ತೃತೀಯಾಂಕಂ. ನಾರದಂ-(ಪತನ ಕೈಯನ್ನು ಹಿಡಿದು) ಮಿತ್ರನೆ ! ಈ ವನಸನ್ನಿವೇಶ ವನ್ನು ನೋಡಿದೆಯಾ ? ಇದು ಎಂತಹ ವಿರಕ್ತರಿಗೂ ವಿಷಯಾ ಭಿಲಾಷೆಯನ್ನು ಹುಟ್ಟಿಸುವಂತಿರುವುದು ನೋಡು ! ಪಕ್ವತಂ-ಹೌದು ! ಇಲ್ಲಿಗೆ ಕಾಲಿಡುವಾಗಲೇ ನನ್ನ ಮನಸ್ಸಿಗೂ ಏನೋ ಒಂದುವಿಧವಾದ ವಿಕಾರವು ತೋರುತ್ತಿರುವುದು. ನಾರದಂ-ಇದುವರೆಗೆ ನನ್ನ ಮನಸ್ಸಿಗೆ ಕೇವಲ ಅಸಹ್ಯವಾಗಿ ತೋರುತ್ತಿದ್ದ ಈ ಭೋಗಸಾಮಗ್ರಿಗಳೆಲ್ಲವೂ, ಇಲ್ಲಿ ಪ್ರಿಯವಾಗಿ ತೋರುತ್ತಿರು ವುವಲ್ಲಾ ! ಇದೇನಾಶ್ಚರವು! ಪಕ್ವತಂ-ಈ ಕಾರಣದಿಂದಲ್ಲವೇ ವಿರಕ್ತರಾದ ಯೋಗಿಗಳು, ಇಂತಹ ಭೋಗಸ್ಥಾನಗಳನ್ನು ಕಣ್ಣೆತ್ತಿಯೂ ನೋಡದೆ, ನಿರ್ಜನವಾದ ಕಾಡಿನಲ್ಲಿದ್ದು ಕಾಲವನ್ನು ಕಳೆಯುತ್ತಿರುವರು. ನಾರದಂ-ಹೌದು ! ನಿಜವೆ! ಈ ಉದ್ಯಾನದ ಒಂದೊಂದು ಸನ್ನಿವೇಶವೂ ಮನಸ್ಸನ್ನಾಕರ್ಷಿಸುತ್ತಿರುವುದು. ರಾಗ - ಕೇದಾರ - ರೂಪಕತಾಳ ಅಂದಮಾಗಿ/ತೊರ್ಪ್ಪದೀವನವು 1 ನೆರೆ ನೋಡು ನೋಡು ನೀ 11 ನಂದ | ಅಂದಮಾದಳಿ | ವೃಂದುಝೇಂಕೃತಿ | ಯಿಂದ ಮೊಪ್ಪುವದೀ | ವರ | ಸುಂದರೀವದ | ನೇಂದುಬಿಂಬದೊ | ಲಂದ ಮಾದರ | ವಿಂದಬೃಂದದಿ || ನಂದ | ೧ | ಶೀತ (ಲಾಂಬುಸ | ಮೇತಮಾಗಿಹ | ವಾತ|ವೀಜನದಿಂ! ಪರಿ! ಧೂತ ಮಾಗಿಹ | ಕೇತಕೀಸುವ | ವಾತದಿಂದತಿ! ರಮ್ಯಮಾದುದು||೨ | ಪಾರಿಜಾತದ | ಸೌರಭಂಗಳ | ಸಾರಮೀ ವನದೊಳ€ ಮಿತಿ | ಮೀರಿ|ಸೌಖ್ಯವ | ನೀರ]ರೆದೆಗೆ || ಬೀರುವಂತಿರೆ | ತೋರುತಿಪ್ಪುದು || ಅಂದ || ೩|| ಪರ್ವತಂ-ಮಿತ್ರನೆ ! ನೀನು ಹೇಳಿದುದು ನಿಜ ! ಇಂತಹ ವಿದ್ಯಾ ನಗಳಲ್ಲಿ ವಿಹರಿಸತಕ್ಕ ಸಂಸಾರಿಗಳೇ ಭಾಗ್ಯಶಾಲಿಗಳೆಂದು ತೋ ರುತ್ತಿರುವುದು.
ಪುಟ:ಶ್ರೀಮತೀ ಪರಿಣಯ ನಾಟಕಂ.djvu/೪೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.