ಸತ್ಯಜಿತ್ತು ಚರಿತ್ರೆ. ಅರ್ಜುನ! ಆಗ ಅವರ ದುಃಖವನ್ನು ಯಾರಿಂದತಾನೆ ವರ್ಣಿಸಲಾದೀತು ! ದುಃಖಾ ಕ್ರಾಂತನಾದ ರಾಜನು ಅನೇಕಚಾರರನ್ನು ನಾನಾ ದಿಕ್ಕುಗಳಿಗೂ ಕಳುಹಿಸಿದನು, ಅವರು ಎಲ್ಲೆಲ್ಲಿಯೂ ಹುಡುಕುತ್ತಲಿದ್ದರು, ಇತ್ತಲಾಗಿ ಅಶಾರೂಢನಾಗಿ ಪಯಣವಂ ಮಾಡಿದ ರಾಜಕುಮಾರನಾದರೋ ಉತ್ತರು ಭಿಮುಖವಾಗಿ ಹೊರಟು, ಅಲ್ಲಿ ಸಿಕ್ಕಿದ ಅರಣ್ಯಕ್ಕೆ ಧೈಯ್ಯದಿಂದ ನುಗ್ಗಿ ಅಲ್ಲ ಭಯಂಕರವಾಗಿ ಧ್ವನಿಮಾಡುವ ದುಷ್ಟ ಮೃಗಗಳನ್ನು ಓಡಿಸುತ್ತ, ಎ ದುರುಬೀಳುವ ಕಾಡು ಮೃಗಗಳನ್ನು ಕತ್ತರಿಸಿ ನೆಲಕ್ಕೆ ಉರುಳಿಸುತ್ತ, ಇರ್ಕಡೆಗಳಲ್ಲಿಯೂ ಇರುವ ವೃಕ್ಷಗಳಲ್ಲಿನ ಹಣ್ಣುಗಳನ್ನು ಮನದಣಿಯೆ ತಿಂದು, ಸುಪಷ್ಟಗಳನ್ನು ಆಘ್ರಾಣಿಸಿ, ವನಶೃಂಗಾರವನ್ನು ಎವೆಯಿಕ್ಕದೆ ನೋಡಿನೋಡಿ, ಅಲ್ಲಲ್ಲಿ ಸಿಕ್ಕುವ ದಿವ್ಯ ಸರಸ್ಸುಗಳ ತಿಳಿನೀರನ್ನು ಕು ಡಿದು ದಾಹವನ್ನ ಡಗಿಸಿಕೊಂಡು ಮುಂದಮುಂದಕ್ಕೆ ಹೋಗುತ್ತಿರುವಲ್ಲಿ ಎದುರುಕಡೆ ಒಂದು ಉದ್ಯಾನವನವು ಕಾಣಿಸಿತು. ಅರ್ಜುನಾ, ಆ ಉದ್ಯಾ ನವನವನ್ನು ಏನೆಂದು ವರ್ಣಿಸಲಿ; ಇಂದ್ರನ ಉದ್ಯಾನವನದ ಸೊಬಗನ್ನ ಲಗಳೆಯುತ್ತಿದ್ದ ಇದರ ಸುತ್ತಲೂ ದಾವಲಸಾಧ್ಯವಾದ ಬೇಲಿಮಿತ್ತಲ್ಲದೆ ಉದ್ಯಾನದ ಬಾಗಿಲನ್ನೂ ಕೂಡ ಹಾಕಿಬಿಟ್ಟಿತ್ತು. ಸತ್ಯಜಿತ್ತು ಮಹಾರಾ ಯನಾದರೂ ಸ್ವಲ್ಪವೂ ಹೆದರದೆ ತಾನು ಹತ್ತಿದ್ದ ಕುದುರೆಯನ್ನು ಪಕ್ಕ ದಲ್ಲಿದ್ದ ಒಂದು ಮರಕ್ಕೆ ಬಿಗಿದು, ಆ ಕುದುರೆಯ ಮೇಲೆ ನಿಂತು ಅಲ್ಲಿಂದ ತೋಟದೊಳಗಡೆಗೆ ಕುಪ್ಪಳಿಸಿ ಮುಂದೆ ಹೋಗುತ್ತಿರುವಲ್ಲಿ, ಸುವಾಸನೆ ಯನ್ನು ಬೀರುತ್ತಿರುವ ವಿಧವಿಧವಾದ ವೃಕ್ಷಿಗಳೂ, ಲತೆಗಳೂ ಕಂಗೊ ಸುತ್ತಿದ್ದ ಸೊಬಗನ್ನು ನೋಡಿ ನೇತಾನಂದವನ್ನು ಪಡೆಯುತ್ತಾ ಮುಂ ದೆ ಹೋಗುತ್ತಿರಲು, ಕಮಲಗಳ ಕಾಂತಿಯಿಂದ ಕೂಡಿರುವ ಸ್ಪಟಿಕಲೆ .ಸೋಪಾನಗಳುಳ್ಳ ಸಚ್ಛವಾದ ತಿಳಿನೀರಿನಿಂದ ಕೂಡಿರುವ ಸರೋವರ ವೊಂದು ಕಾಣಿಸಿತು. ಸತ್ಯಜಿತ್ತುವು ಆ ಸರೋವರದೊಳಕ್ಕಿಳಿದು ಸ್ನಾನ ವನ್ನು ಮಾಡಿ, ದಾಹವನ್ನು ಅಡಗಿಸಿಕೊಂಡ ಬಳಿಕ, ಮೇಲಕ್ಕೆದ್ದು ಬಂದು ಸಮೀಪದಲ್ಲಿದ್ದ ಒಂದು ಮಾವಿನ ಮರದ ಬುಡದಲ್ಲಿ ಕುಳಿತು, ಆ ವನದ ಸೌಂದರವನ್ನು ಬಣ್ಣಿಸುತ್ತಿದ್ದನು. ಹೀಗಿರುವಲ್ಲಿ ಸಮೀಪದಲ್ಲಿಯೇ ಸಿ ಯರ ಧನಿಯು ಕೇಳಿಸಿತು. ಸತ್ಯಜಿತ್ತುವು ಓಹೋ! ಇದು ಸ್ತ್ರೀಯರು ಜಲಕ್ರೀಡೆಯನ್ನಾ ಡುವ ಸರಸ್ಸಿರಬಹುದೆಂದು ತೋರುವುದು ಈಗ ನಾ ನು ಇಲ್ಲಿರುವುದು ಸರಿಯಲ್ಲವೆಂದು ಭಾವಿಸಿ ಕೂಡಲೆ ಆ ಮಾವಿನ ಮರದ ಮೇಲೆ ಹತ್ತಿ ಮರೆಯಾಗಿ ಕುಳಿತು ನೋಡುತ್ತಿದ್ದನು. ಅಷ್ಟು ಹೊತ್ತಿಗೆ ಆ ಕನ್ನಿಕೆಯರೆಲ್ಲಾ ಪಲ್ಲಕ್ಕಿ ಸಮೇತ ಸರೋವರದ ಬಳಿಗೆ ಬಂದು ಪಲ್ಲ ಇ .೨.೨. ೧ ೧೧೧, ೧೧-ಹ೨ ತಿದ್ದುವ ಗಾಒಕವಿ ಜೆಯುವ ಕುರಿತು
ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.