ಈ ಪುಟವನ್ನು ಪ್ರಕಟಿಸಲಾಗಿದೆ

೬೮ / ವಾಗರ್ಥ

ಈಗ ತುಂಡು ಸಂವಾದ ಕ್ರಮವಿರುವುದರಿಂದ ಪಾತ್ರಧಾರಿಗಳ ಧೋರಣೆಗಳು ಮುಖ್ಯವಾಗುತ್ತವೆ.

೧೩

ನಟ-ಪಾತ್ರ ಸಂಬಂಧವನ್ನು ಒಬ್ಬ ವ್ಯಕ್ತಿಗೂ, ಅವನ ಪಾತ್ರ ಚಿತ್ರಣಕ್ಕೂ ಇರುವ ಸಂಬಂಧವಾಗಿ ಮಾತ್ರವಲ್ಲ, ಕಲಾವಿದರೊಳಗಿನ ಸಂಬಂಧದ ನೆಲೆಯಲ್ಲೂ ನೋಡಬಹುದು. ಇಲ್ಲಿ ಸೂಕ್ಷ್ಮ ಮನೋ ವೈಜ್ಞಾನಿಕ ಅಂಶಗಳು ಕೆಲಸಮಾಡಿ, ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತವೆ. ಪಾತ್ರಧಾರಿಗಳೊಳಗೆ ಮಾತ್ರವಲ್ಲ, ಹಿಮ್ಮೇಳ-ಅರ್ಥಧಾರಿ ಗಳೊಳಗಿನ ಸಂಬಂಧವೂ ಗಮನಾರ್ಹ.

ಕಲಾವಿದರೊಳಗಿನ ಸಂಬಂಧ-ಸಂಪರ್ಕಗಳು ಪ್ರದರ್ಶನದ ಮೇಲೆ ಒಳ್ಳೆಯ ಅಥವಾ ಕೆಟ್ಟ ಪರಿಣಾಮಗಳೆರಡನ್ನೂ ಬೀರಬಹುದು. ಇಬ್ಬರು ಕಲಾವಿದರೊಳಗೆ ವಿರೋಧಾತ್ಮಕ ಅಥವಾ ಸ್ಪರ್ಧಾತ್ಮಕ ಸಂಬಂಧ ಇದ್ದು ಅವರು ಇದಿರಾಳಿಗಳಾದಾಗ (ಸಹವರ್ತಿ ಪಾತ್ರ ಅಥವಾ ವಿರುದ್ಧ ಪಾತ್ರ) ವಾದ-ಸಂವಾದಗಳು ತುರುಸಿನದಾಗಬಹುದು. ಪ್ರಶೋತ್ತರ ಖಂಡನ ಮಂಡನದಲ್ಲಿ ದಾಕ್ಷಿಣ್ಯವಿರುವುದಿಲ್ಲ. ಇದರಿಂದ ಪ್ರತಿಭೆಗಳ ಘರ್ಷಣೆ ನಡೆದು, ಪ್ರದರ್ಶನಕ್ಕೆ ಕಳೆಯೇರಬಹುದು. ಹೀಗಾದುದಕ್ಕೆ ದೃಷ್ಟಾಂತ ಗಳಿವೆ. ಶೇಣಿ ಅವರು, ಮಲ್ಪೆ ಶಂಕರನಾರಾಯಣ ಸಾಮಗರು ಬಹುಕಾಲ ಒಂದು ಬಗೆಯ ಜಿದ್ದಾಜಿದ್ದಿಯಲ್ಲೇ ರಂಗದಲ್ಲಿ ಜತೆಗಿದ್ದವರು. ಆ ಕಾಲದಲ್ಲಿ ಅವರ ಪಾತ್ರಗಳ ಜತೆಗಾರಿಕೆ- ತಾಳಮದ್ದಳೆ ಕ್ಷೇತ್ರದ ಒಂದು ಪ್ರಮುಖ ಆಕರ್ಷಣೆಯಾಗಿತ್ತು. ಆದರೆ ಇಂತಹ ಸಂದರ್ಭದಲ್ಲಿ ಘರ್ಷಣೆಯು ಕಲಾತ್ಮಕವಾಗದೆ, ವೈಯಕ್ತಿಕತೆಯ ಅತಿಗೆ ಹೋದಾಗ ಆಭಾಸಗಳೂ, ಅನೌಚಿತ್ಯವೂ ಕಂಡುಬಂದು ಪ್ರದರ್ಶನಕ್ಕೆ ಮಾರಕವಾಗು ತ್ತದೆ. ಸಹಪಾತ್ರಗಳೂ ಜಗಳವಾಡುತ್ತವೆ. ಇದಕ್ಕೂ ಅವರಿಬ್ಬರನ್ನೆ ದೃಷ್ಟಾಂತವಾಗಿ ಹೇಳಬಹುದಾದ ಸಂದರ್ಭಗಳುಂಟು.

ಕಲಾವಿದರ ಸಂಬಂಧವು ಸ್ನೇಹಪರವಾಗಿದ್ದಾಗ ಹೊಂದಾಣಿಕೆ ಇರುತ್ತದೆ. ಪ್ರದರ್ಶನದ ಶಿಸ್ತು, ಔಚಿತ್ಯ ಉಳಿಯುತ್ತದೆ. ದೀರ್ಘಕಾಲ ಒಟ್ಟಾಗಿ ಪಾತ್ರವಹಿಸಿದ ಕಲಾವಿದರಿಗೆ, ಒಬ್ಬರ ದಾರಿ ಇನ್ನೊಬ್ಬರಿಗೆ ತಿಳಿದಿದ್ದುದರಿಂದ ಪ್ರಸಂಗ ಪ್ರದರ್ಶನದ ನಡೆ ಸುಗಮವಾಗುತ್ತದೆ. ಆದರೆ, ಇಂತಹ ಹೊಂದಾಣಿಕೆ ಕೂಡ ಅತಿಗೆ ಹೋದಾಗ ಸ್ವಾರಸ್ಯ