ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ಗಳು ವ್ಯಾಸಗಳೇ ಹೊರತು ರಾಮಮೋಹನನ ವಾಕ್ಯಗಳಲ್ಲವ, ಅವುಗಳನ್ನೆಲ್ಲ ಓದಿ ನೋಡಿ ದರೆ ಎಲ್ಲಿಯಾಗಲಿ ಈತನು ಯೂನಿಟೇರಿರ್ಯ ಕ್ರಿಸ್ಟಿಯನಂದು ಹೇಳಲಿಕ್ಕೆ ಆಧಾರಗಳು ಸಿಕ್ಕವು, ಜೀಸಸ್' ದೇವರ ಕುಮಾರನೆಂದು ರಾಮಮೋಹನನು ನಂಬಲಿಲ್ಲವೆಂತಲೂ ಜೀಸನನು ದೇವರ ಮಹಾತ್ಮ ವನ್ನು ಪ್ರಕಟಿಸಿ ಪಾಮರರನ್ನು ಭಕ್ತಿ ಪರವಶರನ್ನಾಗಿ ಮಾಡಿದಂತೆ ಮಾತ್ರವೇ ಒಪ್ಪಿಕೊಂಡಿರುವನೆಂತಲೂ ಪೂರೊಗಳಾದ ಉತ್ತರಗಳಿಂದಲೂ, ವ್ಯಾಸಗ ೪ಂದಲೂ, ಕಾಣಬರುವುದು, ಆದರೆ ಇಷ್ಟು ಮಾತ್ರದಿಂದಲೇ ಆ ಮತಸ್ಥನಾದನೆಂದು ಹೇಳುವುದು ನ್ಯಾಯವಲ್ಲ. ಜೀಸಸನು ಮಾತ್ಮನೆಂದು ಒಪ್ಪಿಕೊಳ್ಳತಕ್ಕ ವರನೇಕರು ಈಗ ಲೂ ಕೂಡ ಬ್ರಹ್ಮ ಸಮಾಜದಲ್ಲಿದ್ದೇ ಇರುವರು, ಆದರೆ ಅವರಲ್ಲಿ ಒಬ್ಬರಾದರೂ ಕ್ರಿಸ್ತಿಯ ರಾಗಿಲ್ಲ, ರಾಮಮೋಹನನು ಎಲ್ಲಿಯಾದರೂ ತಾನು ಬೈಬಲ್ಲನ್ನು ದೇವರ ಸತ್ಯಗ್ರಂಥ ವೆಂದು ನಂಬಿರುವೆನೆಂದು ಹೇಳಿಲ್ಲ. ಮತ್ತು ಆತನಿಂದ ರಚಿಸಲ್ಪಟ್ಟ ಕ್ರಿಸ್ಟಿಯರ ಮತವಿಷ ಯವಾದ ಗ್ರಂಥಗಳಲ್ಲಿಯಾದರೂ ತನ್ನ ಅಂತರಾತ್ಮಕ್ಕೆ ಇದು ಸತ್ಯಗ್ರಂಧವೆಂದು ತೋರುವು ದಾಗಿ ಆತನು ಒಪ್ಪಿಕೊಂಡಂತೆ ಕಾಣಬರುವುದಿಲ್ಲ. ಮಿಸ್ ಕಾರ್ಪೆಂಟರು ತೋರಿಸಿರುವ ಉತ್ತರಗಳಿಂದಾಗಲಿ, ವ್ಯಾಸಗಳಿಂದಾಗಲಿ ಈ ವಿಷಯವು ದೃಢಪಡಿಸಲ್ಪಟ್ಟಿಲ್ಲ, ಇಂಗ್ಲೆಂ ಡಿನಲ್ಲಿ ಇದ್ದಾಗಲಾದರೂ ಅವರ ಮಾತನ್ನು ಕುರಿತು ತಾನು ಇಂಡಿಯಾದಲ್ಲಿದ್ದಾಗ ಹೇಳಿದ್ದ ಕ್ಕಿಂತ ಹೆಚ್ಚಾಗಿಯಾಗಲಿ ವಿರೋಧವಾಗಿಯಾಗಲಿ ಯಾವುದನ್ನೂ ಹೇಳಿದಂತೆ ಕಾಣಬಂದಿಲ್ಲ. ಆದುದರಿಂದ ಈತನು ಕ್ರೈಸ್ತ ಮತವನ್ನೆ ಸಕ್ಕೋತೃ ಷ್ಟವಾದುದನ್ನಾಗಿ ಭಾವಿಸಿದ್ದನೆಂದು ಹೇಳಲಿಕ್ಕೆ ಅವಕಾಶವಿಲ್ಲ. ಮಿಸ್ ಕಾರ್ಪೆಂಟರು ಕೊಟ್ಟಿರುವ ಉದಾಹರಣೆಗಳು ಒಂದರಲ್ಲಿ ರಾಮಮೋಹನನು ಚೇಸಸು ಮಾಡಿದ ಅವನುಷಚಲ್ಯಗಳನ್ನೂ ಆತನು ಸತ್ತು ಹೋದ ಮ ರನೇದಿನ ಮರಳಿ ಎದ್ದು ಬಂದುದನ್ನೂ ಒಪ್ಪಿಕೊಂಡಿರುವನೆಂದು ಬರೆದಿರುವಳು. ಆದರೆ ಈಕೆಯು ರಾಮಮೋಹನನ ಭಾವವನ್ನು ತಪ್ಪಾಗಿಗ್ರಮಿಸಿರ ಬೇಕೆಂದು ನಾವು ಯೋಚಿಸಿರುವೆವು. ಸರ್ವಸಾಧಾರಣವಾಗಿ ಒಬ್ಬ ಮನುಷ್ಯನು ಒಂದುಸಾರಿ ಇತರರು ಏನು ಹೇಳಿದರೂ ಅದನ್ನು ತನ್ನ ಅಭಿಪ್ರಾಯವನ್ನನುಸರಿಸಿಯೇ ಹೇಳಿದನೆಂದು ಭ್ರಮಿಸುವುದು ಸ್ವಭಾವವು. ಆದುದರಿಂದ ರಾಮಮೋಹನನು ಯಾವಾಗಲಾದರೂ ಜೀಸಸನು ಹೇಳಿದ ನೀತಿಗಳನ್ನು ಉಪ ನ್ಯಾಸಮಾಡುತ್ತಾ ಆತನಲ್ಲಿ ಕ್ರಿಯರಿಗೆ ಉಂಟಾಗಿರುವ ನಂಬಿಕೆಗಳನ್ನೂ ಕುರಿತು ಹೇಳಿ ದಾಗ ಆ ವಾಕ್ಯಗಳು ಆತನ ನಂಬಿಕೆಯನ್ನು ಸೂಚಿಸತಕ್ಕವುಗಳೇ ಎಂದು ಈ ವಿದ್ಯಾವತಿಯು ಗ್ರಹಿಸಿರಬಹುದೆಂಬುದೇ ನಮ್ಮ ಅಭಿಪ್ರಾಯವು. ಪ್ರಜೆಗಳೆಲ್ಲರೂ ತಮ್ಮ ತಮ್ಮ ಮತಗಳಲ್ಲಿ ವಧವಿಶ್ವಾಸಗಳಿಗೆ ಒಳಗಾಗಿ ಕೆಟ್ಟು ಹೋಗುತ್ತಿರುವುದನ್ನು ಆ ದುರಾಚಾರಗಳನ್ನು ಸಂಸ್ಕರಿಸಿ ಅದು. ಒಳ್ಳೆಯ ಮಾರ್ಗಗಳನ್ನು ತೋರಿಸಲಿಕ್ಕೆ ಯತ್ನಿಸಿದ ರಾಮಮೋಹನನು ಆಯಾ ಜಾತಿಗಳಮಗೆ ಅವರವರ ಮತಗ್ರಂಥ ಗಳಿಂದಲೇ ಪ್ರಮಾಣಗಳನ್ನು ತೆಗೆದು ತೋರಿಸುತ್ತಲಿದ್ದುದು ಅಮಗೆ ನಂಬಿಕೆಯುಂಟಾಗುವು ದಕ್ಕೇನೆ ಹೊರತು ತನ್ನ ಮತಕ್ಕೆ ಈ ಗ್ರಂಥಗಳು ಪ್ರಮಾಣವೆಂದು ತಿಳಿಸುವುದಕ್ಕಲ್ಲವು.