೧೨ರ ಪರಿಚ್ಛೇದ ೨ ಸುಖವೂ ಎಂದಿಗೂ ಸಮಗ್ರವಾಗಿ ಲಭ್ಯವಾಗುವುದಿಲ್ಲ, ಆದುದರಿಂದ, ಈ ವಿಷಯಕ್ಕೆ ಸರ್ವರೂ ಸಂಪೂರ್ಣವಾಗಿ ಗಮನ ಕೊಡಬೇಕು. ಪಾಶ್ಚಾತ್ಯರಲ್ಲಿ ಈ ಸಂಕೇತಗಳು ಬಹಳ ಪ್ರಬಲವಾಗಿವೆ. ಯಾರು ಲಕ್ಷ್ಮಣ ವಾದ ಬಂಗಲೆಗಳಲ್ಲಿ ವಾಸಮಾಡುವದಿಲ್ಲವೋ, ಯಾರು ತಮ್ಮ ಬಂಗಲೆ ಗಳಲ್ಲಿ ಕುರ್ಚಿ ಮಜು ಮೊದಲಾದ ಸಾಮಾನುಗಳನ್ನು ಬಹಳಲಕ್ಷಣ ವಾಗಿಟ್ಟು ಕೊಂಡಿರುವುದಿಲ್ಲವೋ, ಯಾರ ಮನೆಗಳಲ್ಲಿ ಒಳ್ಳೆಯ ಪುಸ್ತಕ ಭಂಡಾರಗಳೂ ಮನೋಹರವಾದ ತರುಗಳೂ »ಚಿತ್ರವಾದ ಸಾಮಾನು ಗಳೂ ಇರುವದಿಲ್ಲವೋ, ಯಾರ ಮನೆಯಲ್ಲಿ ಸೇವಕರೂ ಕೂಡ ಲಕ್ಷಣ ವಾಗಿ ಉಡುಗೆಗಳನ್ನು ಹಾಕಿ ಕೊಂಡು ಅತ್ಯಂತ ನಿರ್ಮಲವಾಗಿರುವು ದಿಲ್ಲವೋ ಯಾರ ಬಳೆ ಗಳೂ ಟೋಪಿಗಳೂ ಮೋಚಾಗಳೂ ಹೊಳೆಯು ತಿರುವದಿಲ್ಲವೋ, ಯಾರ ದೇಹವೂ ಬಾಯಿಯ ಹುಟ್ಟುಗಳೂ ನಿರ್ಮಲ ವಾಗಿರುವುದಿಲ್ಲವೋ, ಯಾರ ಭಾಷೆಯು ಪರಿಶುದ್ಧವಾಗಿರುವದಿಲ್ಲವೋ, ಯಾರ ಕರ್ಮಗಳು ಜಘನ್ಯವಾಗಿರುವ ವೋ, ಅವರು ಕನಿಷ್ಟ ವರ್ಣದ ವರೆಂಬುದಾಗಿ ಭಾವಿಸಲ್ಪಡುವರು, ಅವರನ್ನು ಸಂವಹಾರಕ್ಕೂ ಸೇರಿ ಸುವುದಿಲ್ಲ. ಚಾತಿಭೇದಗಳು ಅವರಲ್ಲಿಲ್ಲದಿದ್ದಾಗ್ಯೂ, ಈ ಸಾಚೀನ ವಾದ ಜಾತಿಭೇದವು ಅವರಲ್ಲಿ ವಿಶೇಷವಾಗಿರುವುದು, ಹೊಗೆಯಬತ್ತಿ ಸೇದತಕ್ಕವರನ್ನೂ, ನಿಷಾದ್ರವ್ಯ ಸೇವನೆಮಾಡತಕ್ಕವರನ್ನೂ ಕೂಡ, ಒಳ್ಳೆಯ ಪದವಿಯಲ್ಲಿರತಕ್ಕೆ ದೊಡ್ಡ ಮನುಷ್ಯರೂ ಸ್ತ್ರೀಯರೂ ತಮ್ಮ ಸಹವಾಸಕ್ಕೆ ಸೇರಿಸುವುದಿಲ್ಲ. ಈ ವಿಷಯಗಳಿಗೆ ಭಾರತೀಯರಾದ ನಾವೂ ವಿಶೇಷವಾಗಿ ಗಮನಕೊಡುವದತ್ಯಾವಶ್ಯಕವ. | 16
ಪುಟ:ವಿದ್ಯಾರ್ಥಿ ಕರಭೂಷಣ.djvu/೧೨೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.