ಯ:- (ಮೇಲೆ ನೋಡಿ ನಿಟ್ಟುಸಿರಿಟ್ಟು) ( ನಮ್ಮ ಆಯುಷ್ಮಂತನಾದ ರಮಾನಂದ ಕುಮಾರನು ಎಲ್ಲಿ ಹೋದನೋ, ಏನಾದನೋ ಏನು ಮಾಡುತ್ತಿರುವನೋ ಗೊತ್ತಾಗಲಿಲ್ಲ, ನಾನು ವಿದ್ಯಾರ್ಥಿಮಂದಿರ, ವಿದ್ಯಾಶಾಲೆ ಮೊದಲಾದೆಡೆಗಳಲ್ಲೆಲ್ಲಾ ಹುಡುಕಿ ಸಾಕಾಗಿ