೧೩೫ ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ಮತ್ತು ಇತರ ವಸ್ತುಗಳನ್ನು ಪೂಜಿಸದೆ ಪರಮೇಶ್ವರನನ್ನು ಮಾನಸಿಕವಾಗಿಯೇ ಧ್ಯಾನಿ ಬೇಕೆಂಬ ತನ್ನ ಅಭಿಪ್ರಾಯಗಳನ್ನು ಕೇವಲ ಮಾತುಗಳಿಂದಾಗಲಿ, ಇತರ ಮತಗ್ರಂಥಗಳಿಂದ ಎತ್ತಿ ತೆಗೆದ ಉದಾಹರಣೆಗಳನ್ನು ತೋರಿಸಿಯಾಗಿ ಹೇಳಿದರೆ ಪಾಮರರು ಅಂಗೀಕರಿಸಲಾರ ರೆಂದು ತಿಳಿದು ದೇವತೆಗಳ ಹೆಸರನ್ನಿಟ್ಟು ಬೊಂಬೆಗಳನ್ನು ಪೂಜಿಸ ವುದರಿ: ದ ಮುಕ್ತಿಯು ಸಿಕ್ಕಲಾರದೆಂದು ವೇದವೇದಾಂತಗಳೇ ಯಾವ ನಿರಾಕಾರಪರಬ್ರಹ್ಮವನ್ನು ಬೋಧಿಸುತ್ತ ದೆಯೋ ಅದೇ ಉಪಾಸನೆಗೆ ಯೋಗ್ಯವಾದುದೆಂತಲೂ, ಜೀವನಿಗೆ ಮುಕ್ತಿಯನ್ನು ಕೊಡತ ಕದೆಂತಲೂ, ಹಿಂದೂ ಶಾಸ್ತ್ರಾಧಾರಗಳಿಂದ ಹಿಂದುಗಳಿಗೂ, ಹೀಗೆಯೇ ಜೀಸಸ್ ದೇವರ ಮಗನೆಂದೂ, ಪ್ರಜೆಗಳ ಪಾಪಕ್ಕಾಗಿ ಆತನು ಮೃತಿಹೊಂದಿದನೆಂದೂ ಬೈಬಲದಲ್ಲಿ ಎಲ್ಲಿಯ ಹೇಳಲ್ಪಟ್ಟಿಲ್ಲವೆಂತಲೂ, ದೇವ ಪ್ರಾರ್ಥನೆಯೇ ಮನುಷ್ಯನಿಗೆ ಪವಿತ್ರ ಸ್ಥಾನವನ್ನು ಸೇರಿಸುವ ಮಾರ್ಗವೆಂತಲೂ, ಬೈಬಲನ್ನು ತೆಗೆದು ತೋರಿಸಿ ಕ್ರಿಯರಿ ಬೋಧಿಸಿದರು, ಇಷ್ಟು ಮಾತ್ರದಿಂದಲೇ ರಾಮಮೋಹನ್ನು ಒಯಮವಾವಲಂಬಿಯಾಗಿದ್ದನೆಂದು ಭಾವಿಸುವುದು ಯೋಗ್ಯವಲ್ಲ. 8. ಗ್ರಂಥಗಳನ್ನು ಳಿದು ಆತನ ನಡವಳಿಕೆಗಳನ್ನು ಕುರಿತು ಆಲೋಚಿಸೋಣ, ಆತನು ಯಾವಾಗಲೂ ಯಾವ ಮತಗ್ರಂಧವನ್ನಾಗಲಿ ಈಶ್ವರದತ್ಯವೆಂದು ನಂಬಿರಲಿಲ್ಲ, ಪ್ರಾ ರ್ಥನಾ ಮಂದಿರದಲ್ಲಿ ಒಂದು ಕಡೆ ವೇದವೇದಾಂತಗಳ ವ್ಯಾಖ್ಯಾನಗಳನ್ನು ತುಂಬಾ ಪ್ರೇಮ ದಿಂದ ಕೇಳುತ್ತಲೂ ಮತ್ತೊಂದು ಕಡೆ ಕ್ರಿಸ್ತ ಯರ ಬಾಲಕರನ್ನು ಕರೆತಂದು ಕುಳ್ಳಿರಿಸಿ ಅವ ರಿಂದ ದಾವೂದನಿಂದ ರಚಿಸಲ್ಪಟ್ಟ ಭಗವದ್ಭಕ್ತಿಪರಗಳಾಗಿಯೂ ಮನೋಹರಗಳಾಗಿಯೂ ಇರುವ ಆ೦ಗ್ಲೆಯ ಭಾಷೆಯಲ್ಲಿನ ಗೀತಗಳನ್ನು ಕೇಳಿ ಆನಂದಿಸುತ್ತಲೂ ಇದ್ದನು, ಒಂದೊಂ ದುವೇಳೆ ಯೇಸುಕ್ರಿಸ್ತನು ಬೋಧಿಸಿದ ನೀತಿಗಳನ್ನು ಉಪದೇಶಿಸಿದರೂ ತಾನು ಹಿಂದುವಾಗಿ ದ್ದಂತೆಯೇ ಹೇಳುತ್ತಿದ್ದನು. ಪಿತ್ರಾರ್ಜಿತವನ್ನು ಕುರಿತು ನ್ಯಾಯಸ್ಥಾನಗಳಲ್ಲಿ ತಾನು ಹಿಂದುವೆಂದು ವಾದಿಸುತ್ತಿದ್ದುದರಿಂದಲೂ ಇಂಗ್ಲೆಂಡಿಗೆ ಹೋದಮೇಲೆ ಅಲ್ಲಿಯ ಹಿಂದುಗಳ ಆಚರಣೆಗಳನ್ನು ಬಿಡದೆ ನಡೆಸುತ್ತಿದ್ದುದರಿಂದಲೂ ಸತ್ತು ಹೋಗಲಿಕ್ಕೆ ಮುಂಚೆ ಕ್ರಿಸ್ಟಿಯರ ಮತಾಚರಣೆಗಳನ್ನ ನಸುಸಿ ತನ್ನ ಸಮಾಧಿ ಮಾಡಕೂಡಗೆಂದು ಹೇಳಿದ್ದುದರಿಂದಲೂ, ಮರ ಣಾನಂತರ ಆತನ ದೇಹದಲ್ಲಿ ಯಜ್ಯೋಸತಗಳು ಪ್ರತ್ಯಕ್ಷವಾಗಿ ಎಲ್ಲರಿಗೂ ಕಾಣಬರು ವಂತೆ ಇದ್ದದರಿಂದಲೂ ಈತನು ಹಿಂದುವೇ ಎಂದು ಹೇಳಲು ಸಂಶಯವಿಲ್ಲ. ೪, ಈತನ, ಎಲ್ಲ ಮತಗಳಲ್ಲಿಯೂ ಇರುವ ಯೋಗ್ಯವಿಧಿಗಳನ್ನೆಲ್ಲ ಅಂಗೀಕರಿ ಸುತ್ತ ಏಕದೇವಾರಾಧಕನಾಗಿದ್ದನೆಂದು ಹೇಳುವುದಕ್ಕೆ ಆತನಿಂದ ಸ್ಥಾಪಿಸಲ್ಪಟ್ಟ ಬ್ರಹ್ಮಸ ಮಾಜವನ್ನು ಕುರಿತು ಬರೆಯಲ್ಪಟ್ಟ ನಿಣ೯ಯ ಪತ್ರವೇ (ಟ್ರಸ್ಟಡೀಡ) ಸಂಪೂರ್ಣ ಸಾಕ್ಷ್ಯ ವಾಗಿದೆ, ಇದರಲ್ಲಿ ಯಾವ ಯಾವ ಮಾತುಗಳು ಪರಸ್ಪರ ವಿರುದ್ಧಗಳಾಗಿರುವುವೋ ಅವು ಗಳನ್ನು ಅನುಸಂಧಿಸದೆ ಸತ್ವ ಮತಸಮ್ಮತಗಳಾಗಿರುವ ವಿಷಯಗಳನ್ನೇ ಸ್ವೀಕರಿಸಿ ಪರಮೇಶ್ವರ ನನ್ನು ಉಪಾಸನೆ ಮಾಡಬೇಕೆಂದು ಬರೆದಿಟ್ಟನು. ಯಾವುದಾದರೂ ಒಂದು ಪ್ರತ್ಯೇಕ
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೪೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.